ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಹಾಲಿ ರನ್ನರ್ಅಪ್ ಗುಜರಾತ್ ಟೈಟಾನ್ಸ್ ತಂಡಗಳು ಐಪಿಎಲ್-17ರಲ್ಲಿ ಶನಿವಾರ ಮರುಮುಖಾಮುಖಿ ಆಗಲಿವೆ.
ಮತದಾನದಿಂದಾಗಿ 18 ದಿನಗಳಿಂದ ತವರಿನಿಂದ ದೂರವಿದ್ದ ಆರ್ಸಿಬಿ ಇದೀಗ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ.
ಕಳೆದ ಭಾನುವಾರವಷ್ಟೇ ಉಭಯ ತಂಡಗಳ ನಡುವೆ ಅಹಮದಾಬಾದ್ನಲ್ಲಿ ನಡೆದ ಪಂದ್ಯದಲ್ಲಿ ಗೆದ್ದ ವಿಶ್ವಾಸದಲ್ಲಿರುವ ಫಾಫ್ ಡು ಪ್ಲೆಸಿಸ್ ಪಡೆ ಅದೇ ಫಲಿತಾಂಶ ಪುನರಾವರ್ತಿಸುವ ಹರುಪಿನಲ್ಲಿದ್ದರೆ, ಗುಜರಾತ್ ಟೈಟಾನ್ಸ್ ತಂಡ ಸೇಡು ತೀರಿಸಿಕೊಳ್ಳುವ ಹಂಬಲದಲ್ಲಿದೆ.
ಪ್ಲೇಆ ಆಸೆಯನ್ನು ಬಹುತೇಕ ಕೈಚೆಲ್ಲಿರುವ ಆರ್ಸಿಬಿ ಕಳೆದೆರಡು ಪಂದ್ಯಗಳಲ್ಲಿ ಗೆದ್ದು ಟೂರ್ನಿಯಿಂದ ತನ್ನ ಅಧಿಕೃತ ನಿರ್ಗಮನವನ್ನು ಇನ್ನೂ ಕೆಲ ದಿನಗಳ ಕಾಲ ಮುಂದೂಡಿದೆ. ಇದೀಗ ಗೆಲುವಿನ ಹ್ಯಾಟ್ರಿಕ್ ಸಾಧಿಸುವದು ಆರ್ಸಿಬಿ ಛಲವಾಗಿದೆ.
ಗುಜರಾತ್ ಟೈಟಾನ್ಸ್ ಆಡಿದ 10 ಪಂದ್ಯಗಳಲ್ಲಿ 4 ಜಯ, 6 ಸೋಲಿನೊಂದಿಗೆ ಪ್ಲೇಆ ರೇಸ್ನಲ್ಲಿ ತೂಗುಯ್ಯಾಲೆಯ ಮೇಲೆ ನಿಂತಿದೆ.
ಸನ್ರೈಸರ್ಸ್ ಮತ್ತು ಗುಜರಾತ್ ವಿರುದ್ಧ ಕಳೆದೆರಡು ಪಂದ್ಯಗಳಲ್ಲಿ ಕಂಡ ಜಯ ಆರ್ಸಿಬಿ ತಂಡದ ವಿಶ್ವಾಸ ವೃದ್ಧಿಸಿದೆ. ಡೆಲ್ಲಿ ಮತ್ತು ಆರ್ಸಿಬಿ ವಿರುದ್ಧ 200 ಪ್ಲಸ್ ಮೊತ್ತ ಪೇರಿಸಿಯೂ ಸೋತಿರುವ ಗುಜರಾತ್ ತಂಡವೀಗ ಹ್ಯಾಟ್ರಿಕ್ ಸೋಲಿನ ಭೀತಿಯಲ್ಲಿದೆ.
ಹೀಗಾಗಿ ಪಂದ್ಯ ಮಳೆ ಅಡಚಣೆಗೆ ಒಳಗಾಗುವ ಭೀತಿ ಇದೆ. ಆದರೆ, ಓವರ್ ಕಡಿತಗೊಂಡರೂ, ಪಂದ್ಯ ಸಂಪೂರ್ಣ ರದ್ದಾಗುವ ಸಾಧ್ಯತೆ ಇಲ್ಲ. ಒಂದು ವೇಳೆ ಪಂದ್ಯ ರದ್ದಾದರೆ ಆರ್ಸಿಬಿ 1 ಅಂಕ ಹಂಚಿಕೊಂಡರೂ, ಅಧಿಕೃತವಾಗಿ ಟೂರ್ನಿಯಿಂದ ಹೊರಬೀಳಲಿದೆ.