Saturday, 14th December 2024

ಮತದಾನ: ಪ್ರಜ್ಞಾವಂತರಾಗಲಿ

ವಿದ್ಯಮಾನ

ನಾಗರಾಜ ಸನದಿ

ಭಾರತದ ಚುನಾವಣಾ ಪ್ರಕ್ರಿಯೆಯನ್ನು ಇತರ ರಾಷ್ಟ್ರಗಳು ಕೂಡ ಕುತೂಹಲದಿಂದ ಗಮನಿಸುತ್ತಿವೆ. ಹಲವು ರಂಗಗಳಲ್ಲಿ ವಿಶ್ವದ ದೈತ್ಯ ಶಕ್ತಿಗಳಂದಾಗಿ ಬೆಳೆಯುತ್ತಿರುವ ಭಾರತದಲ್ಲಿ ಒಟ್ಟು ಶೇ.೯೭ ರಷ್ಟು ಮತದಾರರಿದ್ದರು, ನೂರರಷ್ಟು ಮತದಾನದ ಆಶಯ ಈಡೇರದಿರುವುದು ಕಳವಳಕಾರಿ ವಾಸ್ತವ.

ಲೋಕಸಭಾ ಚುನಾವಣೆಯಲ್ಲಿ ನಗರದ ಕೊಳಗೇರಿ ಪ್ರದೇಶ ಅಥವಾ ಮಧ್ಯಮ ವರ್ಗದ ಬಡಾವಣೆಗಳಿಗೆ ಸಂಸದ ರಾಗುವ ಬಯಸುವ ಅಭ್ಯರ್ಥಿಗಳು ಪ್ರಚಾರಕ್ಕೆಂದು ಹೋದಾಗ ಅಲ್ಲಿನ ಸ್ಥಳೀಯ ಮತದಾರರು ಅನುಭವಿಸುತ್ತಿರುವ ಮೂಲಭೂತ ಅಗತ್ಯತೆಗಳು ಮತ್ತು ಸೇವೆಗಳಾದ ನೀರು ಪೂರೈಕೆ, ವಿದ್ಯುತ್, ಆರೋಗ್ಯ ಸೇವೆ, ಸ್ವಚ್ಛತೆಗಳ ಬಗ್ಗೆಯೇ ತಮ್ಮ ಅಹವಾಲುಗಳನ್ನ ಅಭ್ಯರ್ಥಿಗಳ ಮುಂದಿಡುರುತ್ತಾರೆ. ಆದರೆ ವಾಸ್ತವದಲ್ಲಿ ಇಂತಹ ಅಹವಾಲು ಗಳ ಪಟ್ಟಿಯನ್ನು ಮುಟ್ಟಿಸಬೇಕಾಗಿರುವುದು ಅಲ್ಲಿನ ಸ್ಥಳಿಯ ಶಾಸಕರಿಗೆ, ಕಾರ್ಪೊರೇಟರಿಗೆ ಅಥವಾ ಅಧಿಕಾರಿಗಳಿಗೆ ಹೊರತು ದಿಲ್ಲಿಯ ಪಾರ್ಲಿಮೆಂಟಿ ನಲ್ಲಿ ಕುಳಿತು ದೇಶಕ್ಕೆ ಪೂರಕವಾದ ಶಾಸನಗಳನ್ನು ರೂಪಿಸುವ ಸಂಸದರಿಗಲ್ಲ!

ಇನ್ನು ಸಂಸದರಾಗ ಬಯಸುವ ಅಭ್ಯರ್ಥಿಗಳು ರಚಿತವಾಗುವ ಶಾಸನಗಳು, ನೀತಿಗಳ ಬಗ್ಗೆ ಸಂಪೂರ್ಣ ಜ್ಞಾನ ಹೊಂದಿರುವಂತವರಾಗಿರಬೇಕು. ಅವುಗಳ ಬಗ್ಗೆ ಚರ್ಚಿಸಿ ಶಾಸನ ರಚನಾ ಪ್ರಕ್ರಿಯೆ ಯಲ್ಲಿ ತಮ್ಮ ನಿಲುವನ್ನು ವ್ಯಕ್ತಪಡಿಸುವ ಪ್ರೌಢಿಮೆ ಸಾಧಿಸಿರಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಮತದಾರರು ಆರಿಸಿದಂತಹ ಕೆಲ ಸಂಸದರು ಸಂಸತ್ತಿಗೆ ಕೇವಲ ವೀಕ್ಷಕರಾಗಿ- ಮೂಕವಿಕಸ್ಮಿತರಾಗಿ ಮಸೂದೆಗಳಿಗೆ ಅಸ್ತು ಎನ್ನುವ ಯಂತ್ರಗಳಾಗಿದ್ದರೆ, ಇನ್ನು ಕೆಲ ಸಂಸದರ ಸಂಸತ್ತಿನ ಭೇಟಿಯನ್ನು ಗ್ರಹಣಗಳು ಜರುಗುವ ಸಂದರ್ಭಕ್ಕೆ ಹೋಲಿಸಬಹುದೆನೋ? ಅದರಂತೆ ಸಂಸದರನ್ನು ಸದನದಿಂದ
ಉಚ್ಚಾಟಿಸುವ ಮೂಲಕ ಸಂಸತ್ತು ಕೂಡ ಪ್ರಜಾಪ್ರಭುತ್ವದ ತತ್ವಗಳನ್ನು ಗಾಳಿಗೆ ತೂರಿದಂತಹ ಪ್ರವೃತ್ತಿಗಳು ಕೂಡ ಮುನ್ನೆಲೆಗೆ ಬಂದಿವೆ.

