ಭಾರತದಲ್ಲಿ 2024ರ ನಿಯೋ ಕ್ಯೂಎಲ್‌ಇಡಿ ಮತ್ತು ಒಎಲ್‌ಇಡಿ ಎಐ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಟಿವಿ ವ್ಯಾಪಾರದಿಂದ ರೂ.10,000 ಕೋಟಿ ಮಾರಾಟ ಗಳಿಸುವ ಕಡೆ ಕಣ್ಣಿಟ್ಟ ಸ್ಯಾಮ್‌ಸಂಗ್
• ಸಂಶೋಧನಾ ಸಂಸ್ಥೆ ಒಮ್ಡಿಯಾ ಪ್ರಕಾರ ಸ್ಯಾಮ್‌ಸಂಗ್ ಭಾರತದ ನಂಬರ್ 1 ಟಿವಿ ತಯಾರಕ ಸಂಸ್ಥೆಯಾಗಿದೆ.
• 2024ನೇ ಸಾಲಿನ ಸ್ಯಾಮ್‌ಸಂಗ್ ನ ಹೊಸ ಕ್ಯೂಎಲ್‌ಇಡಿ 8ಕೆ, 4ಕೆ ಮತ್ತು ಓಎಲ್‌ಇಡಿ ಟಿವಿ ಶ್ರೇಣಿಯ ಆರಂಭಿಕ ಬೆಲೆ ರು. 139990
ಬೆಂಗಳೂರು: ಭಾರತದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರ್ಯಾಂಡ್ ಆಗಿರುವ ಸ್ಯಾಮ್‌ಸಂಗ್ 2024ರ ಶ್ರೇಣಿಯ ಎಐ ಟಿವಿಗಳನ್ನು ಬಿಡುಗಡೆ ಮಾಡುವ ಮೂಲಕ ಭಾರತದಲ್ಲಿ ತನ್ನ ಟಿವಿ ವ್ಯವಹಾರದಿಂದಲೇ ರೂ. 10,000 ಕೋಟಿ ಮಾರಾಟ ಗಳಿಸುವ ಗುರಿಯನ್ನು ಹೊಂದಿದೆ. ವಿಶ್ಲೇಷಕರ ಪ್ರಕಾರ, ಭಾರತದಲ್ಲಿ ಇದುವರೆಗೆ ಯಾವುದೇ ಟಿವಿ ಬ್ರ್ಯಾಂಡ್ ಈ ಸಾಧನೆಯನ್ನು ಮಾಡಿಲ್ಲ.
ಈ ಕುರಿತು ಮಾತನಾಡಿದ ಸ್ಯಾಮ್‌ಸಂಗ್ ಇಂಡಿಯಾದ ವಿಷುಯಲ್ ಡಿಸ್‌ಪ್ಲೇ ವ್ಯಾಪಾರದ ಹಿರಿಯ ಉಪಾಧ್ಯಕ್ಷ ಮೋಹನ್‌ದೀಪ್ ಸಿಂಗ್, “ನಮ್ಮ ಹೊಸ ಶ್ರೇಣಿಯ ಎಐ-ಚಾಲಿತ 8ಕೆ ನಿಯೋ ಕ್ಯೂಎಲ್‌ಇಡಿಗಳು, 4ಕೆ ನಿಯೋ ಕ್ಯೂಎಲ್‌ಇಡಿಗಳು ಮತ್ತು ಓಎಲ್‌ಇಡಿ ಟಿವಿಗಳ ಬಿಡುಗಡೆ ಮಾಡುವ ಮೂಲಕ ಈ ವರ್ಷ ಭಾರತದಲ್ಲಿ ನಮ್ಮ ಆದಾಯವನ್ನು ಹೆಚ್ಚಿಸುವ ಮತ್ತು ನಮ್ಮ ಮಾರುಕಟ್ಟೆ ನಾಯಕತ್ವವನ್ನು ವಿಸ್ತರಿಸುವ ವಿಶ್ವಾಸ ಹೊಂದಿದ್ದೇವೆ. 2024ರಲ್ಲಿ, ಭಾರತದಲ್ಲಿನ ನಮ್ಮ ಟಿವಿ ವ್ಯಾಪಾರದಿಂದ ರೂ. 10000 ಕೋಟಿ ಆದಾಯ ಗಳಿಸುವ ಮೈಲಿಗಲ್ಲನ್ನು ಸಾಧಿಸಲು ನಾವು ಎದುರು ನೋಡುತ್ತಿದ್ದೇವೆ. ನಮ್ಮ ನಿಯೋ ಕ್ಯೂಎಲ್‌ಇಡಿ 8ಕೆ ಎಐ ಟಿವಿಗಳು ಅದ್ಭುತವಾದ ದೃಶ್ಯ ಗುಣಮಟ್ಟ ಮತ್ತು ಪ್ರೀಮಿಯಂ ಆಡಿಯೋ ಗುಣಮಟ್ಟ ದೊಂದಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ಒದಗಿಸುತ್ತವೆ” ಎಂದು ಹೇಳಿದ್ದಾರೆ.
