Saturday, 14th December 2024

ಸಿಕ್ಯಾಬ್ ಪ್ರೌಢಶಾಲೆಯ ವಿದ್ಯಾರ್ಥಿಗಳ ಸಾಧನೆ

ಕೊಲ್ಹಾರ: ಪಟ್ಟಣದ ಸಿಕ್ಯಾಬ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೆ: 90.90 ರಷ್ಟು ಫಲಿತಾಂಶ ತಂದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ವಿದ್ಯಾರ್ಥಿನಿಯರಾದ ಆಸ್ಮಾಬಾನು ಎ. ದಿಂದಾರ (550), ಸುಮಯ್ಯಾಬಾನು ನಿ. ನದಾಫ(541), ಸಫೀಯಾಅಂಜುಮ್ ಎಂ. ತಾಂಬೋಳಿ(539) ಅಂಕಗಳನ್ನು ಪಡೆದು ಸಾಧನೆಗೈದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಮೊಹಮ್ಮದಸಾಬ ಹೊನ್ಯಾಳ, ಮುಖ್ಯೋಪಾಧ್ಯಾಯ ರಾದ ಎಸ್.ಎಂ ಮಣೂರ ಸಹಿತ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಹರ್ಷವ್ಯಕ್ತಪಡಿಸಿದ್ದಾರೆ.