Saturday, 23rd November 2024

ವಾಣಿಜ್ಯ ಸಿಲಿಂಡರ್‌ಗಳ ಬೆಲೆ 19 ರೂ. ಇಳಿಕೆ

ವದೆಹಲಿ: ಜಾಗತಿಕ ತೈಲ ಬೆಲೆ ಕುಸಿತದಿಂದ ಭಾರತದಾದ್ಯಂತ LPG ಸಿಲಿಂಡರ್ ಬೆಲೆ ಇಳಿಕೆಯಾಗಿದೆ. ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಬೆಲೆ ಮೇ 1 ರಿಂದ ಪರಿಷ್ಕರಣೆ ಮಾಡಲಾಗಿದ್ದು, ದರದಲ್ಲಿ 19 ರೂ. ಇಳಿಕೆ ಮಾಡಲಾಗಿದೆ.

ಮೆಟ್ರೋ ನಗರಗಳಾದ ನವದೆಹಲಿ, ಮುಂಬೈ, ಕೋಲ್ಕತ್ತಾ ಮತ್ತು ಚೆನ್ನೈ ಸೇರಿದಂತೆ ದೇಶದಾದ್ಯಂತ 19 ಕಿಲೋಗ್ರಾಂಗಳಷ್ಟು ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ತೈಲ ಮಾರುಕಟ್ಟೆ ಕಂಪನಿಗಳು ಬುಧವಾರ ಕಡಿತಗೊಳಿಸಿವೆ. ಪರಿಷ್ಕೃತ ದರಗಳು ತಕ್ಷಣದಿಂದ ಜಾರಿಗೆ ಬಂದಿದೆ.

ನವದೆಹಲಿಯಲ್ಲಿ ಇಂದಿನಿಂದ ವಾಣಿಜ್ಯ ಸಿಲಿಂಡರ್ ಬೆಲೆ 1,745.50 ರೂ. ಆಗಿದೆ. ಮುಂಬೈನಲ್ಲಿ 1,74917.50 ರೂ. ನಿಂದ 1,698.50 ಕ್ಕೆ ಇಳಿಕೆಯಾಗಿದೆ. ಚೆನ್ನೈನಲ್ಲೂ 19 ರೂ. ಇಳಿಕೆಯಾಗಿದೆ. ಈಗಿನ ಬೆಲೆ 1,930 ರೂ. ಗಳಾಗಿದ್ದು, 1,911 ರೂಪಾಯಿಗೆ ಇಳಿಕೆಯಾಗಿದೆ. ಈ ನಡುವೆ ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,860 ರೂ.ನಿಂದ ಕುಸಿತ ಕಂಡಿದೆ. ಜಾಗತಿಕ ತೈಲ ಬೆಲೆಗಳ ಕುಸಿತದ ಹಿನ್ನೆಲೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆಯಾಗಿದೆ.