ಕೊಲ್ಹಾರ: ಪ್ರಸ್ತುತ ವಿಶ್ವದಾದ್ಯಂತ ಮಹಿಳೆಯರು ಸಾಮಾಜೀಕ, ರಾಜಕೀಯ, ಆರ್ಥಿಕ ಕ್ಷೇತ್ರಗಳಲ್ಲಿ ಹೆಸರು ಮಾಡುವ ಮೂಲಕ ವಿಶ್ವದ ಬೆಳವಣಿಗೆಗೆ ತನ್ನದೇ ಆದಂತಹ ಕೊಡುಗೆ ನೀಡುತ್ತಿದ್ದಾರೆ ಎಂದು ಭ್ರಹ್ಮಕುಮಾರಿ ವಿಶ್ವವಿದ್ಯಾಲಯದ ಮೇಲ್ವಿಚಾರಕಿ ಕುಮಾರಿ ಭಾವನಾ ಹೇಳಿದರು.
ಪಟ್ಟಣದ ಆಕ್ಸ್ಫರ್ಡ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿ ಅವರು ಮಾತನಾಡಿದರು ಪುರುಷರಿಗೆ ಸರಿಸಮನಾಗಿ ಸಮಾಜದಲ್ಲಿ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರಗಳಲ್ಲೂ ಸಾದನೆ ಮಾಡುವ ಮೂಲಕ ಪುರುಷರಿಗೆ ಸರಿಸಮನಾಗಿ ನಿಂತಿದ್ದಾರೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಶಾಲೆಯಲ್ಲಿ ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು.
ವೇದಿಕೆಯ ಮೇಲೆ ಖಾಜಾಮುನ್ನಾಬೇಗಂ, ಮಾಜಿ ಗ್ರಾ.ಪಂ ಸದಸ್ಯೆ ಶ್ರೀಮತಿ ಹಜರತಮಾ ಪಕಾಲಿ, ಪ ಪಂ ಸದಸ್ಯರಾದ ಶ್ರೀಮತಿ ಆಕೇರಾ ಕಂಕರಪೀರ, ಗೌಸಿಯಾಬೇಗಂ ಪಕಾಲಿ ಇತರರು ಉಪಸ್ಥಿತರಿದ್ದರು. ಸಂಗಮ್ಮ ಮಠ ನಿರೂಪಿಸಿ ವಂದಿಸಿದರು. ಕಾವೇರಿ ಯಡಹಳ್ಳಿ ಸ್ವಾಗತಿಸಿದರು.