ನವದೆಹಲಿ: ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ ರಾಜೀನಾಮೆ ನೀಡುತ್ತಿದ್ದಂತೆ ಮತ್ತೆರಡು ವಿಕೆಟ್ ಪತನಗೊಂಡಿದೆ.
ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಅರವಿಂದರ್ ಸಿಂಗ್ ಲವ್ಲಿ ಅವರ ಹಠಾತ್ ರಾಜೀನಾಮೆ ನಂತರ ಪಕ್ಷ ತೊರೆದಿದ್ದಾರೆ.
ಕಾಂಗ್ರೆಸ್ನ ಮಾಜಿ ಶಾಸಕರಾದ ನೀರಜ್ ಬಸೋಯಾ ಮತ್ತು ನಸ್ಸೆಬ್ ಸಿಂಗ್ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ನಂತರ ಬುಧವಾರ ದೆಹಲಿ ಕಾಂಗ್ರೆಸ್ನಲ್ಲಿ ಗೊಂದಲ ತೀವ್ರಗೊಂಡಿದೆ.
ದೆಹಲಿಯಲ್ಲಿ ಎಎಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಕಾಂಗ್ರೆಸ್ ನಿರ್ಧಾರವನ್ನು ಮಾಜಿ ಶಾಸಕರು ಟೀಕಿಸಿದರು ಮತ್ತು ವಾಯುವ್ಯ ದೆಹಲಿ ಕ್ಷೇತ್ರದಿಂದ ಉದಿತ್ ರಾಜ್ ಅವರ ನಾಮನಿರ್ದೇಶನಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು.
ದೆಹಲಿ ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷರಾಗಿ ದೇವೇಂದ್ರ ಯಾದವ್ ನೇಮಕಗೊಂಡಿದ್ದಾರೆ. ಪಕ್ಷವು ದೇವೇಂದ್ರ ಯಾದವ್ ಅವರನ್ನು ದೆಹಲಿ ಕಾಂಗ್ರೆಸ್ನ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದೆ.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಕ್ಷಣದಿಂದ ಜಾರಿಗೆ ಬರುವಂತೆ ದೆಹಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಹಂಗಾಮಿ ಅಧ್ಯಕ್ಷರನ್ನಾಗಿ ದೇವೇಂದ್ರ ಅವರನ್ನು ನೇಮಕ ಮಾಡಲಾಗಿದೆ.