Thursday, 12th December 2024

ಟಿ20 ವಿಶ್ವಕಪ್‌: ಮೇ 24 ರಂದು ಮೊದಲ ಬ್ಯಾಚ್ ರವಾನೆ

ಮುಂಬೈ: ಭಾರತದಲ್ಲಿ ಸದ್ಯ ಅಭಿಮಾನಿಗಳು ಐಪಿಎಲ್‌ ಪ್ಲೇ ಆಫ್‌ ಲೆಕ್ಕಾಚಾರವನ್ನು ಆರಂಭಿಸಿವೆ. ಈ ಐಪಿಎಲ್‌ ಮುಗಿಯುತ್ತಿದ್ದಂತೆ ಟಿ20 ವಿಶ್ವಕಪ್‌ ಆರಂಭವಾಗಲಿದೆ.

ವೆಸ್ಟ್‌ ಇಂಡೀಸ್ ಹಾಗೂ ಅಮೆರಿಕದ ಆತಿಥ್ಯದಲ್ಲಿ ಟಿ20 ವಿಶ್ವಕಪ್‌ ಆಯೋಜಿಸಲಾಗುತ್ತಿದೆ. ಈ ಮೆಗಾ ಟೂರ್ನಿಯಲ್ಲಿ ಭಾರತ ಜೂನ್‌ 5 ರಿಂದ ತನ್ನ ಅಭಿಯಾನ ಆರಂಭಿಸಲಿದೆ. ಭಾರತ ಪುರುಷರ ತಂಡ ಎರಡು ಹಂತಗಳಲ್ಲಿ ದೇಶವನ್ನು ತಲುಪಲಿದೆ. ಮೊದಲ ಬ್ಯಾಚ್‌ನಲ್ಲಿ, ಕೋಚಿಂಗ್ ಸಿಬ್ಬಂದಿ ಯೊಂದಿಗೆ ಆ ಆಟಗಾರರು ಪ್ರಯಾಣ ಬೆಳೆಸಲಿದ್ದಾರೆ.

ಐಪಿಎಲ್ 2024 ರಲ್ಲಿ ಪ್ಲೇ ಆಫ್‌ಗೆ ಪ್ರವೇಶಿಸಲು ಸಾಧ್ಯವಾಗದ ತಂಡಗಳನ್ನು ಟಿ20 ವಿಶ್ವಕಪ್‌ಗೆ ಮುಂಚಿತವಾಗಿ ತಂಡವನ್ನು ತೊರೆಯಬಹುದು.

ಟಿ20 ವಿಶ್ವಕಪ್ 2024ರ ಮೊದಲ ಬ್ಯಾಚ್ ಮೇ 24 ರಂದು ಅಮೆರಿಕಕ್ಕೆ ಹಾರಲಿದೆ. ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ಐಪಿಎಲ್ 2024ರ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿವೆ. ಈ ತಂಡಗಳ ಆಟಗಾರರು ವಿಶ್ವಕಪ್‌ಗೆ ಮೊದಲು ಹೊರಡುತ್ತಾರೆ. ಮೇ 26 ರಂದು ನಡೆಯಲಿರುವ ಫೈನಲ್ ಪಂದ್ಯದ ನಂತರ ಕೊನೆಯ 4 ರೊಳಗೆ ಸ್ಥಾನ ಪಡೆದ ತಂಡಗಳ ಆಟಗಾರರು ಎರಡನೇ ಬ್ಯಾಚ್‌ನಲ್ಲಿ ಅಮೆರಿಕಕ್ಕೆ ತೆರಳಲಿದ್ದಾರೆ.

ಮುಂಬೈ ಇಂಡಿಯನ್ಸ್‌ ತಂಡದಲ್ಲಿ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದ ಹಲವು ಆಟಗಾರರು ಇದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಟೀಮ್ ಇಂಡಿಯಾ ಉಪನಾಯಕ ಹಾರ್ದಿಕ್ ಪಾಂಡ್ಯ, ಯಾರ್ಕರ್‌ ಸ್ಪೇಷಲಿಸ್ಟ್‌ ಜಸ್ಪ್ರಿತ್ ಬುಮ್ರಾ, ಮಿಡ್ಲ್‌ ಆರ್ಡರ್‌ ಬ್ಯಾಟರ್‌ ಸೂರ್ಯ ಕುಮಾರ್ ಮುಂಬೈ ತಂಡದ ಭಾಗವಾಗಿದ್ದಾರೆ. ಇನ್ನು ಪಂಜಾಬ್‌ ತಂಡದ ಯುವ ವೇಗದ ಬೌಲರ್‌ ಆರ್ಷದೀಪ್‌ ಸಿಂಗ್ ಸಹ ವಿಮಾನ ಏರಲಿದ್ದಾರೆ.