Sunday, 15th December 2024

ಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ ಪ್ರಕಟ

ವದೆಹಲಿ: ಮುಂಬರುವ ಟಿ-20 ವಿಶ್ವಕಪ್‌ಗೆ ಆಸ್ಟ್ರೇಲಿಯಾ 15 ಮಂದಿಯ ಬಲಿಷ್ಠ ತಂಡವನ್ನು ಬುಧವಾರ ಪ್ರಕಟಿಸಿದೆ.

ಕಪ್‌ ಗೆಲ್ಲುವ ಮೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ.

ಮಿಚ್ ಮಾರ್ಷ್ ತಂಡವನ್ನು ಲೀಡ್‌ ಮಾಡಲಿದ್ದು, ಬ್ಯಾಟಿಂಗ್‌ ವಿಭಾಗದಲ್ಲಿ ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಟಿಮ್‌ ಡೇವಿಡ್, ಆಲ್‌ ರೌಂಡರ್‌ ವಿಭಾಗದಲ್ಲಿ ಮ್ಯಾಕ್ಸ್‌ ವೆಲ್‌, ಮಾರ್ಕಸ್ ಸ್ಟೊಯಿನಿಸ್, ಕ್ಯಾಮರೂನ್ ಗ್ರೀನ್ ಇದ್ದಾರೆ.‌

ಸ್ಪಿನ್ಸ್‌ ವಿಭಾಗದಲ್ಲಿ ಪ್ರಮುಖ ಸ್ಪಿನ್ನರ್‌ ಆಗಿ ಆಡಮ್ ಝಂಪಾ ಕಾಣಿಸಿಕೊಳ್ಳಲಿದ್ದಾರೆ. ಇವರೊಂದಿಗೆ ಆಷ್ಟನ್ ಅಗರ್ ಸಾಥ್‌ ನೀಡಲಿದ್ದಾರೆ.

ವೇಗಿಗಳಲ್ಲಿ ಜೋಶ್ ಹ್ಯಾಜಲ್‌ವುಡ್, ಪ್ಯಾಟ್ ಕಮ್ಮಿನ್ಸ್, ಮಿಚೆಲ್ ಸ್ಟಾರ್ಕ್, ನಾಥನ್ ಎಲ್ಲಿಸ್ ಅವರನ್ನು ಆಯ್ಕೆ ಮಾಡಲಾಗಿದೆ.

ಮಧ್ಯಮ ಕ್ರಮಾಂಕದ ಆಟಗಾ ಸ್ಟೀಮ್‌ ಸ್ಮಿತ್‌ ಅವರನ್ನು ತಂಡದಿಂದ ಕೈಬಿಡಲಾಗಿದೆ. ಆರನ್ ಹಾರ್ಡಿ, ಮ್ಯಾಟ್ ಶಾರ್ಟ್, ಕ್ಸೇವಿಯರ್ ಬಾರ್ಟ್ಲೆಟ್, ಜೇಸನ್ ಬೆಹ್ರೆಂಡಾರ್ಫ್ ಮತ್ತು ಸ್ಪೆನ್ಸರ್ ಜಾನ್ಸನ್ ಅವರನ್ನು ತಂಡದಲ್ಲಿ ಸೇರಿಸಿಕೊಂಡಿಲ್ಲ.

ಇನ್ನು ಐಪಿಎಲ್‌ ನಲ್ಲಿ ಸ್ಫೋಟಕ ಬ್ಯಾಟಿಂಗ್‌ ಶೈಲಿಯಿಂದ ಮಿಂಚುತ್ತಿರುವ ಯುವ ಆಟಗಾರ ಜೇಕ್ ಪ್ರೇಸರ್ ಅವರಿಗೆ ತಂಡದಲ್ಲಿ ಸ್ಥಾನ ಸಿಕ್ಕಿಲ್ಲ.

ಆಸ್ಟ್ರೇಲಿಯಾ ತನ್ನ ವಿಶ್ವಕಪ್ ಅಭಿಯಾನವನ್ನು ಜೂನ್ 6 ರಂದು ಬಾರ್ಬಡೋಸ್‌ನಲ್ಲಿ ಓಮನ್ ವಿರುದ್ಧ ಪ್ರಾರಂಭಿಸಲಿದೆ.