ಸುಮಾರು ೧೪೧ ಸಂಸದರನ್ನು ಉಚ್ಚಾಟಿಸಿದಾಗ ಪ್ರಮುಖ ಮಸೂದೆಗಳಿಗೆ ಸಂಸತ್ತು ಕೂಡ ಒಪ್ಪಿಗೆ ಸೂಚಿಸಿತ್ತು. ಇನ್ನು ಹಾಗೆ ಉಚ್ಚಿಟಿಸಲ್ಪಟ್ಟ ಸಂಸದರೊ, ಆಡಳಿತಾರೂಢ ಪಕ್ಷದ ಮಂತ್ರಿಗಳ, ಅವರುಗಳ ಹೇಳಿಕೆಗೆ ಪಟ್ಟು ಹಿಡಿದು ದುರ್ನಡತೆ ತೋರದೆ ಮಂಡನೆ ಯಾಗಲಿರುವ ವಿವಿಧ ಸೂಕ್ಷ್ಮ ಮಸೂದೆಗಳ ಬಗ್ಗೆ ಚರ್ಚೆ ಯನ್ನು ಕೈಗೆತ್ತಿಕೊಂಡು ತಮ್ಮ ನೈತಿಕ ಕರ್ತವ್ಯವನ್ನು ಕೂಡ ಪ್ರದರ್ಶಿಸಲಿಲ್ಲ. ಇವರುಗಳ ಹೊರತಾಗಿ ಸಂಕೀರ್ಣವಾದ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥ ಅಧಿಕಾರಿಗಳ ಜತೆ ಕೆಲಸ ಮಾಡುವ, ಸಮಕಾಲೀನ ಪರಿಸ್ಥಿತಿಗಳ ಅರಿವಿರುವ ರಾಜಕಾರಣಿಗಳು ಆಧುನಿಕ ಪ್ರಜಾತಂತ್ರ ವ್ಯವಸ್ಥೆಗೆ ಬೇಕಾಗಿದ್ದಾರೆ.

ಅದೇ ನಿಟ್ಟಿನಲ್ಲಿ ಮತದಾನಕ್ಕೆ ಅವಕಾಶಗಳಿದ್ದರೂ ಮತದಾನ ಮಾಡದೆ ಇರುವವರು ಸರಕಾರವನ್ನು ಪ್ರಶ್ನಿಸುವ ನೈತಿಕ ಹಕ್ಕನ್ನು ಕಳೆದುಕೊಂಡಂ ತೆಯೇ ಸರಿ! ಬೆಂಗಳೂರಿನಂತಹ ಮಹಾನಗರದಲ್ಲಿ ಸುಶಿಕ್ಷಿತ ವರ್ಗ ವೇ ಮತದಾನದಲ್ಲಿ ಪಾಲ್ಗೊಳ್ಳುವುದಿಲ್ಲ. ಹಾಗೆ ಮತದಾನಕ್ಕಾಗಿ ಮೀಸಲಿರುವ ರಜಾ
ದಿನವನ್ನು ತಮ್ಮ ಮೋಜು ಮಸ್ತಿಗಾಗಿ ವ್ಯಹಿಸಿದವರು ಕುಡಿಯುವ ನೀರಿಗಾಗಿ ಬರ ಬಂದಾಗ, ನೀರನ್ನು ಪೂರೈಸುವಂತೆ ಸರಕಾರವನ್ನು ಕೇಳಿಕೊಳ್ಳುವ ಹಾಗೂ ಪರಿಸ್ಥಿತಿಯ ಮುಂಜಾಗ್ರತ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಪ್ರಶ್ನಿಸುವ ಯಾವುದೇ ನೈತಿಕ ಹಕ್ಕು ಅಂಥವರಿಗಿರದು!

ಒಳ್ಳೆಯ ಸಂಸದೀ ಯಪಟುಗಳು ಒಳ್ಳೆಯ ಶಾಸನಗಳನ್ನು ರೂಪಿಸುತ್ತಾರೆ. ಒಳ್ಳೆಯ ಶಾಸನಗಳು ಒಳ್ಳೆಯ ಸಮಾಜವನ್ನು ಕಟ್ಟುತ್ತವೆ. ಒಳ್ಳೆಯ ಶಾಸನ ಗಳನ್ನು ಚೆನ್ನಾಗಿ ಅನುಷ್ಠಾನಕ್ಕೆ ತಂದಾಗ ಪ್ರಜಾತಂತ್ರ ವ್ಯವಸ್ಥೆಯು ಸಮಾನತೆ, ನ್ಯಾಯ, ಹಕ್ಕುಗಳಿಂದ ಕೂಡಿ ಹೆಚ್ಚು ಶ್ರೀಮಂತ ವಾಗುತ್ತದೆ. ಪ್ರಸ್ತುತ ೫೪೩ ಮಂದಿ ಕೇಂದ್ರ ಸದನಕ್ಕೆ ಆಯ್ಕೆಯಾಗುವ ಸಂಸದರು ದೇಶವನ್ನು ಸಮಾನತೆ, ಪ್ರಗತಿ, ಸಾಮಾಜಿಕ ನ್ಯಾಯ, ಪ್ರಜೆಗಳ ಹಕ್ಕುಗಳ ರಕ್ಷಣೆ, ಹಾಗೂ
ಅಭಿವೃದ್ಧಿಯ ಪಥದಲ್ಲಿ ಪೊರೆ ಯುವ ಶಾಸನಗಳನ್ನು ರೂಪಿಸುವಂತಹ ಆಶಾ ಜೀವಿಗಳು ಎಂಬು ದನ್ನು ಅಲಕ್ಷಿಸಸದೆ ಮತದಾರರು ಪ್ರeವಂತರಾಗಿ ಮತದಾನವನ್ನು ಮಾಡಬೇಕಾಗಿದೆ.