ಸ್ಮರಣೆ
ರಾಧಾ ಟೇಕಲ್
ಇಂದು ಸಾಹಿತಿ ದಿ. ಸಿದ್ದವನಹಳ್ಳಿ ಕೃಷ್ಣಶರ್ಮರ ೪೭ನೆಯ ಪುಣ್ಯಸ್ಮರಣೆ. ಈ ಸಂದರ್ಭದಲ್ಲಿ ಶ್ರೀಯುತರ ಪುತ್ರಿ ರಾಧಾ ಟೇಕಲ್ ಬರೆದಿರುವ ವಿಶೇಷ ಲೇಖನ.
ದೊಡ್ಡಸಿದ್ದವನಹಳ್ಳಿಯ ಶ್ರೀರಂಗಾಚಾರ್ಲು ಮತ್ತು ಶೇಷಮ್ಮನವರ ಮೂರನೆಯ ಮಗ ಕೃಷ್ಣಶರ್ಮ. ಚಿಕ್ಕಂದಿನಿಂದಲೇ ಸಾಹಿತ್ಯದ ಕಡೆ ಸೆಳೆತ. ಶಾಲೆಯಲ್ಲಿ ಅತ್ಯಂತ ಚುರುಕು. ಪಾಠ ಒಂದು ಸಲ ಕೇಳಿಸಿಕೊಂಡರೆ ಸಾಕು. ಅದನ್ನೊಪ್ಪಿಸುವ ರೀತಿಗೆ ಗುರುಗಳು ತಲೆದೂಗುತ್ತಿದ್ದರಂತೆ. ಇಂಥದೇ ಪ್ರಶ್ನೆ ಹಾಕುವರೇನೋ ಎಂದು ಊಹಿಸಿದಂತೆ ಉತ್ತರ ಥಟ್ಟನೆ ಕೊಡುತ್ತಿದ್ದರಂತೆ. ಒಮ್ಮೆ ಅವರ ಶಾಲೆಗೆ ಹಿರಿಯ ವಿದ್ಯಾಧಿಕಾರಿಗಳು ಬಂದರು.
ಶರ್ಮಾಜಿ ಅವರ ಸರದಿ ಬಂದಾಗ, ಶಿಕ್ಷಕರೂ ಬೆರಗಾಗುವಂತೆ, ಅಂದಿನ ಅಽಕಾರಿ ಸಿ. ರಾಮಲಿಂಗರೆಡ್ಡಿಯವರ ಮೇಲೆ ಆಗಿಂದಾ ಗಲೇ ನಾಲ್ಕು ಸಾಲಿನ ಒಂದು ಪದ್ಯ ಛಂದೋ ಬದ್ಧವಾಗಿ ರಚಿಸಿದರಂತೆ. ಕೊನೆಯ ಸಾಲು ಹೀಗಿತ್ತೆಂದು ನೆನಪು ಮಾಡಿಕೊಂಡ ದ್ದು – ನೀರೇಜಾಕ್ಷರ ಮಾಧವಂ ಪೊರೆಯ ತಾಂ ಶ್ರೀ ರಾಮಲಿಂಗಾಯನಂ ಎಂದು ಅವರಿಗೇ ಸಮರ್ಪಿತ! ಇದು ಅಲ್ಲಿದ್ದ ಗುರು ಗಳಿಗೂ ಅನಿರೀಕ್ಷಿತ! ಅವಾಕ್ಕಾದರೂ ರಾಮಲಿಂಗರೆಡ್ಡಿಯವರು! ಅದೆಷ್ಟು ಶಾಲೆಗಳಿಗೆ ಭೇಟಿ ಕೊಟ್ಟಿದ್ದರೂ, ಯಾರೂ ಈ ರೀತಿ ಒಂದು ಸಣ್ಣ ಪದ್ಯ ಹೆಣೆದು ಅವರಿಗೆ ಕೊಟ್ಟಿದ್ದಿಲ್ಲ. ಭೇಷ್! ಅಂತ ಬೆನ್ನು ತಟ್ಟಿ, ತಮ್ಮ ಜೇಬಿನಲ್ಲಿದ್ದ ಪೆನ್ ಕೊಟ್ಟರು.
ಚಿತ್ರದುರ್ಗದಲ್ಲಿ ಕಾಲೇಜ್ ಬಂದಿರಲಿಲ್ಲವಾಗಿ ಮೈಸೂರಿಗೆ ಓದಲೆಂದು ಬಂದವರು ಸ್ವಾತಂತ್ರ್ಯದ ಬಿಸಿಯ ಮುಂದೆ, ಓದು ಪಕ್ಕ ಕ್ಕಿಟ್ಟರು. ತಂದೆ-ತಾಯಿಯ ಆಸೆಯಂತೆ ತಾನೂ ಓದಿ ಲಾಯರ್ ಆಗಬೇಕೆಂದು ಬಂದವರು, ತಮಗೇ ತಿಳಿಯದಂತೆ ನಾಡು, ರಾಷ್ಟ್ರ ಪ್ರೇಮದ ಸೆಳೆತಕ್ಕೆ ಒಳಗಾದರು. ನಾನು, ನನ್ನದು ಎಂಬ ಸ್ವಂತ ಯೋಚನೆಯನ್ನು ಬಿಟ್ಟು, ನಮ್ಮ ರಾಜ್ಯ, ನಮ್ಮ ದೇಶ ಸ್ವಾತಂತ್ರ್ಯ ಪಡೆಯಬೇಕು. ಬ್ರಿಟಿಷರ ದಬ್ಬಾಳಿಕೆಯಿಂದ ದೇಶ ಮುಕ್ತವಾಗಬೇಕು ಎಂಬ ಗಾಂಽಯ ಮಾತಿಗೆ, ಸೆಳೆತಕ್ಕೆ ಒಳಗಾದರು. ಸಿದ್ದವನಹಳ್ಳಿ, ಚಿತ್ರದುರ್ಗ ಮಾತ್ರ ಕಂಡಿದ್ದ ಹರೆಯದ ಹುಡುಗ, ಈಗ,ಮೈಸೂರು, ಬೆಂಗಳೂರು, ಧಾರವಾಡ, ಬೆಳಗಾವಿ,
ಗುಲ್ಬರ್ಗ, ರಾಯಚೂರು ಎ ಕಡೆ ನಡೆದಾಡಿದರು.
ಒಮ್ಮೆ ದಾವಣಗೆರೆಯಲ್ಲಿ ಸಾಹಿತ್ಯ ಸಮ್ಮೇಳನ. ಅದಕ್ಕಾಗಿ ಬೆಂಗಳೂರಿನಿಂದ ಶರ್ಮಾಜಿ, ತಳುಕಿನ ವೆಂಕಣ್ಣಯ್ಯ ಹಾಗೂ ಹರಿಹರ
ಗುಂಡೂರಾಯರು, ಮೂವರೂ ಹೊರಟರು. ಇ ಈ ಸಮ್ಮೇಳನದ ಧಾರವಾಡದಿಂದ ಆರ್.ಎ. ಜಾಗಿರ್‌ದಾರ್, ಗುರುನಾಥ್
ಬೇವೂರ್, ದ.ರಾ. ಬೇಂದ್ರೆ, ಶಂ.ಬಾ. ಜೋಶಿ, ಬುರ್ಲಿಬಿಂದು ಮಾಧವ, ಶ್ರೀಧರ ಖಾನೋಳಕರ, ಪ್ರಹ್ಲಾದ ನರೇಗಲ್ಲ, ಚುಳುಕಿ
ಗೋವಿಂದರಾಯರು, ಎಲ್ಲರೂ ಬಂದಿದ್ದರು. ಬೆಂಗಳೂರಿನಿಂದ ನಿಟ್ಟೂರು ಶ್ರೀನಿವಾಸರಾಯರು, ಸಂಪತ್‌ಗಿರಿರಾಯರು ಬಂದಿದ್ದರು.
ಹೀಗಾಗಿತ್ತು ತುಂಗಭದ್ರೆಯ ಪರಿಸರದಲ್ಲಿ ಕಾವೇರಿ-ಕೃಷ್ಣೆಯರ ಸಂಗಮ. ಅಂದರೆ, ಮೈಸೂರು-ಧಾರವಾಡ ಸೀಮೆಯ ಮಿಲನ. ಚೂಟಿಯಾಗಿ ಎರಡೂ ಕಡೆ ಓಡಾಡುತ್ತಾ, ಆತ್ಮೀಯರಾದರು ಶರ್ಮಾಜಿ. ಇಲ್ಲಿ ವಿಚಾರಗೋಷ್ಠಿಯಲ್ಲಿ ಅವರು ಓದಿದ ಲೇಖನವೇ ಧಾರವಾಡಕ್ಕೆ ಮತ್ತಿಷ್ಟು ಹತ್ತಿರವಾಗಲು ಕಾರಣ. ಅವರ ತಲೆಯಲ್ಲಿ ತಮ್ಮ ಮೆಚ್ಚಿನ ಕವಿ ಸರ್ವಜ್ಞನ ಬಗ್ಗೆ ದೀರ್ಘ ಲೇಖನ ಮಂಡಿಸಿದರು. ಈ ಪ್ರಬಂಧದಲ್ಲಿ ತಮಗೆ ಮೆಚ್ಚುಗೆಯಾದ ವ್ಯಕ್ತಿ ಎಂಬ ಹೊಗಳಿಕೆ ಅಷ್ಟೇ ಅಲ್ಲ, ವಿಮರ್ಶೆಯೂ ಇತ್ತು, ಹೊಸ ದೃಷ್ಟಿ ಇತ್ತು. ಅಲ್ಲಿದ್ದ ವಿದ್ವಾನ್, ಪಂಡಿತರಾದಿಯಾಗಿ ಕಿರಿಯರ ಮನಸ್ಸನ್ನೂ ಸೆಳೆದಿತ್ತು. ಒಂದೇ ಘಳಿಗೆಯಲ್ಲಿ ‘ನಾಯಕ’ ಆಗಿ ಬಿಟ್ಟರು! ಅಷ್ಟು ಅದ್ಭುತವಾಗಿತ್ತು!
