ಮುಂಬೈ: 9ನೇ ಆವೃತ್ತಿಯ ಟಿ20 ವಿಶ್ವಕಪ್ ಅಮೆರಿಕ ಮತ್ತು ಕೆನಡಾ ನಡುವಿನ ಪಂದ್ಯದೊಂದಿಗೆ ಆರಂಭವಾಗಲಿದೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಜೂನ್ 5 ರಂದು ಐರ್ಲೆಂಡ್ ವಿರುದ್ಧ ಆಡಲಿದೆ.
ಈ ಮೆಗಾ ಟೂರ್ನಮೆಂಟ್‌ಗೂ ಮುನ್ನ ಐಸಿಸಿ ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಅಭ್ಯಾಸ ಪಂದ್ಯಗಳು ಮೇ 27 ರಂದು ಪ್ರಾರಂಭ ವಾಗುತ್ತವೆ.
ಭಾರತ ತಂಡ ತನ್ನ ಪಂದ್ಯವನ್ನು ಜೂನ್ 1 ರಂದು ಆಡಲಿದೆ. ಭಾರತ ತಂಡ ಬಾಂಗ್ಲಾದೇಶದೊಂದಿಗೆ ಪೈಪೋಟಿ ನಡೆಸಲಿದೆ. ಟಿ20ಯಲ್ಲಿ ಉಭಯ ತಂಡಗಳ ನಡುವಿನ ದಾಖಲೆಯ ಕುರಿತು ಮಾತನಾಡುವುದಾದರೆ, ಇಲ್ಲಿಯವರೆಗೆ ಎರಡೂ ತಂಡಗಳು 13 ಬಾರಿ ಮುಖಾಮುಖಿಯಾಗಿವೆ. ಈ ಅವಧಿ ಯಲ್ಲಿ ಭಾರತವೇ ಮೇಲುಗೈ ಸಾಧಿಸಿದೆ. ಭಾರತ 13 ಪಂದ್ಯಗಳಲ್ಲಿ 12ರಲ್ಲಿ ಗೆದ್ದಿದೆ.
ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳಾಪಟ್ಟಿ:
ಮೇ 27ರಂದು ನಡೆಯಲಿರುವ ಪಂದ್ಯಗಳು:
1. ಕೆನಡಾ vs ನೇಪಾಳ
2. ನಮೀಬಿಯಾ vs ಉಗಾಂಡಾ
3. ಓಮನ್ vs ಪಪುವಾ ನ್ಯೂಗಿನಿಯಾ
ಮೇ 28 ರಂದು ನಡೆಯಲಿರುವ ಪಂದ್ಯಗಳು:
1. ಶ್ರೀಲಂಕಾ vs ನೆದರ್ಲ್ಯಾಂಡ್ಸ್
2. ಆಸ್ಟ್ರೇಲಿಯಾ vs ನಮೀಬಿಯಾ
3. ಬಾಂಗ್ಲಾದೇಶ vs ಯುಎಸ್‌ಎ
1. ದಕ್ಷಿಣ ಆಫ್ರಿಕಾ ಸ್ಕ್ವಾಡ್ ಗೇಮ್
2. ಅಫ್ಘಾನಿಸ್ತಾನ vs ಓಮನ್
ಮೇ 30 ರಂದು ನಡೆಯಲಿರುವ ಪಂದ್ಯಗಳು:
1. ನೇಪಾಳ vs ಯುಎಸ್‌ಎ
2. ನೆದರ್ಲ್ಯಾಂಡ್ಸ್ vs ಕೆನಡಾ
3. ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ
4. ಸ್ಕಾಟ್ಲೆಂಡ್ vs ಉಗಾಂಡಾ
5. ನಮೀಬಿಯಾ vs ಪಪುವಾ ನ್ಯೂಗಿನಿಯಾ
ಮೇ 31 ರಂದು ನಡೆಯಲಿರುವ ಪಂದ್ಯಗಳು:
1. ಐರ್ಲೆಂಡ್ vs ಶ್ರೀಲಂಕಾ
2. ಸ್ಕಾಟ್ಲೆಂಡ್ vs ಅಫ್ಘಾನಿಸ್ತಾನ
ಜೂನ್ 1 ರಂದು ನಡೆಯಲಿರುವ ಪಂದ್ಯಗಳು:
1. ಭಾರತ vs ಬಾಂಗ್ಲಾದೇಶ