Thursday, 12th December 2024

ಗಂಗೆಯ ಕೂಗಿಗೆ ಶಿರಬಾಗಿದ ನಮೋ

ರಾಜಬೀದಿ

ವಿನಾಯಕ ಮಠಪತಿ

ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲಾ ಆಯಾಮಗಳಲ್ಲಿ ಅಧ್ಯಯನ ಮಾಡಿ ಅನುಷ್ಠಾನ ಮಾಡಬೇಕಾಗುತ್ತದೆ. ಗಂಗಾ ನದಿ ಶುದ್ದೀಕರಣ ವಿಷಯದಲ್ಲಿಯೂ ಕೈಗಾರಿಕೆಗಳ ತಾಜ್ಯನೀರು ನದಿಗೆ ಸೇರಿದಂತೆ ಕ್ರಮವಹಿಸಿದ್ದು. ಕಲುಷಿತಗೊಂಡ ಗಂಗೆಯನ್ನು ವೈeನಿಕ ಉಪಕರಣಗಳ ಮೂಲಕ ಸ್ವಚ್ಛಗೊಳಿಸುವುದು.

‘ನಾ ಮುಝೆ ಕಿಸಿ ನೇ ಭೇಜಾ ಹೈ, ನಾ ಮೈ ಯಹ ಆಯಾ ಹೂಂ, ಮುಜೇ ತೋ ಮಾ ಗಂಗಾ ನೇ ಬುಲಾಯಾ ಹೈ’ ಈ ಒಂದು ಮಾತು ಕೋಟ್ಯಂತರ ಭಾರತೀಯರ ಹೃದಯದ ಅಂತರಾಳಕ್ಕೆ ಇಳಿದಿತ್ತು. ೨೦೧೪ರ ಲೋಕಸಭಾ ಚುನಾವಣೆ ಪೂರ್ವದಲ್ಲಿ ವಾರಾಣಸಿಯ ಪುಣ್ಯ ನೆಲದಲ್ಲಿ ಅಂದಿನ ಬಿಜೆಪಿ ಪ್ರಧಾನಿ ಅಭ್ಯರ್ಥಿಯಾಗಿದ್ದ ನರೇಂದ್ರ ಮೋದಿ ಹೇಳಿದ್ದ ಈ ಮಾತು ಈಗಲೂ ಜನರನ್ನು ಪುಳಕಿತರನ್ನಾಗಿಸುತ್ತಿದೆ.

ಸನಾತನ ಸಂಸ್ಕೃತಿಯ ನೆಲೆಗಟ್ಟಿನ ಮೇಲೆ ನಿಂತಿರುವ ಭಾರತೀಯ ಪರಂಪರೆಗೆ ತನ್ನದೇ ಆದ ವೈಶಿಷ್ಟ್ಯ ಇದ್ದೇ ಇದೆ. ಹಾಗೆಯೇ ಈ ಪುಣ್ಯ ಭೂಮಿ ಮೇಲೆ ಆಯಾ ಕಾಲಘಟ್ಟದಲ್ಲಿ ಶ್ರೇಷ್ಠತೆಯ ಸಾಕ್ಷಾತ್ಕಾರದ ದರ್ಶನವೂ ಆಗುತ್ತದೆ. ಅಂತಹುದೇ ಒಂದು ಅದ್ಬುತ ಘಳಿಗೆ ಬಂದೊದಗಿದ್ದು ಮೋದಿ ಎಂಬ ಮಹಾನ್ ನಾಯಕನಿಂದ. ಸಾಕ್ಷಾತ್ ಪರಶಿವ ತನ್ನ ಸೇವೆಗೆ ಶ್ರೇಷ್ಠ ನಾಯಕನನ್ನೇ ನೇಮಕ ಮಾಡಿಕೊಂಡಿದ್ದು ಆಯ್ತು, ಈಗ ಅದರ ಫಲದ ಆನಂದ
ಅನುಭವಿಸುತ್ತಿರುವುದು ಆಯ್ತು.

ಕಾಶಿ, ವಾರಾಣಸಿ, ಬನಾರಸ್ ಹೆಸರಿನಿಂದ ಕರೆಯಲ್ಪಡುವ ಜಗತ್ತಿನ ಅತ್ಯಂತ ಪುರಾತನ ನಗರಗಳಂದಾದ ಉತ್ತರಪ್ರದೇಶದ ಕಾಶಿ ನಗರ ಹಿಂದೂಗಳ ಪವಿತ್ರ ತೀರ್ಥಕ್ಷೇತ್ರ. ಜೀವಿತಾವಽಯಲ್ಲಿ ಒಂದು ಬಾರಿ ಕಾಶಿ ವಿಶ್ವನಾಥನ ದರ್ಶನ ಹಾಗೂ ಪವಿತ್ರ ಗಂಗಾನದಿಯ ಸ್ನಾನ ಅಸಂಖ್ಯಾತ ಹಿಂದೂಗಳ
ಮಹತ್ವದ ಆಸೆಯೂ ಹೌದು. ಇಂತಹ ಕ್ಷೇತ್ರದಲ್ಲಿ ಕಳೆದ ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿ ಹಾಗೂ ಸದ್ಯ ಆಗಿರುವ ಅಭಿವೃದ್ಧಿ ಕಾರ್ಯಗಳನ್ನು
ಗಮನನಿಸಿದರೆ ತಿಳಿಯುತ್ತದೆ, ಒಬ್ಬ ಸಂಸದ ಮನಸ್ಸು ಮಾಡಿದರೆ ತಾನು ಪ್ರತಿನಿಧಿಸುವ ಕ್ಷೇತ್ರದ ಚಿತ್ರಣವನ್ನೇ ಬದಲಾವಣೆ ಹೇಗೆ ಮಾಡಬಹುದು
ಎಂದು.

ಅದು ೨೦೧೪ರ ಸಮಯ. ಕಾಂಗ್ರೆಸ್ ಸರಕಾರದ ಆಡಳಿತದಿಂದ ಬೇಸತ್ತಿದ್ದ ದೇಶದ ಜನರಿಗೆ ಹೊಸ ಆಶಾಕಿರಣವಾಗಿದ್ದು ಮೋದಿ ಎಂಬ ಸುನಾಮಿ. ದಶಕಗಳ ನಂತರ ಭಾರತದ ರಾಜಕೀಯ ವ್ಯವಸ್ಥೆಗೆ ಸ್ಥಿರ ಹಾಗೂ ಸಮರ್ಥ ನಾಯಕತ್ವದ ಕನಸು ಹೊಂದಿದ್ದ ಜನರಿಗೆ ಅಂದಿನ ಗುಜರಾತ್ ಸಿಎಂ
ನರೇಂದ್ರ ಮೋದಿ ಬೆಳಕಾಗಿ ಕಂಡರು. ಇದೇ ಸಂದರ್ಭದಲ್ಲಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ತಮ್ಮ ಮೊದಲ ಲೋಕಸಭಾ ಚುನಾವಣೆ ಸ್ಪರ್ಧೆಗೆ ತವರು ಕ್ಷೇತ್ರ ಗುಜರಾತಿನ ವಡೋದರ ಹಾಗೂ ಉತ್ತರ ಪ್ರದೇಶದ ಕಾಶಿ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು.

ಕಾಶಿ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವದರ ಹಿಂದೆ ನರೇಂದ್ರ ಮೋದಿಯವರ ಹಲವಾರು ರಾಜಕೀಯ ಲೆಕ್ಕಾಚಾರ ಇರಬಹುದು, ಆದರೆ ಅಸಂಖ್ಯಾತ ಹಿಂದೂಗಳ ಪವಿತ್ರ ಕ್ಷೇತ್ರವನ್ನು ಪ್ರತಿನಿಧಿಸುವ ಮೂಲಕ ಜಗತ್ರಿಗೆ ಒಂದು ಸಂದೇಶ ನೀಡುವ ನಿರ್ಧಾರವನ್ನಂತು ತಳ್ಳಿಹಾಕಲಾಗದು. ಅಂದು ಪ್ರಧಾನಿ ಅಭ್ಯರ್ಥಿ ಮೋದಿ ಕಾಶಿ ನೆಲದಲ್ಲಿ ನಿಂತು ಹೇಳಿದ್ದ ‘ನಾ ಮುಝೆ ಕಿಸಿ ನೇ ಭೇಜಾ ಹೈ, ನಾ ಮೈ ಯಹ ಆಯಾ ಹೂಂ, ಮುಜೇ ತೋ ಮಾ ಗಂಗಾ ನೇ ಬುಲಾಯಾ ಹೈ’ ಎಂಬ ಮಾತು ಹತ್ತು ವರ್ಷಗಳ ನಂತರವೂ ದೇಶದ ಜನರಲ್ಲಿ ಸಂಚಲನ ಮೂಡಿಸುವಂತದ್ದೇ.

ಬೇರೆ ಸಂಸದರಂತೆ ಪ್ರಧಾನಿ ಮೋದಿ ಕೇವಲ ಸುಳ್ಳು ಭರವಸೆ ನೀಡಿದ್ದರೆ ೨೦೧೯ರಲ್ಲಿ ಅದೇ ಕಾಶಿ ಕ್ಷೇತ್ರದಲ್ಲಿ ೪ ಲಕ್ಷ ೭೯ ಸಾವಿರ ಮತಗಳ ಅಂತರದಿಂದ ಜನ ಗೆಲ್ಲಿಸುತ್ತಿರಲಿಲ್ಲ. ಕೊಟ್ಟ ಮಾತಿನಂತೆ ೨೦೧೪ರಲ್ಲಿ ತವರು ಕ್ಷೇತ್ರ ವಡೋದರ ಬಿಟ್ಟು ಕಾಶಿಯನ್ನು ಕರ್ಮಭೂಮಿಯಾಗಿ ಮಾಡಿಕೊಂಡ ಮೋದಿ ಮೊದಲು ಮಾಡಿದ್ದೇ ಗಂಗೆಯ ಸ್ವಚ್ಚತೆ. ಗಂಗಾ ನದಿ ಕೇವಲ ಧಾರ್ಮಿಕವಾಗಿ ಪ್ರಾಮುಖ್ಯತೆ ಹೊಂದಿಲ್ಲ. ಕೋಟ್ಯಂತರ ರೈತರ ಪಾಲಿಗೆ ಜೀವನದಿ ಯಾಗಿದೆ. ಇದನ್ನು ಉಳಿಸಿಕೊಳ್ಳುವುದರ ಜೊತೆಗೆ ಕೊಟ್ಟ ಮಾತಿನಂತೆ ಮೋದಿ ಬೃಹತ್ ಯೋಜನೆಯನ್ನು ರೂಪಿಸಿದರು.

ನಮಾಮಿ ಗಂಗಾ ಯೋಜನೆ ಗಂಗೆಯ ಸೇವೆ ಸಲ್ಲಿಸುವುದು ನನ್ನ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದ್ದ ಪ್ರಧಾನಿ ನರೇಂದ್ರ ಮೋದಿ ಗಂಗಾ ನದಿ ಶುದ್ಧೀಕರಣಕ್ಕೆ ಬೃಹತ್ ಯೋಜನೆಯನ್ನೇ ರೂಪಿಸಿದರು. ಕಾಶಿ ವಿಶ್ವನಾಥ ಸನ್ನಿಧಿಯಲ್ಲಿನ ಗಂಗಾ ನದಿ ದಂಡೆ ಎಷ್ಟು ಕಲುಷಿತಗೊಂಡಿತ್ತು ಎಂದರೆ ಪವಿತ್ರ ನದಿ ಸ್ನಾನ ಮಾಡಲು ಒಂದು ಕ್ಷಣ ಹಿಂದೇಟು ಹಾಕುವ ಪರಿಸ್ಥಿತಿ ಕಾಶಿಯಲ್ಲಿತ್ತು. ಕೈಗಾರಿಕೆಗಳ ತ್ಯಾಜ್ಯ, ಹಿಂದೆ ಆಳಿದ್ದ ಸರಕಾರಗಳ ಅವೈeನಿಕ ನಿರ್ಧಾರ ಮತ್ತು ನಿರ್ಲಕ್ಷ್ಯದ ಫಲವಾಗಿ ಗಂಗೆ ಸಾಕಷ್ಟು ಕಲುಷಿತಗೊಂಡಿದ್ದಳು. ಆದರೆ ಮೋದಿ ಆಡಳಿತ ವೈಖರಿಯ ಫಲವಾಗಿ ಗಂಗೆಯ ಶುದ್ಧೀಕರಣ
ಕಾರ್ಯಕ್ಕೆ ವೇಗ ಹೆಚ್ಚಿತ್ತು.

ದೇಶದ ಶೇ.೪೦ ರಷ್ಟು ಜನರ ಅವಲಂಬನೆಯ ಜೀವನದಿಯಾಗಿರುವ ಗಂಗೆಯ ಶುದ್ದೀಕರಣದಿಂದ ಆಗುವ ಲಾಭವನ್ನು ಪ್ರಧಾನಿ ಊಹಿಸಿದ್ದರು. ಕೇವಲ ಆ ಕ್ಷಣಕ್ಕೆ ಅಭಿವೃದ್ಧಿ ಹಮ್ಮಿಕೊಳ್ಳದೇ ಭವಿಷ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಹಾಗೂ ಕೇಂದ್ರ ಸರಕಾರದ ಸಹಯೋಗದೊಂದಿಗೆ ನಮಾಮಿ
ಗಂಗಾ ಯೋಜನೆ ಕಾರ್ಯ ನಿರ್ವಹಿಸುವಂತೆ ಕ್ರಮ ಕೈಗೊಂಡಿzರೆ. ಅಂಕಿ ಅಂಶಗಳ ಪ್ರಕಾರ ಈವರೆಗೂ ೨೦ ಸಾವಿರ ಕೋಟಿ ವಿನಿಯೋಗ ಹಾಗೂ ನದಿ ಉಳಿಸುವ ಕೇವಲ ಈ ಒಂದು ಯೋಜನೆಗಾಗಿ ಅನುದಾನ ಮೀಸಲಿಟ್ಟಿದ್ದು ಸ್ವತಂತ್ರ ಭಾರತದ ಇತಿಹಾಸಗಳಲ್ಲಿ ಒಂದು.

ಒಂದು ಯೋಜನೆ ಯಶಸ್ವಿಯಾಗಬೇಕಾದರೆ ಎಲ್ಲ ಆಯಾಮಗಳಲ್ಲಿ ಅಧ್ಯಯನ ಮಾಡಿ ಅನುಷ್ಠಾನ ಮಾಡಬೇಕಾಗುತ್ತದೆ. ಗಂಗಾ ನದಿ ಶುದ್ದೀಕರಣ ವಿಷಯದಲ್ಲಿಯೂ ಕೈಗಾರಿಕೆಗಳ ತಾಜ್ಯ ನೀರು ನದಿಗೆ ಸೇರಿದಂತೆ ಕ್ರಮವಹಿಸಿದ್ದು. ಕಲುಷಿತಗೊಂಡ ಗಂಗೆಯನ್ನು ವೈಜ್ಞಾನಿಕ ಉಪಕರಣಗಳ ಮೂಲಕ ಸ್ವಚ್ಛಗೊಳಿಸುವುದು. ಜನರ ಧಾರ್ಮಿಕ ಭಾವನೆಗಳಿಗೆ ದಕ್ಕೆ ಆಗದಂತೆ ಕೆಲವು ಪರಿಣಾಮಕಾರಿ ಕ್ರಮ ಕೈಗೊಂಡ ಪರಿಣಾಮ ಇಂದು ಅದರ ಫಲ ಸಿಕ್ಕಿದೆ.
ಸುದೀರ್ಘ ಹತ್ತು ವರ್ಷಗಳ ಅವಧಿಯಲ್ಲಿ ಕೇವಲ ಗಂಗಾ ನದಿಗಾಗಿಯೇ ಕೇಂದ್ರದ ಮೋದಿ ಸರಕಾರ ಹಾಗೂ ರಾಜ್ಯದ ಯೋಗಿ ಸರಕಾರ ಕೈಗೊಂಡ ಕಾರ್ಯಗಳ ಫಲವಾಗಿ ಇಂದು ಕಾಶಿ ನಗರದಲ್ಲಿ ಗಂಗೆ ಪ್ರಶಾಂತವಾಗಿ ಹರಿಯುತ್ತಿದ್ದಾಳೆ.

ಗಂಗೆ ತನ್ನ ಸೇವೆಗಾಗಿಯೇ ನರೇಂದ್ರ ಮೋದಿಯವರನ್ನು ಕಾಶಿಗೆ ಕರೆಸಿಕೊಂಡಿದ್ದಾಳೆ ಎಂಬುದು ಅಷ್ಟೇ ಸತ್ಯ. ಈ ಮಾತನ್ನು ಹತ್ತು ವರ್ಷಗಳ ನಂತರವೂ ಮೋದಿ ಭಾವುಕತೆಯಿಂದ ನೆನಪಿಸಿಕೊಂಡಾಗ ದೇಶದ ಜನರಿಗೆ ಇಂತಹ ಮಾದರಿ ಸಂಸದ ನಮ್ಮ ಕ್ಷೇತ್ರಕ್ಕೂ ಸಿಗಲಿ ಎಂಬ ಆಶಾಭಾವನೆ
ಮೂಡಿದ್ದು ಸುಳ್ಳಲ್ಲ. ದೇಶಕ್ಕೆ ಪ್ರಧಾನಿಯಾದರು ಮೋದಿ ಕಾಶಿ ಕ್ಷೇತ್ರದ ಜನಕ್ಕೆ ಸಂಸದರೇ. ದೇಶದ ಅಭಿವೃದ್ಧಿ ಒಂದುಕಡೆಯಾದರೆ ಅಲ್ಲಿನ ಜನ ಸಂಸದರಾಗಿ ಮೋದಿ ಮಾಡಿರುವ ಅಭಿವೃದ್ಧಿ ಕೆಲಸಗಳ ಮೇಲೆ ಹೆಚ್ಚಿನ ಆಶಾಭಾವನೆ ಹೊಂದಿರುತ್ತಾರೆ.

ಎರಡು ಬಾರಿ ದಾಖಲೆ ಅಂತರದಲ್ಲಿ ಜನ ಮತ ನೀಡುತ್ತಾರೆ ಎಂದರೆ ಸ್ವ ಕ್ಷೇತ್ರದಲ್ಲಿ ಮೋದಿ ಕೈಗೊಂಡ ಅಭಿವೃದ್ಧಿ ಫಲ ಎಂಬುದು ಸ್ಪಷ್ಟ. ಇದೇ ಹೋಲಿಕೆಯನ್ನು ಗಾಂಧಿ ಕುಟುಂಬಕ್ಕೆ ಮಾಡಿದರೆ ಸದ್ಯ ಗೆಲುವಿಗಾಗಿ ಕ್ಷೇತ್ರ ಹುಡುಕಾಟ ನಡೆಸುವ ಪರಿಸ್ಥಿತಿ ಬರಲು ಕಾರಣ ಇದೇ ಅಭಿವೃದ್ಧಿ ನಿರ್ಲಕ್ಷ್ಯ ಎಂದರೆ ತಪ್ಪಾಗಲಾರದು.

ಕಾಶಿ ಕ್ಷೇತ್ರದ ಅಭಿವೃದ್ಧಿಗೆ ಪ್ರಧಾನಿ ಮೋದಿ ಕೊಟ್ಟ ಭರವಸೆ ಭಾಗಶಃ ಇಡೇರಿದೆ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಜನರ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗತಿಗಳು ವೇಗವಾಗಿ ಅಭಿವೃದ್ಧಿ ಸಾಧಿಸಿವೆ. ಒಂದು ಧಾರ್ಮಿಕ ಕ್ಷೇತ್ರದ ಅಭಿವೃದ್ಧಿ ಜತೆಗೆ ಇಡೀ ರಾಜ್ಯಕ್ಕೆ ಆಗಬಹುದಾದ ಲಾಭಗಳು ಅಷ್ಟಿಷ್ಟಲ್ಲ. ಅಂಕಿ ಅಂಶಗಳ ಪ್ರಕಾರ ೨೦೧೭ – ೧೮ ರ ಅವಧಿಯಲ್ಲಿ ಕಾಶಿಗೆ ೬೦ ಲಕ್ಷ ಧಾರ್ಮಿಕ ಪ್ರವಾಸಿಗರು ಭೇಟಿ ನೀಡಿದ್ದರೆ ೨೦೨೨ – ೨೩ ಕ್ಕೆ ಈ ಸಂಖ್ಯೆ ಸರಿಸುಮಾರು ಏಳು ಕೋಟಿಗೆ ಏರಿಕೆಯಾಗಿದೆ.

೧೨ ಪಟ್ಟು ಪ್ರವಾಸಿಗರು ಭೇಟಿ ಹೆಚ್ಚಳ ಆಗಿದೆ ಎಂದರೆ ಕಾಶಿ ನಗರದ ಅಭಿವೃದ್ಧಿಗೆ ಸರಕಾರಗಳು ಎಷ್ಟು ಶ್ರಮಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.
ನಿರ್ಲಕ್ಷ್ಯವೇ ಪ್ರತಿಪಕ್ಷಗಳ ಮಹಾ ಪ್ರಮಾದ ಭೌಗೋಳಿಕವಾಗಿ ಅತ್ಯಂತ ವಿಶಾಲ ಹಾಗೂ ಮಾನವ ಸಂಪನ್ಮೂಲ ಶಕ್ತಿಯ ಜೊತೆ ಆಧ್ಯಾತ್ಮಿಕ ಶಕ್ತಿ ಕೇಂದ್ರವಾದ ಕಾಶಿ ಕ್ಷೇತ್ರವನ್ನು, ಈ ಹಿಂದೆ ಆಳ್ವಿಕೆ ನಡೆಸಿದ್ದ ಸರಕಾರಗಳು ನಿರ್ಲಕ್ಷ್ಯ ಮಾಡಿದ್ದರ ಪರಿಣಾಮವಾಗಿ ಅಲ್ಲಿನ ಜನ ಚುನಾವಣೆಯಲ್ಲಿ
ತಕ್ಕ ಉತ್ತರ ಈಗಾಗಲೇ ನೀಡಿದ್ದಾರೆ. ದಶಕಗಳ ಕಾಲ ಉತ್ತರಪ್ರದೇಶ ರಾಜ್ಯವನ್ನಾಳಿದ ಕಾಂಗ್ರೆಸ್, ಬಹುಜನ ಸಮಾಜವಾದಿ ಪಕ್ಷ ಹಾಗೂ ಸಮಾಜವಾದಿ ಪಕ್ಷಗಳು ಕೇವಲ ಒಡೆದಾಳುವ ನೀತಿಯಿಂದಲೇ ಅಧಿಕಾರ ಅನುಭವಿಸಿದರು.

ಆದರೆ ರಾಜ್ಯದ ಜನರ ಆರ್ಥಿಕ ಪ್ರಗತಿ ಹಾಗೂ ದೇಶದ ಜನರ ಭಾವನಾತ್ಮಕ ಆಲೋಚನಗೆಗಳಿಗೆ ಯಾವತ್ತೂ ಬೆಲೆ ನೀಡಲಿಲ್ಲ. ಈ ಕಾರಣದಿಂದಲೇ ಸಂವಿಧಾನಾತ್ಮಕವಾಗಿ ಜನ ತಕ್ಕ ಉತ್ತರ ನೀಡಿzರೆ. ಈ ಹಿಂದೆ ಕಾಶಿ ವಿಶ್ವನಾಥನ ದರ್ಶನ ಪಡೆಯಬೇಕಿದ್ದರೆ ಅಂಕು, ಹೊಂಕಿನ ಪುಟ್ಟ ರಸ್ತೆಗಳ
ಮೂಲಕ ಹರಸಾಹಸ ಪಟ್ಟು ಹೋಗಬೇಕಾದ ಪರಿಸ್ಥಿತಿ ಇತ್ತು. ಗಂಗಾನದಿ ಹಾಗೂ ವಿಶ್ವನಾಥನಿಗೆ ಸಂಬಂಧವೇ ಇಲ್ಲದಂತೆ ಇಕ್ಕೆಲಗಳ ನಿರ್ಮಾಣದಿಂದ ಭಕ್ತರಿಗೆ ನಾವು ಎಲ್ಲಿದ್ದೇವೆ ಎಂಬುವುದೇ ತಿಳಿಯುತ್ತಿರಲಿಲ್ಲ. ಆದರೆ ವಿಶಾಲ ಕಾಶಿ ಕಾರಿಡಾರ್ ನಿರ್ಮಾಣದ ಮೂಲಕ ಗಂಗೆಗೆ ಪ್ರತಿ ಕ್ಷಣ ವಿಶ್ವನಾಥನ ದರ್ಶನವನ್ನು ಮಾಡಿಸುವಲ್ಲಿ ಪ್ರಧಾನಿ ಮೋದಿ ಯಶಸ್ವಿಯಾಗಿzರೆ. ಸಧ್ಯಕ್ಕೆ ಕಾಶಿ ಕ್ಷೇತ್ರ ಅನೇಕ ಅಭಿವೃದ್ಧಿಗಳನ್ನು ಖಂಡಿದೆ.

ಸಾರಿಗೆ ಸಂಪರ್ಕ ಸೇರಿದಂತೆ ಜನರಿಗೆ ಒಂದು ಸುಂದರ ನಗರದ ದರ್ಶನವೂ ಸುಲಭವಾಗಿದೆ. ದೇಶಕ್ಕೆ ಯಶಸ್ವಿ ಪ್ರಧಾನಿಯಾಗುವುದರ ಜತೆಗೆ
ಒಬ್ಬ ಕ್ರಿಯಾಶೀಲ ಸಂಸದರಾಗಿಯೂ ನರೇಂದ್ರ ಮೋದಿ ಯಶಸ್ವಿಯಾಗಿದ್ದು ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿ.