ಅಕ್ಲೆಂಡ್: ಜೂನ್ನಲ್ಲಿ ಅಮೆರಿಕ ಹಾಗೂ ಕೆರಿಬಿಯನ್ ಆತಿಥ್ಯದಲ್ಲಿ ನಡೆಯಲಿರುವ ಟಿ-20 ಕ್ರಿಕೆಟ್ ವಿಶ್ವಕಪ್ ಟೂರ್ನಿಗೆ 15 ಆಟಗಾರರ ನ್ಯೂಜಿಲೆಂಡ್ ತಂಡವನ್ನು ಪ್ರಕಟಿಸಲಾಗಿದೆ. ಕೇನ್ ವಿಲಿಯಮ್ಸನ್ ಅವರು ನಾಲ್ಕನೇ ಬಾರಿಗೆ ತಂಡವನ್ನು ಮುನ್ನಡೆಸಲಿದ್ದಾರೆ.
ಡೆವೊನ್ ಕಾನ್ವೆ ಆವರೂ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಕಾನ್ವೆ ಈ ಬಾರಿಯ ಐಪಿಎಲ್ನಿಂದ ಹೊರಗುಳಿದಿದ್ದಾರೆ.
ಬೌಲರ್ ಮ್ಯಾಟ್ ಹೆನ್ರಿ, ಆಲ್ರೌಂಡರ್ ರಚಿನ್ ರವೀಂದ್ರ ಅವರು ಇದೇ ಮೊದಲ ಬಾರಿಗೆ ಟಿ-20 ವಿಶ್ವಕಪ್ ಆಡಲಿದ್ದಾರೆ. ನಾಯಕ ವಿಲಿಯಮ್ಸನ್ ಅವರಿಗೆ ಇದು 6ನೇ, ಟೀಮ್ ಸೌಥಿ ಅವರಿಗೆ 7 ಹಾಗೂ ಟ್ರೆಂಟ್ ಬೌಲ್ಟ್ ಅವರಿಗೆ ಇದು 5ನೇ ಟಿ-20 ವಿಶ್ವಕಪ್.
ತಂಡ ಹೀಗಿದೆ;
ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಟ್ರೆಂಟ್ ಬೌಲ್ಟ್, ಮೈಕೆಲ್ ಬ್ರೇಸ್ವೆಲ್, ಮಾರ್ಕ್ ಚಾಪ್ಮನ್, ಡೆವೊನ್ ಕಾನ್ವೆ, ಲೂಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಡ್ಯಾರಿಲ್ ಮಿಚೆಲ್, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ.