ಶಿರಸಿ: ನಗರಕ್ಕೆ ಕುಡಿಯುವ ನೀರು ಸರಬರಾಜಾಗುವ ಕೆಂಗ್ರೆ ಹೊಳೆಯಲ್ಲಿ ನೀರಿನ ಪ್ರಮಾಣ ವೀಕ್ಷಿಸುತ್ತಿದ್ದ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕರವರ ಮೇಲೆ ಜೇನು ದಾಳಿ ಮಾಡಿದೆ.
ನಗರದ ಟಿ ಎಸ್ ಎಸ್ ಆಸ್ಪತ್ರೆಯಲ್ಲಿ ಶಾಸಕ ಭೀಮಣ್ಣ ಚಿಕಿತ್ಸೆಗೆ ದಾಖಲಾದರು.
ಶಾಸಕರು ಮತ್ತು ಅವರ ಜೊತೆಯಲ್ಲಿದ್ದ ಪೌರಾಯುಕ್ತ ಕಾಂತರಾಜ ಜೇನು ದಾಳಿಗೆ ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ.
ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ.