ಬೆಂಗಳೂರು: ಸಿವಿಲ್ ಸರ್ವೀಸಸ್ ಎಕ್ಸಾಮಿನೇಷನ್ (ಸಿಎಸ್‌ಇ) ಎಂಬುದು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭಾರತದಾದ್ಯಂತ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆ ಆಗಿದೆ. ಭಾರತೀಯ ಆಡಳಿತ ಸೇವೆ(ಐಎಎಸ್), ಭಾರತೀಯ ವಿದೇಶಾಂಗ ಸೇವೆ (ಐಎಫ್ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಭಾರತ ಸರ್ಕಾರದ ಉನ್ನತ ನಾಗರಿಕ ಸೇವೆಗಳಿಗೆ ನೇಮಕಾತಿ ನಡೆಸುವ ಸಲು ವಾಗಿ ಈ ಪರೀಕ್ಷೆ ನಡೆಸಲಾಗುತ್ತದೆ.
ಈ ಕುರಿತಂತೆ ವಿಷನ್ ಐಎಎಸ್ ಸಂಸ್ಥೆಯು ಅಖಿಲ ಭಾರತ ಮಟ್ಟದಲ್ಲಿ 11ನೇ ರಾಂಕ್ ಗಳಿಸಿದ್ದ ತಮ್ಮ ವಿದ್ಯಾರ್ಥಿ ಶ್ರೀ ಕುಶ್ ಮೋಟ್ವಾನಿ ಅವರಿಂದ ಯುಪಿಎಸ್‌ಸಿ ತಯಾರಿ ಕುರಿತು ಸೆಮಿನಾರ್ ಆಯೋಜಿ ಸಿತ್ತು. ಈ ಕಾರ್ಯಕ್ರಮದಲ್ಲಿ ಹಲವಾರು ಯುಪಿಎಸ್‌ಸಿ ಆಕಾಂಕ್ಷಿಗಳು ಭಾಗವಹಿಸಿದ್ದರು.
ಗಣಿತವನ್ನು ಐಚ್ಛಿಕ ವಿಷಯವನ್ನಾಗಿ ಆರಿಸಿಕೊಂಡಿದ್ದ ಕುಶ್ ಅಪಾರವಾದ ಶ್ರದ್ಧೆ ಮತ್ತು ಛಲದಿಂದ ಯಶಸ್ಸು ಸಾಧಿಸಿದ್ದಾರೆ. ನೆರುಲ್‌ನ ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ತನ್ನ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು ನಂತರ ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಬಿ.ಟೆಕ್ ಮತ್ತು ಬಾಂಬೆಯ ಪ್ರತಿಷ್ಠಿತ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಕಮ್ಯುನಿಕೇಷನ್ ಆಂಡ್ ಸಿಗ್ನಲ್ ಪ್ರೊಸೆ ಸಿಂಗ್‌ನಲ್ಲಿ ಎಂ.ಟೆಕ್ ಅನ್ನು ಪೂರ್ಣ ಗೊಳಿಸಿದ್ದಾರೆ.
ಸಂಶೋಧನಾ ಇಂಜಿನಿಯರ್‌ನಿಂದ ಹಿಡಿದು ಭಾರತೀಯ ಕಾರ್ಪೊರೇಟ್ ಕಾನೂನು ಸೇವೆ ಮತ್ತು ನಂತರ ಡೇಟಾ ವಿಜ್ಞಾನಿಯಾಗುವವರೆಗಿನ ಕುಶ್ ಅವರ ವೃತ್ತಿ ಪ್ರಯಾಣವು ವಿಶಿಷ್ಟವಾಗಿದೆ ಮತ್ತು ಅವರ ಬಹುಮುಖ ಆಸಕ್ತಿ, ಸಾಮರ್ಥ್ಯಕ್ಕೆ ಪುರಾವೆಯಾಗಿದೆ.
ಈ ಸಮಾವೇಶದಲ್ಲಿ ಶ್ರೀ ಕುಶ್ ಮೋಟ್ವಾನಿ ಅವರು ತಮ್ಮ ಸ್ಫೂರ್ತಿದಾಯಕ ಕತೆಯನ್ನು ಹೇಳಿ ಕೊಂಡರು. ಸಮಯವನ್ನು ಪರಿಣಾಮಕಾರಿಯಾಗಿ ನಿರ್ವಹಿಸುವ ಕುರಿತು, ಅಧ್ಯಯನ ಯೋಜನೆ ಗಳನ್ನು ಹಾಕಿಕೊಳ್ಳುವ ಕುರಿತು, ಪೂರ್ವಸಿದ್ಧತಾ ಪ್ರಯಾಣದ ಉದ್ದಕ್ಕೂ ಸ್ಫೂರ್ತಿ ಕಾಪಾಡಿಕೊಳ್ಳುವ ಕುರಿತು ಅವರು ಆಕಾಂಕ್ಷಿಗಳಿಗೆ ಮಾರ್ಗದರ್ಶ ನೀಡಿದರು.
ವಿಜಯನಗರದ ವಿಷನ್ ಐಎಎಸ್ ಬೆಂಗಳೂರು ಕೇಂದ್ರಕ್ಕೆ ಸೆಮಿನಾರ್ ಸಲುವಾಗಿ ಆಗಮಿ ಸಿದ್ದ ಎಲ್ಲಾ ಆಕಾಂಕ್ಷಿಗಳು ಕಾರ್ಯಕ್ರಮದ ಕುರಿತು ಮೆಚ್ಚುಗೆ ಸೂಚಿಸಿದರು. ಈ ಸೆಮಿನಾರ್ ಭವಿಷ್ಯದ ರಾಷ್ಟ್ರ ನಾಯಕರ ಪ್ರಯಾಣದಲ್ಲಿ ಸ್ಫೂರ್ತಿ ಮೂಡಿಸಲು ಯಶಸ್ವಿಯಾಯಿತು.