ಚೆನ್ನೈ: ಪ್ರಸಕ್ತ ಆರ್ಥಿಕ ವರ್ಷದಲ್ಲಿ ಖಾಸಗಿ ವಲಯದ ಹಾಗೂ ತಮಿಳುನಾಡು ಮೂಲದ ಕರೂರು ವೈಶ್ಯ ಬ್ಯಾಂಕ್ ದೇಶದಾದ್ಯಂತ 100 ಹೊಸ ಶಾಖೆಗಳನ್ನು ತೆರೆಯುವುದಾಗಿ ಘೋಷಿಸಿದೆ.
ಬುಧವಾರ ಅಯೋಧ್ಯೆಯಲ್ಲಿ ಬ್ಯಾಂಕ್‌ನ 844ನೇ ಶಾಖೆಯನ್ನು ಉದ್ಘಾಟಿಸಿದ ಕರೂರು ವೈಶ್ಯ ಬ್ಯಾಂಕ್ ಅಧ್ಯಕ್ಷೆ ಮೀನಾ ಹೇಮಚಂದ್ರ ಈ ವಿಷಯ ತಿಳಿಸಿದರು. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಈಗಾಗಲೇ 39 ಶಾಖೆಗಳನ್ನು ತೆರೆದಿದೆ. ಇನ್ನೂ ನೂರು ಶಾಖೆಗಳನ್ನು ತೆರೆಯಲಾಗುವುದು ಎಂದು ಹೇಳಿದ್ದಾರೆ.
ಬ್ಯಾಂಕ್ ಕಳೆದ ಆರ್ಥಿಕ ವರ್ಷದಲ್ಲಿ ದಾಖಲೆಯ ₹1,605 ಕೋಟಿ ನಿವ್ವಳ ಲಾಭ ಗಳಿಸಿದೆ. ಅಲ್ಲದೇ ಎನ್‌ಪಿಎ ಕೂಡ 0.40ಕ್ಕೆ ಕುಸಿತ ಕಂಡಿದೆ ಎಂದು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಉದ್ಘಾಟನೆಯಾಗಿರುವ ಶಾಖೆ ಈ ಬ್ಯಾಂಕ್‌ನ ದೆಹಲಿ ವಲಯದ 39ನೇ ಶಾಖೆಯಾಗಿದೆ.