Thursday, 12th December 2024

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಯಾಮಿ ಗೌತಮ್‌

ಮುಂಬೈ: ಟಿ ಯಾಮಿ ಗೌತಮ್‌ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗುವಿಗೆ ನಾಮಕರಣ ಮಾಡಿ ಈ ವಿಚಾರವನ್ನು ಸೋಶಿಯಲ್ ಮೀಡಿಯಾ ದಲ್ಲಿ ಹಂಚಿಕೊಂಡಿದ್ದಾರೆ. ಅಕ್ಷಯ ತೃತೀಯ ದಿನವೇ ಮಗುವಿಗೆ ಜನ್ಮ ನೀಡಿದ್ದು ಇದೀಗ ಆ ವಿಚಾರ ಬಹಿರಂಗಪಡಿಸಿದ್ದಾರೆ.

ʻʻಪೋಷಕರಾಗಿ ಈ ಸುಂದರ ಪ್ರಯಾಣವನ್ನು ನಾವು ಪ್ರಾರಂಭಿಸಿದಾಗ, ನಮ್ಮ ಮಗನಿಗಾಗಿ ಕಾಯುತ್ತಿರುವ ಉಜ್ವಲ ಭವಿಷ್ಯವನ್ನು ನಾವು ಕುತೂಹಲ ದಿಂದ ನಿರೀಕ್ಷಿಸುತ್ತೇವೆ.

ಅವನು ಸಾಧಿಸುವ ಪ್ರತಿ ಮೈಲುಗಲ್ಲು, ಅವರು ನಮ್ಮ ಇಡೀ ಕುಟುಂಬಕ್ಕೆ ಮತ್ತು ನಮ್ಮ ಪ್ರೀತಿಯ ರಾಷ್ಟ್ರಕ್ಕೆ ಹೆಮ್ಮೆಯ ದಾರಿದೀಪವಾಗಿ ಬೆಳೆಯುತ್ತಾನೆ ಎಂಬ ಭರವಸೆ ಮತ್ತು ನಂಬಿಕೆಯಿಂದ ನಾವಿದ್ದೇವೆʼʼ‌ ಎಂದು ಯಾಮಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

‘ವೇದವಿದ್’ ಅಕ್ಷಯ ತೃತೀಯ ದಿನ ಹುಟ್ಟಿದ. ಅವನಿಗೆ ನಿಮ್ಮೆಲ್ಲರ ಪ್ರೀತಿ ಆಶೀರ್ವಾದ ಬೇಕು ಎಂದು ನಟಿ ಶೇರ್‌ ಮಾಡಿಕೊಂಡಿದ್ದಾರೆ.