ಪಾಕಿಸ್ತಾನ: ನೈಋತ್ಯ ಪಾಕಿಸ್ತಾನದಲ್ಲಿ ಬುಧವಾರ ವೇಗವಾಗಿ ಚಲಿಸುತ್ತಿದ್ದ ಪ್ರಯಾಣಿಕರ ಬಸ್ ಪರ್ವತ ಹೆದ್ದಾರಿಯಿಂದ ಕಮರಿಗೆ ಬಿದ್ದು ಕನಿಷ್ಠ 20 ಪ್ರಯಾಣಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ಬಸ್ ಬಲೂಚಿಸ್ತಾನ ಪ್ರಾಂತ್ಯದ ಎರಡನೇ ಅತಿದೊಡ್ಡ ನಗರವಾದ ತುರ್ಬತ್ ನಿಂದ ಪ್ರಾಂತೀಯ ರಾಜಧಾನಿ ಕ್ವೆಟ್ಟಾಗೆ ಪ್ರಯಾಣಿಸುತ್ತಿದ್ದಾಗ ವಾಶುಕ್ ಪಟ್ಟಣದಲ್ಲಿ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಅಸ್ಗರ್ ಅಲಿ ತಿಳಿಸಿದ್ದಾರೆ. ಘಟನೆಯ ಬಗ್ಗೆ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ದುಃಖ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನದಲ್ಲಿ ರಸ್ತೆ ಅಪಘಾತಗಳು ಸಾಮಾನ್ಯವಾಗಿದೆ. ಅಲ್ಲಿ ಸಂಚಾರ ನಿಯಮಗಳು ಮತ್ತು ಸುರಕ್ಷತಾ ಮಾನದಂಡಗಳನ್ನು ವಿರಳವಾಗಿ ಅನುಸರಿಸ ಲಾಗುತ್ತದೆ.
ಈ ತಿಂಗಳ ಆರಂಭದಲ್ಲಿ ಇದೇ ರೀತಿಯ ಘಟನೆಯಲ್ಲಿ ಕನಿಷ್ಠ 20 ಜನರು ಸಾವನ್ನಪ್ಪಿದ್ದರು ಮತ್ತು ಇನ್ನೂ 30 ಜನರು ಗಾಯಗೊಂಡಿದ್ದರು.