Thursday, 12th December 2024

ಎಎಪಿ ನಾಯಕಿ ಅತಿಶಿಗೆ ಸಮನ್ಸ್ ಜಾರಿ

ವದೆಹಲಿ: ದೆಹಲಿ ಬಿಜೆಪಿಯ ಮಾಧ್ಯಮ ಮುಖ್ಯಸ್ಥ ಪ್ರವೀಣ್ ಶಂಕರ್ ಕಪೂರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದೆಹಲಿ ನ್ಯಾಯಾಲಯವು ದೆಹಲಿ ಸಚಿವೆ ಮತ್ತು ಎಎಪಿ ನಾಯಕಿ ಅತಿಶಿ ಅವರಿಗೆ ಸಮನ್ಸ್ ಜಾರಿಮಾಡಿದೆ.

ಜೂನ್ 29 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅತಿಶಿಗೆ ತಿಳಿಸಲಾಗಿದೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅತಿಶಿ ವಿರುದ್ಧ ಕಪೂರ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು. ತಮ್ಮ ಹಾಗೂ ತಮ್ಮ ಪಕ್ಷದ ಪ್ರತಿಷ್ಠಗೆ ಧಕ್ಕೆ ತಂದಿದೆ ಎಂದು ಆರೋಪಿಸಿದ್ದಾರೆ. ಈ ಆರೋಪಗಳನ್ನು ಪರಿಗಣಿಸಿದ ನ್ಯಾಯಾಲಯ ಅತಿಶಿಯನ್ನು ಆರೋಪಿ ಎಂದು ಗುರುತಿಸಿ ಜೂನ್‌ 29 ರಂದು ವಿಚಾರಣೆಗೆ ಹಾಜರಾಗುವಂತೆ ಆದೇಶಿಸಿದೆ.

ವಾದ ಮಂಡಿಸಿದ್ದ ಕಪೂರ್ ಪರ ವಕೀಲರು, ಬಿಜೆಪಿಯು 7 ಮಂದಿ ಎಎಪಿ ಶಾಸಕರನ್ನು ಸಂಪರ್ಕಿಸಿದೆ ಮತ್ತು ಪಕ್ಷವನ್ನು ಬದಲಾಯಿಸಲು ಅವರಿಗೆ 25 ಕೋಟಿ ರೂ. ನೀಡುತ್ತಿದೆ ಎಂದು ಆಪ್ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್ ಆರೋಪಿಸಿದ್ದಾರೆ.