ಕೊಲ್ಹಾರ: ಆಲಮಟ್ಟಿ ಜಲಾಶಯದಿಂದ ತೆಲಂಗಾಣಕ್ಕೆ ರಾಜ್ಯ ಸರ್ಕಾರ ವಾಮ ಮಾರ್ಗದ ಮೂಲಕ ನೀರು ಹರಿಸುತ್ತಿರುವುದು ಖಂಡನೀಯ ಎಂದು ಬಿಜೆಪಿ ಮುಖಂಡ ಟಿ.ಟಿ ಹಗೇದಾಳ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಟ್ಟಣದಲ್ಲಿ ಮಾದ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ರಾಜ್ಯದ ಹಿತಾಸಕ್ತಿಯನ್ನು ಕಡೇಗಣಿಸಿ ರಾಜ್ಯ ಕಾಂಗ್ರೆಸ ಸರ್ಕಾರ ತೆಲಂಗಾಣ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿ.ಡಬ್ಲ್ಯು.ಸಿ ನಿಯಮಕ್ಕಿಂತ ಕನಿಷ್ಠ ಮಟ್ಟದ ನೀರು ಇರಲಾಗಿಯೂ ಕೂಡ ನಿಯಮಗಳಯನ್ನು ಉಲ್ಲಂಘಿಸಿ ಜಲಾಶಯದಿಂದ ತೆಲಂಗಾಣಕ್ಕೆ ನೀರು ಹರಿಸಲಾತ್ತಿದೆ ಅಲ್ಲದೆ ಜಲಾಶಯದಲ್ಲಿ ಹೆಚ್ಚಿನ ಒಳಹರಿವು ಇರುವ ಸಂದರ್ಭದಲ್ಲಿ ಎನ್‌ಟಿಪಿಸಿಗೆ ಒಟ್ಟಾರೆ 5 ಟಿಎಂಸಿ ಅಡಿಯಷ್ಟು ನೀರು ಬಿಡಬೇಕು ಆ ನೀರನ್ನು ಎನ್‌ಟಿಪಿಸಿ ತನ್ನ ಸಂಗ್ರಹಾರಗಳಲ್ಲಿ ಸಂಗ್ರಹಿಸಿಟ್ಟುಕೊಂಡು ಬಳಕೆ ಮಾಡಬೇಕು ಎನ್ನುವ ಒಪ್ಪಂದವಿದ್ದರು ಕೂಡ ಎನ್.ಟಿ.ಪಿ.ಸಿ.ಗೆ ಪ್ರತಿದಿನ 3000 ಕ್ಯೂಸೆಕ್ ನಷ್ಟು ನೀರು ಬಿಡಲಾಗುತ್ತಿದೆ.
ಅಧಿಕಾರಿಗಳು, ಜನಪ್ರತಿನಿಧಿಗಳು ಜನ, ಜಾನುವಾರುಗಳ ಹಿತವನ್ನು ಕಡೆಗಣಿಸಿ ತೆಲಂಗಾಣಕ್ಕೆ, ಎನ್.ಟಿ.ಪಿ.ಸಿ.ಗೆ ನೀರು ಹರಿಸುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಜಲಾಶಯ ಖಾಲಿಯಾಗುವ ಸಂಭವವಿದೆ ಜಿಲ್ಲೆಯ ಜನರು ನೀರಿಗಾಗಿ ಹಾಹಾಕಾರ ಉಂಟಾಗುವುದರಲ್ಲಿ ಸಂಶಯವೇ ಇಲ್ಲ ಎಂದು ಅವರು ಹೇಳಿದರು.