ಚೆನ್ನೈ: ಐಪಿಎಲ್ನ ಇಂದಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಿದ್ದು, ಇತ್ತೀಚಿನ ವರದಿ ಪ್ರಕಾರ, ರಾಜಸ್ಥಾನ್ ತಂಡ, ಐದು ವಿಕೆಟಿಗೆ 141 ರನ್ ಗಳಿಸಿತು.
ಚೆನ್ನೈನ ಅಸಾಧಾರಣ ಬೌಲಿಂಗಿಗೆ ರಾಜಸ್ಥಾನ ತಂಡದಲ್ಲಿ ಒಂದೇ ಒಂದು ಅರ್ಧಶತಕ ಬರಲಿಲ್ಲ. ಮಧ್ಯಮ ಕ್ರಮಾಂಕದ ರಿಯಾನ್ ಪರಾಗ್ ಅತ್ಯಧಿಕ
ಈ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ ಅಧಿಕೃತವಾಗಿ ಪ್ಲೇಆಫ್ಗೆ ಎಂಟ್ರಿ ಕೊಡಲಿದೆ. ಅತ್ತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಗೆದ್ದರೆ ಪ್ಲೇಆಫ್ ಹಂತಕ್ಕೇರುವ ಹಾದಿ ಸುಗಮವಾಗಲಿದೆ. ಇದೇ ಪಂದ್ಯದ ಫಲಿತಾಂಶ ಆರ್ಸಿಬಿ ತಂಡದ ಪ್ಲೇಆಫ್ ಕನಸನ್ನು ಕೂಡ ನಿರ್ಧರಿಸಲಿದೆ.
ಇದರಿಂದ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಆರ್ಸಿಬಿ ತಂಡದ ಪಾಯಿಂಟ್ಸ್ ಸಮಗೊಳ್ಳಲಿದೆ. ಹೀಗೆ ಪಾಯಿಂಟ್ಸ್ ಸಮಗೊಂಡರೆ ಆರ್ಸಿಬಿ ತಂಡಕ್ಕೆ ಕೊನೆಯ ಪಂದ್ಯದಲ್ಲಿ ಗೆದ್ದು ಪ್ಲೇಆಫ್ ಹಂತಕ್ಕೇರುವ ಅವಕಾಶ ಹೆಚ್ಚಾಗಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ಗೆಲ್ಲುವುದನ್ನು ಆರ್ಸಿಬಿ ಎದುರು ನೋಡಲಿದೆ.
ಒಂದು ವೇಳೆ ಇಂದು ರಾಜಸ್ಥಾನ್ ರಾಯಲ್ಸ್ ತಂಡ ಗೆದ್ದರೆ, ಪ್ಲೇಆಫ್ ಹಂತಕ್ಕೇರಲು ಆರ್ಸಿಬಿ ಹಾಗೂ ಸಿಎಸ್ಕೆ ನಡುವೆ ನಾಕೌಟ್ ಪಂದ್ಯ ನಡೆಯಬಹುದು. ಅಂದರೆ ಆರ್ಸಿಬಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿ 12 ಅಂಕಗಳನ್ನು ಪಡೆದುಕೊಂಡರೆ, ತನ್ನ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ತಂಡವನ್ನು ಎದುರಿಸಲಿದೆ. ಇದರಿಂದ ಸಿಎಸ್ಕೆ ಮತ್ತು ಆರ್ಸಿಬಿ ನಡುವೆ ಪ್ಲೇಆಫ್ ಎಂಟ್ರಿ ಫೈಟ್ ಕಂಡು ಬರಲಿದೆ.