ಬೆಂಗಳೂರು: ಪಾರ್ಕಿನ್ಸನ್ ನಿಂದ ಉಂಟಾಗುವ ನರಮಂಡಲದ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಹಾಗೂ ಥೆರಪಿಗಾಗಿ ಬನ್ನೇರುಘಟ್ಟ ಫೋರ್ಟಿಸ್ ಆಸ್ಪತ್ರೆಯಲ್ಲಿ ಪಾಕ್ಸಿನ್ಸನ್ ಮತ್ತು ಡೀಪ್ ಬ್ರೇನ್ ಸ್ಟಿಮುಲೇಷನ್ (ಡಿಬಿಎಸ್) ಎನ್ನುವ ಪ್ರತ್ಯೇಕ ಕ್ಲಿನಿಕ್ ಪ್ರಾರಂಭಿಸಲಾಗಿದೆ.
ನೂತನ ಕ್ಲಿನಿಕ್‌ನನ್ನು ಉದ್ಘಾಟಿಸಿ ಮಾತನಾಡಿದ ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ನಿರ್ದೇಶಕ ಡಾ. ರಾಜಕುಮಾರ್ ದೇಶಪಾಂಡೆ, ಇಂದು ಸಾಕಷ್ಟು ಜನರು ವಯಸ್ಸಾದ ಬಳಿಕ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗುತ್ತಿದ್ದಾರೆ, ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ಈಗಾಗಲೇ ಪರಿಚಯಿಸಿದೆ, ಆದರೆ ಕೆಲವರಿಗೆ ಚಿಕಿತ್ಸೆಗಿಂತ ಹೆಚ್ಚಾಗಿ ಕೆಲವು ದೈಹಿಕ ಅಭ್ಯಾಸಗಳ ಮೂಲಕವೂ ಪಾರ್ಕಿನ್ಸನ್‌ನ ಲಕ್ಷಣಗಳಾದ ಕೈ-ಕಾಲು ನಡುಕ ಇತರೆ ದೈಹಿಕ ಆರೋಗ್ಯವನ್ನು ಸುಧಾರಿಸಲು ಸಾಧ್ಯವಾಗಲಿದೆ. ಇದಕ್ಕಾಗಿಯೇ ಪ್ರತ್ಯೇಕ ಕ್ಲಿನಿಕ್ ತೆರೆದಿದ್ದೇವೆ. ಇದರ ಜೊತೆಗೆ, ಡೀಪ್ ಬ್ರೇನ್ ಸ್ಟಿಮ್ಯುಲೇ ಶನ್ (ಡಿಬಿಎಸ್) ಚಿಕಿತ್ಸೆಯೂ ದೊರೆಯಲಿದೆ. ಡೀಪ್ ಬ್ರೇನ್ ಸ್ಟಿಮ್ಯುಲೇಶನ್ ಪಾರ್ಕಿನ್ಸನ್ ಸಮಸ್ಯೆಗೆ ಚಿಕಿತ್ಸೆಯ ಭಾಗ ಎಂದು ವಿವರಿಸಿದರು.
ಫೋರ್ಟಿಸ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸಾ ವಿಭಾಗದ ಹೆಚ್ಚುವರಿ ನಿರ್ದೇಶಕ ಡಾ.ರಘುರಾಮ್ ಜಿ ಮಾತನಾಡಿ, ಪಾರ್ಕಿನ್ಸನ್ ಕಾಯಿಲೆಯಿಂದ ಕೈ-ಕಾಲುಗಳಲ್ಲಿ ನಡುಕ, ತಲೆಯಲ್ಲಿ ನಡುಕ, ಸ್ನಾಯುಗಳ ಬಿಗಿತ, ಚಲನೆಯ ನಿಧಾನತೆ, ಖಿನ್ನತೆ ಮತ್ತು ಭಾವನಾತ್ಮಕ ಬದಲಾವಣೆಗಳು ಸೇರಿದಂತೆ ಸಾಕಷ್ಟು ಸಮಸ್ಯೆಗಳು ಕಂಡು ಬರುತ್ತವೆ. ಇಂತಹ ಕಾಯಿಲೆಗೆ ಕೆಲವೊಮ್ಮೆ ಚಿಕಿತ್ಸೆಗಿಂತ ಥೆರಪಿ ಮುಖ್ಯವಾಗಲಿದೆ. ಹೀಗಾಗಿ ಡೀಪ್ ಬ್ರೇನ್ ಸ್ಟಿಮುಲೇಷನ್ ಥೆರಪಿಗೆ ಇಲ್ಲಿ ಅವಕಾಶ ನೀಡಲಾಗಿದೆ. ವಯಸ್ಸಾದವರು ಈ ರೀತಿಯ ಕಾಯಿಲೆ ಹೊಂದಿದ್ದರೆ, ಈ ಥೆರಪಿ ತೆಗೆದುಕೊಳ್ಳಬಹುದು. ಈ ಕ್ಲಿನಿಕ್ ವಾರದ ದಿನಗಳಲ್ಲಿ ಬೆಳಿಗ್ಗೆ 9:30 ರಿಂದ ಮಧ್ಯಾಹ್ನ 3:00 ರವರೆಗೆ ತೆರೆದಿರಲಿದೆ. ಇಂದು ಉದ್ಘಾಟನೆಗೊಂಡ ಕ್ಲಿನಿಕ್‌ನಲ್ಲಿ ಮಾನಸಿಕ ಆರೋಗ್ಯ ತಜ್ಞರು ಮತ್ತು ಯೋಗ ತರಬೇತುದಾರರು ಮಾನಸಿಕ ಯೋಗಕ್ಷೇಮ ಮತ್ತು ಯೋಗ ಅಭ್ಯಾಸಗಳ ಕುರಿತು ಸೆಷನ್‌ಗಳನ್ನು ನಡೆಯಲಿದೆ ಎಂದರು.
ಕಾರ್ಯಕ್ರಮದಲ್ಲಿ ರಸ್ತೆಯಲ್ಲಿರುವ ಫೋರ್ಟಿಸ್ ಆಸ್ಪತ್ರೆಯ ನರವಿಜ್ಞಾನದ ಹೆಚ್ಚುವರಿ ನಿರ್ದೇಶಕ ಡಾ.ಗುರುಪ್ರಸಾದ್ ಹೊಸೂರ್ಕರ್, ಫೋರ್ಟಿಸ್ ಹಾಸ್ಪಿಟಲ್ಸ್ ಬೆಂಗಳೂರಿನ ಬಿಸಿನೆಸ್ ಹೆಡ್ ಅಕ್ಷಯ್ ಒಲೆಟಿ ಉಪಸ್ಥಿತರಿದ್ದರು.