ಸಂಶೋಧನಾ ಸಂಸ್ಥೆ ಒಮ್ಡಿಯಾದ ಡೇಟಾವನ್ನು ಉಲ್ಲೇಖಿಸುತ್ತಾ ಸ್ಯಾಮ್‌ಸಂಗ್, 2023ರ ಪ್ರಕಾರ ತಾವು 21% ವಾಲ್ಯೂಮ್ ಮಾರುಕಟ್ಟೆ ಪಾಲನ್ನು ಹೊಂದಿದ್ದು, ಆ ಮೂಲಕ ಭಾರತದ ನಂಬರ್ ಒನ್ ಟೆಲಿವಿಷನ್ ಬ್ರ್ಯಾಂಡ್ ಆಗಿದ್ದೇವೆ ಎಂದು ಹೇಳಿದೆ. ಓಮ್ಡಿಯಾ ಪ್ರಕಾರ ತಮ್ಮ ಕಂಪನಿಯು ಕಳೆದ ಐದು ವರ್ಷಗಳಿಂದ ಭಾರತದಲ್ಲಿ ಅತಿದೊಡ್ಡ ಟಿವಿ ಬ್ರ್ಯಾಂಡ್ ಎಂದು ಗುರುತಿಸಿಕೊಂಡಿರುವುದಾಗಿ ಸ್ಯಾಮ್‌ಸಂಗ್ ತಿಳಿಸಿದೆ.
ಹೊಸದಾಗಿ ಬಿಡುಗಡೆಯಾದ ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4ಕೆ ಮತ್ತು ಗ್ಲೇರ್-ಫ್ರೀ ಓಎಲ್‌ಇಡಿ ಟಿವಿಗಳು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್(ಎಐ)ನ ಅದ್ಭುತ ಶಕ್ತಿಯೊಂದಿಗೆ ಬಂದಿದ್ದು, ಗ್ರಾಹಕರ ಜೀವನಶೈಲಿಯನ್ನು ಸುಧಾರಿಸಲು ನೆರವಾಗಲಿದೆ ಎಂದು ಸ್ಯಾಮ್‌ಸಂಗ್ ಹೇಳಿದೆ. ಹೊಸ ಎಐ-ಚಾಲಿತ ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4ಕೆ ಮತ್ತು ಓಎಲ್‌ಇಡಿ ಟಿವಿಗಳು ಮನೆಯ ಮನರಂಜನಾ ಅನುಭವವನ್ನು ಪರಿವರ್ತಿಸಲಿದೆ ಮತ್ತು ಎಐ ಶಕ್ತಿಯಿಂದ ಸುಸ್ಥಿರ ಮತ್ತು ಹೆಚ್ಚು ಭದ್ರತೆ ಒದಗಿಸುವ ಹೊಸ ಆವಿಷ್ಕಾರಗಳನ್ನು ನೀಡುತ್ತವೆ.
ಸ್ಯಾಮ್‌ಸಂಗ್‌ನ ಹೊಸ ಎಐ -ಚಾಲಿತ ಟಿವಿಗಳು ಎಐ ಪಿಕ್ಚರ್ ಟೆಕ್ನಾಲಜಿ, ಎಐ ಅಪ್‌ಸ್ಕೇಲಿಂಗ್ ಪ್ರೊ ಮತ್ತು ಎಐ ಮೋಷನ್ ಎನ್‌ಹಾನ್ಸರ್ ಪ್ರೊ ಗಳಂತಹ ಹಲವಾರು ಎಐ ವೈಶಿಷ್ಟ್ಯಗಳೊಂದಿಗೆ ಬರುತ್ತವೆ. ಎಐ ಎನರ್ಜಿ ಮೋಡ್ ಮೂಲಕ ಗ್ರಾಹಕರು ದೃಶ್ಯಗಳ ಗುಣಮಟ್ಟದಲ್ಲಿ ರಾಜಿ ಮಾಡಿ ಕೊಳ್ಳದೆ ವಿದ್ಯುತ್ ಉಳಿಸಬಹುದಾಗಿದೆ.
ಸ್ಯಾಮ್‌ಸಂಗ್ ನಿಯೋ ಕ್ಯೂಎಲ್‌ಇಡಿ 8ಕೆ ಟಿವಿಯು ಕ್ಯೂಎನ್900ಡಿ ಮತ್ತು ಕ್ಯೂಎನ್800ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ ಹಾಗೂ 65, 75, ಮತ್ತು 85 ಇಂಚುಗಳ ಗಾತ್ರದಲ್ಲಿ ದೊರೆಯುತ್ತದೆ. ನಿಯೋ ಕ್ಯೂಎಲ್‌ಇಡಿ 4ಕೆ ಟಿವಿಯು ಕ್ಯೂಎನ್85ಡಿ ಮತ್ತು ಕ್ಯೂಎನ್90ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿದೆ ಹಾಗೂ ಎರಡು 55, 65, 75, 85 ಮತ್ತು 98 ಇಂಚುಗಳ ಗಾತ್ರಗಳಲ್ಲಿ ದೊರೆಯುತ್ತದೆ. ಸ್ಯಾಮ್‌ಸಂಗ್ ಓಎಲ್‌ಇಡಿ ಟಿವಿ ಎಸ್95ಡಿ ಮತ್ತು ಎಸ್90ಡಿ ಎಂಬ ಎರಡು ಮಾದರಿಗಳಲ್ಲಿ ಲಭ್ಯವಿರುತ್ತದೆ ಹಾಗೂ 55, 65, 77 ಮತ್ತು 83 ಇಂಚುಗಳ ಗಾತ್ರದಲ್ಲಿ ದೊರೆಯುತ್ತದೆ.
ಹೊಸ ಸ್ಯಾಮ್‌ಸಂಗ್ ಟಿವಿಗಳಲ್ಲಿ ಸ್ಯಾಮ್‌ಸಂಗ್ ನಾಕ್ಸ್ ಎಂಬ ಭದ್ರತಾ ಫೀಚರ್ ಇರುವುದರಿಂದ ಬಳಕೆದಾರರು ಮಾನಸಿಕ ಶಾಂತಿಯನ್ನು ಹೊಂದ ಬಹುದು. ನಾಕ್ಸ್ ಪ್ರತಿ ಫೀಚರ್, ಆಪ್ ಮತ್ತು ಪ್ಲಾಟ್‌ಫಾರ್ಮ್ ಅನ್ನು ಸುರಕ್ಷಿತವಾಗಿರಿಸಲು ಸಹಾಯ ಮಾಡುತ್ತದೆ.
* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್‌ಇಡಿ 8ಕೆ ಶ್ರೇಣಿಯ ಬೆಲೆ ರೂ.319990ರಿಂದ ಪ್ರಾರಂಭವಾಗುತ್ತದೆ
* ಸ್ಯಾಮ್‌ಸಂಗ್ ನ ನಿಯೋ ಕ್ಯೂಎಲ್‌ಇಡಿ 4ಕೆ ಶ್ರೇಣಿಯ ಬೆಲೆ ರೂ.139990 ರಿಂದ ಪ್ರಾರಂಭವಾಗುತ್ತದೆ
* ಸ್ಯಾಮ್‌ಸಂಗ್ ನ ಓಎಲ್‌ಇಡಿ ಶ್ರೇಣಿಯ ಬೆಲೆ ರೂ.164990ರಿಂದ ಪ್ರಾರಂಭವಾಗುತ್ತದೆ