ಉತ್ತರಕನ್ನಡ: ಜಿಲ್ಲೆಯ ಮುಂಡಗೋಡಿನಲ್ಲಿ ಶುಕ್ರವಾರ ಪ್ರಜಾಧ್ವನಿಯಾತ್ರೆ ಕಾರ್ಯಕ್ರಮ ಆರಂಭವಾಗಿದ್ದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್, ಸಚಿವ ಮಂಕಾಳ ವೈದ್ಯ, ಶಾಸಕರಾದ ಭೀಮಣ್ಣ ನಾಯ್ಕ, ಸತೀಶ್ ಸೈಲ್, ದೇಶಪಾಂಡೆ ವೇದಿಕೆಯಲ್ಲಿದ್ದರು.
ಆಡಳಿತ ಅಭಿವೃದ್ಧಿ ಕುರಿತು ಸಚಿವ ದೇಶಪಾಂಡೆ ಮಾತನಾಡಿ, ಯಾವ ಅಭಿವೃದ್ಧಿಯೂ ಇಲ್ಲದ ಯಾವುದೇ ಕಾರ್ಯ ಮಾಡದ ಸರಕಾರ, ಸುಳ್ಳು ಹೇಳುವಮೋದಿ ನಮಗೆ ಬೇಡ. ನಾವು ಅಂಜಲಿಯನ್ನು ಆರಿಸಿ ತಂದು ನಮ್ಮ ಜಿಲ್ಲೆಯ ಕಾರ್ಯ ಮಾಡಿಸಿಕೊಳ್ಳಬೇಕಿದೆ ಎಂದರು.
ಸಾವಿರಾರು ಫಲಾನುಭವಿಗಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.