ಬೇಂದ್ರೆಯವರಿಗೆ ಬಹಳ ಅಚ್ಚುಮೆಚ್ಚು ಆಗಿಬಿಟ್ಟಿದ್ದ ಶರ್ಮಾಜಿಯವರು, ಪ್ರೇಮಾಯತನಕ್ಕೆ ಹೊರಟಾಗ ಅರೆ ಮನಸ್ಸಿನಿಂದಲೇ ಕಳಿಸಿಕೊಟ್ಟಿದ್ದಾರೆ. ಶುಭ ಹಾರೈಕೆಯ ರೂಪದಲ್ಲಿ ಒಂದು ಕವನ ಬರೆದರು. ಅದರ ಒಂದು ಪಲ್ಲವಿ ಹೀಗಿದೆ. ಹರಟೆಯಂದದ ರಗಟೆಯನ್ನು ಹೊತ್ತು ತಿರುಗಿತ್ತುರುವಂತಹ ಮಿತ್ರನು ನೀನು ತಿರುಗಣಿಯ ಮಡುವಿನಲಿ ತಿರುತಿರುಗ ಹತ್ತಿರುವೆ ಹೀಗೆ, ಪರತಂತ್ರ ನೇನು? ಮದುವೆಗೆ ಷರತ್ತು ಹಾಕಿದ್ದರು. ಹುಡುಗಿಗೆ ಸೀರೆ ಯಾವ ರೇಶ್ಮೆಯದೂ ಬೇಡ. ಆಭರಣಗಳು ವಿಪರೀತ ಬೇಡ.
ಖಾದಿ ಸೀರೆಯುಟ್ಟು ಮದುವೆ ಆಗಬೇಕು ಎಂದು. ಪುರೋಹಿತರು ಶ್ಲೋಕ ಹೇಳುತ್ತಿದ್ದರೆ, ಇಪ್ಪತ್ನಾಲ್ಕರ ಹರೆಯದ ಹುಡುಗ ಕೈಯಲ್ಲಿ ಭಗವದ್ಗೀತೆ ಹಿಡಿದು, ತಾಳಿ ಕಟ್ಟಿದರಂತೆ! ೧೯೨೬ರಲ್ಲಿ ಹೈದರಾಬಾದ್‌ಗೆ ನೆಲೆಸಲು ಹೋಗಿ, ಸಂಸಾರದ ಹೊಣೆಗಿಂತ ಕನ್ನಡದ ಜನ ತುಂಬಿರುವ ಹೈದರಾಬಾದಿನಲ್ಲಿ, ಕನ್ನಡವನ್ನು ಉಳಿಸಲು ಅನೇಕ ಸಮಾನ ಮನಸ್ಕರೊಂದಿಗೆ ಕೈ ಜೋಡಿಸಿ, ಕನ್ನಡ ಸಾಹಿತ್ಯ ಮಂದಿರ, ಕನ್ನಡ ಶಾಲೆಗಳು ಬರಲು ಬೆಂಬಲಿಗರಾಗಿ ನಿಂತರು. ಮತಾಂಧರ ದ್ವೇಷದ ದಳ್ಳುರಿ ಆಗ ತಾನೆ ಹತ್ತಿ ಉರಿಯಲು ಪ್ರಾರಂಭಿಸಿದ ಕಾಲದಲ್ಲಿ, ಕಾಂಗ್ರೆಸ್ ಕಮಿಟಿಯೊಂದರ ಸ್ಥಾಪಕರಬ್ಬರಾಗಿ, ಹಗಲಿರಳೂ, ಮನೆಯನ್ನೂ ಮರೆತು ಶ್ರಮಿಸಿದ ಜೀವಿಗೆ ನಿಜಾಂ ಸರಕಾರದಿಂದ ಸಿಕ್ಕಿದ್ದು ‘ಗಡಿಪಾರು’ ಎಂಬ ಬಿನ್ನವತ್ತಳೆ.