ಪ್ರಸ್ತುತ
ಕೆ.ಎಸ್.ನಾಗರಾಜ್
ಕಳೆದ ಹತ್ತು ವರ್ಷದಲ್ಲಿ ಕೇಂದ್ರದಲ್ಲಿನ ಬಿಜೆಪಿ ಸರಕಾರ ಜನರಿಂದ ಹಲವಾರು ರೀತಿಯಲ್ಲಿ ಹಣವನ್ನ ಕಸಿದುಕೊಂಡು ಬಡಜನರನ್ನ ಲೂಟಿ ಮಾಡಿದ್ದಾರೆ. ಇದಕ್ಕೆ ಹತ್ತಾರು ಉದಾಹರಣೆಗಳು ಕೊಡಬಹುದಾಗಿದೆ.
ಮಿನಿಮಮ್ ಬ್ಯಾಲೆನ್ಸ್ ಇಲ್ಲವೆಂಬ ಕಾರಣಕ್ಕೆ ೨೧,೦೦೦ ಕೋಟಿ ರುಪಾಯಿಗಳ ದಂಡವನ್ನ ವಿಧಿಸಿರುವಂತಹ ಕೇಂದ್ರ ಸರಕಾರ ಲೂಟಿಕೋರರಲ್ಲದೆ ಮತ್ತೆ ಯಾರು? ಎಟಿಎಂಗಳಲ್ಲಿ ಹೆಚ್ಚು ಬಾರಿ ಹಣವನ್ನ ತೆಗೆದುಕೊಂಡ ಕಾರಣದಿಂದ ಮತ್ತು ಎಸ್ಎಂಎಸ್ ಬಳಕೆಯ ಕಾರಣದಿಂದ ದೇಶದ ಜನರ ೧೪,೦೦೦ ಕೋಟಿ ರುಪಾಯಿಗಳನ್ನು ದಂಡದ ರೂಪದಲ್ಲಿ ವಸೂಲಿ ಮಾಡಿರುವ ಕೇಂದ್ರ ಸರಕಾರ ಲೂಟಿ ಸರಕಾರವಲ್ಲವೇ? ಪೆಟ್ರೋಲ್ ಡೀಸೆಲ್ ಅಡಿಗೆ ಅನಿಲ ಇವುಗಳ ದರವನ್ನ ಮುಗಿಲೆತ್ತರಕ್ಕೆ ಏರಿಸಿ ಜನರಿಂದ ೩೪ ಲಕ್ಷ ಕೋಟಿ ರುಪಾಯಿಗಳ ಸೆಸ್ ವಸೂಲಿ ಮಾಡಿರುವ ಕೇಂದ್ರ ಸರಕಾರ ಲೂಟಿ ಸರಕಾರ ವಲ್ಲವೇ? ಆಹಾರ ಪದಾರ್ಥಗಳ ಬೆಲೆಯನ್ನ ನಿಯಂತ್ರಿಸಲಾರದೆ ಬಂಡವಾಳ ಶಾಹಿಗಳ ಪರವಾಗಿ ನಿಂತ ಕಾರಣದಿಂದ ಬಡವರು ಆಹಾರ ಪದಾರ್ಥಗಳ ಖರೀದಿಯಲ್ಲಿ ಸಾಕಷ್ಟು ಹಣವನ್ನ ಕಳೆದುಕೊಂಡಿದ್ದಾರೆ ಇದು ಲೂಟಿ ಸರಕಾರವಲ್ಲವೇ? ಸ್ಮಶಾನದಲ್ಲಿ ಹೆಣ ಸುಡುವ ಸೌದೆಯಿಂದ ಹಿಡಿದು ಬಡವರು ಕುಡಿಯುವ ಕಾಫಿ ಟೀ ಪುಟ್ಟ ಮಕ್ಕಳು ಕುಡಿಯುವ ಹಾಲಿನ ಮೇಲೆ ಜಿಎಸ್ಟಿಯನ್ನ ವಿಧಿಸಿ.
ದೇಶದ ಜನರ ಜೇಬಿಗೆ ಕತ್ತರಿ ಹಾಕಿರುವುದು ಲೂಟಿ ಸರಕಾರವಲ್ಲವೇ? ಕರೋನಾ ಸಂದರ್ಭದಲ್ಲಿ ಸೇವೆ ಮಾಡಬೇಕಾದಂತಹ ಸರಕಾರ ಜನರ ಹೆಸರಿನಲ್ಲಿ ಖಜಾನೆ ಹಣವನ್ನ ಲೂಟಿ ಮಾಡಿರುವುದು. ಈ ಸರಕಾರವಲ್ಲವೇ ನಷ್ಟದಲ್ಲಿರುವ ಕಂಪನಿಗಳು, ಮೋಸ ಮಾಡುವ ಕಂಪನಿಗಳು ನಕಲಿ ಔಷಧಿ ನೀಡುವ ಕಂಪನಿಗಳು ಇವರಿಂದ ಸಾವಿರಾರು ಕೋಟಿ ರುಪಾಯಿಗಳ ಹಣವನ್ನ ಬಾಂಡ್ ರೂಪದಲ್ಲಿ ಪಡೆದು ದೇಶದ ಅತಿ ದೊಡ್ಡ ಪಕ್ಷಪಾತ ಮತ್ತು ಭ್ರಷ್ಟಾ ಚಾರದ ಪ್ರಕರಣಕ್ಕೆ ಕಾರಣವಾಗಿರುವವರು ಯಾರು? ಈಡಿ ಐಟಿ ಸಿಬಿಐ ಮುಂತಾದಂತಹ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಹೆದರಿಸಿ ಹಲವಾರು ಶ್ರೀಮಂತರಿಂದ ಪಕ್ಷದ ನಿಧಿ ಎಂದು ಬಾಂಡ್ ರೂಪದಲ್ಲಿ ಹಣವನ್ನ ಪಡೆಯುವುದು ಲೂಟಿ ಸರಕಾರದ ಕಾರ್ಯವೈಖರಿ ಅಲ್ಲವೇ?
