ಕೊಲ್ಹಾರ: ದೇಶದಲ್ಲಿನ 18 ವರ್ಷ ತುಂಬಿದ ಪ್ರತಿ ಪ್ರಜೆಯೂ ಮತದಾನದ ಹಕ್ಕು ಪಡೆಯಬೇಕು ಎಲ್ಲರೂ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾ ಯಿಸಿಕೊಳ್ಳಬೇಕು ಎಂದು ಸಮಾಜ ಸೇವಕ, ಅಸ್ಸಫಾ ಟ್ರಸ್ಟ್ ಅಧ್ಯಕ್ಷ ಚಾಂದ ಗಿರಗಾಂವಿ ಹೇಳಿದರು.
ಪಟ್ಟಣದ ಅಸ್ಸಫಾ ಟ್ರಸ್ಟಿನ ವತಿಯಿಂದ ಮತದಾರರ ನೋಂದಣಿ ವಿಶೇಷ ಜಾಗೃತಿ ಹಮ್ಮಿಕೊಂಡು ಅವರು ಮಾತನಾಡಿದರು ಪ್ರಜಾಪ್ರಭುತ್ವ ರಾಷ್ಟ್ರ ವಾಗಿ ಭಾರತವನ್ನು ಚುನಾವಣೆಯ ತಳಹದಿಯ ಮೇಲೆ ಕಟ್ಟಲಾಗಿದೆ. ಮತದಾನದ ಹಕ್ಕು ಕೇವಲ ಸವಲತ್ತು ಅಲ್ಲ. ಅದೊಂದು ಮತದಾರರ ಮೂಲ ಭೂತ ಹಕ್ಕಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಟ್ರಸ್ಟಿನ ಪದಾಧಿಕಾರಿಗಳು ಹಾಗೂ ಪಟ್ಟಣದ ಪ್ರಮುಖರು ಇದ್ದರು.