ಮೆಲ್ಬೋರ್ನ್: ಫ್ರೆಂಚ್ ಪೆಸಿಫಿಕ್ ಪ್ರದೇಶ ನ್ಯೂ ಕ್ಯಾಲೆಡೋನಿಯಾದಿಂದ ಆಸ್ಟ್ರೇಲಿಯಾದ ಮಿಲಿಟರಿ ಎರಡು ವಿಮಾನಗಳಲ್ಲಿ 115 ತಮ್ಮ ದೇಶದ ಪ್ರಯಾಣಿಕರನ್ನು ಕರೆ ತಂದಿದೆ. ಇದೇ ವೇಳೆ, ಫ್ರೆಂಚ್ ಸರ್ಕಾರ ಇನ್ನೂ 100 ಪ್ರಯಾಣಿಕರನ್ನು ವಿಮಾನದ ಮೂಲಕ ಸ್ಥಳಾಂತರಿಸುವ ನಿರೀಕ್ಷೆಯಿದೆ ಎಂದು ಆಸ್ಟ್ರೇಲಿಯಾದ ಸರ್ಕಾರದ ಸಚಿವರು ತಿಳಿಸಿದ್ದಾರೆ.
ನ್ಯೂ ಕ್ಯಾಲೆಡೋನಿಯಾದಲ್ಲಿ ಇತ್ತೀಚಿನ ಸಶಸ್ತ್ರ ಘರ್ಷಣೆಗಳು, ಲೂಟಿ ಮತ್ತು ಬೆಂಕಿಯ ಹಚ್ಚಿ ಹಿಂಸಾಚಾರ ಹೆಚ್ಚಾಗಿದ್ದು, ಇದರಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ ಮತ್ತು ನೂರಾರು ಜನರು ಗಾಯಗೊಂಡಿದ್ದಾರೆ.
ಕಳೆದ ಮೇ 13 ರಂದು ಪ್ಯಾರಿಸ್‌ನಲ್ಲಿನಲ್ಲಿನ ಫ್ರೆಂಚ್ ಸಮಸದರು ಸಭೆ ಸೇರಿ ನ್ಯೂ ಕ್ಯಾಲೆಡೋನಿಯಾ ಮತದಾರರ ಪಟ್ಟಿಯಲ್ಲಿ ಬದಲಾವಣೆಗಳನ್ನು ಮಾಡಲು ಫ್ರೆಂಚ್ ಸಂವಿಧಾನವನ್ನು ತಿದ್ದುಪಡಿ ಮಾಡುವ ಬಗ್ಗೆ ಚರ್ಚೆ ನಡೆಸುತ್ತಿದ್ದಂತೆ ಅಶಾಂತಿ ಸ್ಫೋಟಗೊಂಡಿತ್ತು.
ಇದನ್ನು ವಿರೋಧಿಸಿ ನ್ಯೂ ಕ್ಯಾಲೆಡೋನಿಯಾದಲ್ಲಿ ಹಿಂಸಾಚಾರ ಶುರುವಾಗಿದೆ.