ಬಡವರ ಮೇಲೆ ಹೆಚ್ಚು ಹೆಚ್ಚು ತೆರಿಗೆಗಳನ್ನ ವಿಧಿಸುತ್ತಾ ಶ್ರೀಮಂತರ ಕಾರ್ಪೊರೇಟ್ ಕಂಪನಿಗಳ ತೆರಿಗೆಯನ್ನು ಇಳಿಸಿ ಅವರಿಂದ ಅನುಕೂಲವನ್ನು ಪಡೆಯುತ್ತಿರುವ ಈ ಸರಕಾರ ಲೂಟಿ ಸರಕಾರವಲ್ಲವೇ? ಕರ್ನಾಟಕದಿಂದ ನಾಲ್ಕು ಲಕ್ಷ ೩೦,೦೦೦ ಕೋಟಿ ವಿವಿಧ ರೂಪದ ತೆರಿಗೆಯನ್ನು ಪಡೆದು ಕೊಂಡು ಕರ್ನಾಟಕಕ್ಕೆ ಬಿಡಿ ಕಾಸು ನೀಡುವ ಕೇಂದ್ರ ಸರಕಾರ ಕನ್ನಡಿಗರ ಪಾಲಿಗೆ ಲೂಟಿ ಸರಕಾರವಲ್ಲವೇ? ಬರಗಾಲದಲ್ಲಿ ನೆರವು ನೀಡದೆ ಸರ್ವೋಚ್ಚ ನ್ಯಾಯಾಲಯದಿಂದ ಪಾಠ ಮಾಡಿಸಿಕೊಂಡ ಕೇಂದ್ರ ಸರಕಾರ ಕನ್ನಡಿಗರ ವಿರೋಧಿಯಲ್ಲದೆ ಮನುಷ್ಯತ್ವವಿಲ್ಲದ ಸರಕಾರವಲ್ಲವೇ? ೨೦೧೪ ರಲ್ಲಿ ೫೩ ಲಕ್ಷ ಕೋಟಿ ಎಷ್ಟು ಸಾಲವಿದ್ದ ಭಾರತ ದೇಶದ ಸಾಲ ೧೮೩ ಲಕ್ಷ ಕೋಟಿ ರೂಪಾಯಿಗಳಿಗೆ ಏರಿಕೆ ಮಾಡಿ ದೇಶವನ್ನ ಸಾಲಗಾರ ರಾಷ್ಟ್ರವನ್ನಾಗಿಸಿದ ಈ ಸರಕಾರ ಲೂಟಿ ಸರಕಾರವಲ್ಲವೇ? ಕಾರ್ಮಿಕರ ವಿರೋಧಿ, ರೈತ ವಿರೋಧಿ, ಬಡ ಜನ ವಿರೋಧಿ ಕಾನೂನುಗಳನ್ನ ಜಾರಿಗೆ ತಂದು ಅನ್ನದಾತ ರನ್ನ ನಿರ್ಲಕ್ಷಿಸಿ, ೭೮೦ ಜನ ರೈತರ ಸಾವಿಗೆ ಕಾರಣವಾದ ಈ ಸರಕಾರ ಮನುಷ್ಯತ್ವವನ್ನೇ ಕಳೆದುಕೊಂಡಿರುವ ಸರಕಾರವಲ್ಲವೇ ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ಕೇಂದ್ರದ ಬಿಜೆಪಿ ಸರಕಾರ ಜನರಿಂದ ವಸೂಲಿ ಮಾಡಿರುವುದು ಅತಿ ಹೆಚ್ಚು ಜನರಿಗೆ ಕೇವಲ ಯೋಜನೆಗಳನ್ನ ಘೋಷಣೆ ಮಾಡಿ ಅದಕ್ಕೆ ಪ್ರಚಾರವನ್ನು ನೀಡಿ ಜಾಹಿರಾತುಗಳಲ್ಲಿ ಇವರ ಭಾವಚಿತ್ರವನ್ನು ಪ್ರದರ್ಶಿಸಿದ್ದು ಅತಿ ಹೆಚ್ಚು ಜನರಿಗೆ ಯೋಜನೆಗಳಿಂದ ಅನುಕೂಲವಾಯಿತು ಇಲ್ಲವೋ ಆದರೆ ಜಾಹೀರಾತುಗಳ ಮೂಲಕ ಪ್ರಚಾರವನ್ನು ಪಡೆಯುತ್ತಿರುವ ಈ ಸರಕಾರ ಪ್ರಚಾರಪ್ರಿಯ ಸರಕಾರವಲ್ಲವೇ? ಶಿಕ್ಷಣ ದುಬಾರಿಯಾಯಿತು, ಆಸ್ಪತ್ರೆಗಳಲ್ಲಿ ಚಿಕಿತ್ಸೆ ದರವು ದುಬಾರಿಯಾಯಿತು ವಿಮಾನ ಪ್ರಯಾಣ ರೈಲು ಪ್ರಯಾಣ ದುಬಾರಿಯಾಯಿತು ಬದುಕು ದುಷ್ಟರವಾಗಿದೆ ಇಂತಹ
ವಾತಾವರಣವನ್ನ ನಿರ್ಮಾಣ ಮಾಡಿರುವ ಬಡಜನ ವಿರೋಧಿ ಕೇಂದ್ರ ಸರಕಾರ ಬಡಜನರ ಪಾಲಿಗೆ ಲೂಟಿ ಸರಕಾರವಲ್ಲವೇ