Thursday, 19th September 2024

ರಾಜ್ಯಸಭೆಯಿಂದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ನಿವೃತ್ತಿ

ವದೆಹಲಿ : ಭಾರತದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡಿದ ಭಾರತ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರು 33 ವರ್ಷಗಳ ನಂತರ ರಾಜ್ಯಸಭೆಯಿಂದ ನಿವೃತ್ತರಾದರು.

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಬುಧವಾರ ರಾಜ್ಯಸಭೆಯಲ್ಲಿ ತಮ್ಮ 33 ವರ್ಷಗಳ ಸುದೀರ್ಘ ಸಂಸದೀಯ ರಾಜಕೀಯ ಪಯಣಕ್ಕೆ ಅಂತ್ಯ ಹಾಡಿದರು.

ಇವರ ಜೊತೆ ಒಂಬತ್ತು ಕೇಂದ್ರ ಸಚಿವರು ಮತ್ತು 44 ಇತರರು ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮೇಲ್ಮನೆ ಅಧಿಕಾರಾವಧಿ ಯನ್ನು ಕೊನೆಗೊಳಿಸಿದ್ದಾರೆ.

ದಿಟ್ಟ ಆರ್ಥಿಕ ಸುಧಾರಣೆಗಳಿಗೆ ಹೆಸರುವಾಸಿಯಾದ 91 ವರ್ಷದ ಸಿಂಗ್ ಅವರು ಮೊದಲ ಬಾರಿಗೆ ಅಕ್ಟೋಬರ್ 1991 ರಲ್ಲಿ ಮೇಲ್ಮನೆಯ ಸದಸ್ಯರಾದರು. ಪಕ್ಷದ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮೊದಲ ಬಾರಿಗೆ ರಾಜ್ಯಸಭೆಗೆ ಪ್ರವೇಶಿಸುವ ಸಮಯದಲ್ಲಿ ಸಿಂಗ್ ಅವರ ನಿರ್ಗಮನವಾಗಿದೆ. ಮಾಜಿ ಪ್ರಧಾನಿಯವರ ಅಧಿಕಾರಾವಧಿ ಪೂರ್ಣಗೊಂಡ ನಂತರ ತೆರವಾಗಿರುವ ರಾಜ್ಯಸಭಾ ಸ್ಥಾನವನ್ನು ಅವರು ತುಂಬಲಿದ್ದಾರೆ.

ಸಿಂಗ್ ಅವರು ಮೊದಲು ನರಸಿಂಹರಾವ್ ಸರ್ಕಾರದಲ್ಲಿ (1991-1996) ಹಣಕಾಸು ಸಚಿವರಾಗಿ ಮತ್ತು ನಂತರ ಭಾರತದ ಪ್ರಧಾನ ಮಂತ್ರಿಯಾಗಿ (2004 -2024) ಸೇವೆ ಸಲ್ಲಿಸಿದರು.

Leave a Reply

Your email address will not be published. Required fields are marked *