Sunday, 15th December 2024

ಆಟೋಮೊಬೈಲ್ ಕ್ಷೇತ್ರದಲ್ಲಿ ಮಹಿಳೆಯರ ಪಾದಾರ್ಪಣೆ

ರಾಮನಗರ: ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲು ಟೊಯೋಟಾ ಕಿರ್ಲೋಸ್ಕರ್ ಸಂಸ್ಥೆ ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ ಎಂದು ಟಿಕೆಎಂನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಹಾಗೂ ನಿರ್ದೇಶಕ ರಾದ ಜಿ.ಶಂಕರ ಅವರು ಹೇಳಿದರು.

ಬುಧವಾರ ಬಿಡದಿಯ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಉತ್ಪಾದನಾ ಘಟಕದಲ್ಲಿ ಹಮ್ಮಿ ಕೊಳ್ಳಲಾಗಿದ್ದ ಮಹಿಳಾ ದಿನಾಚರಣೆ ಹಾಗೂ ಸ್ಕಿಲ್ ಫೆಸ್ಟಿವಲ್ ಸಮಾರಂಭದಲ್ಲಿ ಅವರು ಮಾತನಾಡಿದರು.

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳಕ್ಕೆ ಬದ್ಧವಾಗಿದೆ. ಆಟೋಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಲಿಂಗ ವೈವಿಧ್ಯತೆ ಸಂಸ್ಕೃತಿಗೆ ಉತ್ತೇಜನ ನೀಡಲಾಗುತ್ತಿದೆ. “ಸ್ಕಿಲ್ ಇಂಡಿಯಾ ಮಿಷನ್” ನ ದೊಡ್ಡ ಗುರಿಗೆ ಕೊಡುಗೆ ನೀಡುವ ಮೂಲಕ ಕಂಪನಿಯು ಮಹಿಳೆಯರ ಕೌಶಲ್ಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಅವರ ಸಮಗ್ರ ಅಭಿವೃದ್ಧಿಯನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ನೂತನ ಕಾರ್ಯಕ್ರಮಗಳ ಸರಣಿಯನ್ನು ಜಾರಿಗೆ ತರುತ್ತಿದೆ ಎಂದರು. ಟಿಕೆಎಂನಲ್ಲಿ ಹೆಚ್ಚು ನುರಿತ, ವೈವಿಧ್ಯಮಯ ಮತ್ತು ಜಾಗತಿಕವಾಗಿ ಸ್ಪರ್ಧಾತ್ಮಕ ಕಾರ್ಯಪಡೆಯೊಂದಿಗೆ ಭಾರತೀಯ ವಾಹನ ಉದ್ಯಮವನ್ನು ಬಲಪಡಿಸಲು ಸಕಾರಾತ್ಮಕ ಕೊಡುಗೆ ನೀಡಲು ಬದ್ಧರಾಗಿದ್ದೇವೆ. ನಮ್ಮ ಹೊಸ ಮಹಿಳಾ ತಂಡದ ಸದಸ್ಯರು ಮತ್ತು ನಾಯಕರನ್ನು ಉತ್ಪಾದನಾ ಸಾಲಿಗೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ. ನಮ್ಮ ಈ ಪ್ರಯತ್ನ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಮಹಿಳೆಯರಿಗೆ ಅವಕಾಶಗಳನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಟಿಕೆಎಂ ತನ್ನ ಉತ್ಪಾದನಾ ಕಾರ್ಯಾಚರಣೆಗೆ 124 ಮಹಿಳಾ ಉದ್ಯೋಗಿಗಳು ಮತ್ತು ಮತ್ತು 55 ಮಹಿಳಾ ಟೀಮ್ ಲೀಡರ್ ಗಳನ್ನು ಸೇರ್ಪಡೆಗೊಳಿಸಲಾಯಿತು.ಕಂಪನಿಯ ಕಾರ್ಯಾಚರಣೆಗಳನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಲಿದ್ದಾರೆ.

ಟಿಕೆಎಂ ಮಹಿಳಾ ಸದಸ್ಯರಿಗೆ ಕೌಶಲ್ಯ ಸ್ಪರ್ಧೆಯನ್ನು ಸಹ ಆಯೋಜಿಸಿತ್ತು. ಸ್ಪರ್ಧೆಯು ವೈವಿಧ್ಯಮ ಯ ಕೌಶಲ್ಯ ವಿಭಾಗಗಳನ್ನು ಒಳಗೊಂಡಿತ್ತು, ಭಾಗವಹಿಸುವವರಿಗೆ ವಿವಿಧ ಉತ್ಪಾದನಾ ಪ್ರಕ್ರಿಯೆ ಗಳಲ್ಲಿ ತಮ್ಮ ಪರಿಣತಿಯನ್ನು ಪ್ರದರ್ಶಿಸಲು ಅನುವು ಮಾಡಿಕೊಟ್ಟಿದೆ. ಟೊಯೊಟಾ ಇಂಡಿಯಾದ ಉದ್ಯಮ ತಜ್ಞರ ಸಮಿತಿಯು ಸಮಸ್ಯೆ ಪರಿಹಾರ, ಸೃಜನಶೀಲತೆ ಮತ್ತು ತಾಂತ್ರಿಕ ಕೌಶಲ್ಯದಂತಹ ಮಾನದಂಡಗಳ ಆಧಾರದ ಮೇಲೆ ಭಾಗವಹಿಸುವ ವರನ್ನು ಮೌಲ್ಯಮಾಪನ ಮಾಡಿದ್ದಾರೆ. ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಲಾಯಿತು.

ಇತ್ತೀಚೆಗೆ ಬಿಡದಿಯಲ್ಲಿ ತನ್ನ ಟೊಯೋಟಾ ತಾಂತ್ರಿಕ ತರಬೇತಿ ಸಂಸ್ಥೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದು, ಇದರಿಂದ ದಾಖಲಾತಿ ಸಾಮರ್ಥ್ಯ 600 ರಿಂದ 1200 ಕ್ಕೆ ದ್ವಿಗುಣಗೊಳ್ಳಲಿದೆ. ಇದರಲ್ಲಿ 600 ಮಹಿಳಾ ವಿದ್ಯಾರ್ಥಿಗಳು ಸೇರಿದ್ದಾರೆ. ಆರ್ಥಿಕವಾಗಿ ಸವಾಲಿನ ಹಿನ್ನೆಲೆಯ ಮತ್ತು ಕರ್ನಾಟಕದ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳಿಗೆ ಅವಕಾಶಗಳನ್ನು ಒದಗಿಸುತ್ತದೆ. ತನ್ನ ವಿಸ್ತರಣೆಯ ಪ್ರಮುಖ ಅಂಶವಾಗಿ ಲಿಂಗ ವೈವಿಧ್ಯತೆಯನ್ನು ಹೆಚ್ಚಿಸುವತ್ತ ದೃಢವಾದ ಗಮನವನ್ನು ಹೊಂದಿದೆ.

ಟಿಟಿಟಿಐ ಮೂಲಕ ಟಿಕೆಎಂ ಆರ್ಥಿಕವಾಗಿ ಸವಾಲಿನ ಹಿನ್ನೆಲೆ ಮತ್ತು ಗ್ರಾಮೀಣ ಪ್ರದೇಶಗಳ ಮಹಿಳಾ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತದೆ. ಮಹಿಳಾ ವಿದ್ಯಾರ್ಥಿಗಳಿಗೆ ಸುಧಾರಿತ ವಸತಿ ಸೌಲಭ್ಯಗಳು, ಹೊಸ ತರಗತಿ ಕೊಠಡಿಗಳು ಮತ್ತು ಕೌಶಲ್ಯ ತರಬೇತಿಯನ್ನು ಹೆಚ್ಚಿಸಲು ನವೀಕರಿಸಿದ ಉಪಕರಣಗಳೊಂದಿಗೆ ಮೂಲಸೌಕರ್ಯವನ್ನು ನವೀಕರಿಸಿದೆ.

ಕಾರ್ಯಕ್ರಮದಲ್ಲಿ ಟಿಕೆಎಂ ಡಿಇಐ ಮ್ಯಾನುಯಲ್ ಅನ್ನು ಬಿಡುಗಡೆ ಮಾಡಲಾಯಿತು. ಸಿ&ಐ ಆಯುಕ್ತರಾದ ಗುಂಜನ್ ಕೃಷ್ಣ ಐಎಎಸ್, ಸಂಸ್ಥೆಯ ಹಿರಿಯ ಅಧಿಕಾರಿಗಳಾದ ಸುದೀಪ್ ಎಸ್ ದಾಲ್ವಿ, ಸ್ವಪ್ನೇಷ್ ಆರ್ ಮಾರು ಸೇರಿದಂತೆ ಹಲವರು ಉಪಸ್ಥಿತರಿದ್ದರು