Thursday, 12th December 2024

ಅಮೆಜಾನ್ ಇಂಡಿಯಾದಿಂದ ಎಂ.ಎಲ್. ಶಿಕ್ಷಣದ ಭವಿಷ್ಯ ರೂಪಿಸುವ ಮೆಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್ 4ನೇ ಆವೃತ್ತಿಗೆ ಚಾಲನೆ

• ವಿದ್ಯಾರ್ಥಿಗಳಿಗೆ ಪ್ರಮುಖ ಎಂ.ಎಲ್. ವಿಷಯಗಳ ಕುರಿತು ಆಳವಾದ ಜ್ಞಾನ ನೀಡಿಕೆ
• ಅಮೆಜಾನ್ ವಿಜ್ಞಾನಿಗಳೊಂದಿಗೆ ಸಂವಹನ ನಡೆಸಲು ಮತ್ತು ಮಹತ್ತರ ಆವಿಷ್ಕಾರ ಕುರಿತು ಕಲಿಯಲು ವೇದಿಕೆ

ಅಮೆಜಾನ್ ಇಂಡಿಯಾ ಇಂದು ಮೆಷಿನ್ ಲರ್ನಿಂಗ್ (ಎಂ.ಎಲ್.) ಸಮ್ಮರ್ ಸ್ಕೂಲ್ ನಾಲ್ಕನೇ ಆವೃತ್ತಿಯ ನೋಂದಣಿಯ ದಿನಾಂಕಗಳನ್ನು ಪ್ರಕಟಿಸಿದ್ದು ಇದು ವಿದ್ಯಾರ್ಥಿಗಳಿಗೆ ಪ್ರಮುಖ ಮೆಷಿನ್ ಲರ್ನಿಂಗ್ ಕೌಶಲ್ಯಗಳು ಮತ್ತು ತಂತ್ರಜ್ಞಾನಗಳನ್ನು ಅಮೆಜಾನ್ ವಿಜ್ಞಾನಿಗಳಿಂದ ಕಲಿಯುವ ಅವಕಾಶ ನೀಡುತ್ತಿದ್ದು ಅವರಿಗೆ ಮೆಷಿನ್ ಲರ್ನಿಂಗ್ ವೃತ್ತಿಯಲ್ಲಿ ಉದ್ಯಮಕ್ಕೆ ಸನ್ನದ್ಧರಾಗಿಸುತ್ತದೆ. ಈ ನೋಂದಣಿಯ ಅವಧಿಯು ಮೇ 31ರಿಂದ ಜೂನ್ 21, 2024ರವರೆಗೆ ಲಭ್ಯವಿರುತ್ತದೆ. ಈ ಉಚಿತ ಶೈಕ್ಷಣಿಕ ಕೋರ್ಸ್ ಅನ್ನು ಜುಲೈ ತಿಂಗಳಲ್ಲಿ 4 ವಾರಾಂತ್ಯಗಳನ್ನು ನಡೆಸಲಾಗುತ್ತಿದ್ದು ಪ್ರಮುಖ ಎಂ.ಎಲ್. ವಿಷಯಗಳ ಕುರಿತು ಕೌಶಲ್ಯಗಳನ್ನು ಗಳಿಸುವ ಅವಕಾಶ ನೀಡುತ್ತದೆ. ಇದರಲ್ಲಿ ಸೂಪರ್ ವೈಸ್ಡ್ ಲರ್ನಿಂಗ್, ಡೀಪ್ ನ್ಯೂರಲ್ ನೆಟ್ವರ್ಕ್ಸ್, ಡೈಮೆನ್ಸಿಟಿ ರಿಡಕ್ಷನ್, ಅನ್ ಸೂಪರ್ ವೈಸ್ಡ್ ಲರ್ನಿಂಗ್, ಸೀಕ್ವೆನ್ಷಿಯಲ್ ಮಾಡೆಲ್ಸ್, ರೀಇನ್ ಫೋರ್ಸ್ ಮೆಂಟ್ ಲರ್ನಿಂಗ್, ಜನರೇಟಿವ್ ಎಐ ಮತ್ತು ಎಲ್.ಎಲ್.ಎಂ.ಗಳು ಮತ್ತು ಕ್ಯಾಶುಯಲ್ ಇನ್ಫರೆನ್ಸ್ ಒಳಗೊಂಡಿದ್ದು ಅವುಗಳು ಸೈದ್ಧಾಂತಿಕ ಪರಿಕಲ್ಪನೆಗಳು ಮತ್ತು ಪ್ರಾಯೋಗಿಕ ಬಳಕೆಗಳನ್ನೂ ಒಳಗೊಂಡಿರುತ್ತವೆ.

ಮೆಷಿನ್ ಲರ್ನಿಂಗ್ ಸಮ್ಮರ್ ಸ್ಕೂಲ್ ಭಾರತದಲ್ಲಿ ಮಾನ್ಯತೆ ಪಡೆದ ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ನೋಂದಣಿಯಾದ ಮತ್ತು 2025 ಅಥವಾ 2026ರಲ್ಲಿ ಪದವಿ ಪಡೆಯಲಿರುವ ಸ್ನಾತಕ, ಸ್ನಾತಕೋತ್ತರ ಅಥವಾ ಪಿ.ಎಚ್.ಡಿ. ಪದವಿಗಳಲ್ಲಿ ಅಧ್ಯಯನ ಮಾಡುತ್ತಿರುವ ಎಲ್ಲ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೂ ಮುಕ್ತವಾಗಿದೆ. ಅರ್ಹ ವಿದ್ಯಾರ್ಥಿಗಳು ಅಸೆಸ್ ಮೆಂಟ್ ತೆಗೆದುಕೊಳ್ಳಬೇಕು ಮತ್ತು ಟಾಪ್ 3000 ವಿದ್ಯಾರ್ಥಿಗಳು ಎಂ.ಎಲ್.ಸಮ್ಮರ್ ಸ್ಕೂಲ್ ಗೆ ನೋಂದಣಿ ಮಾಡಿಕೊಳ್ಳಬಹುದು.

ಅಮೆಜಾನ್ ಇಂಟರ್ನ್ಯಾಷನಲ್ ಮೆಷಿನ್ ಲರ್ನಿಂಗ್ ಉಪಾಧ್ಯಕ್ಷ ರಾಜೀವ್ ರಸ್ತೋಗಿ, “ಮೆಷಿನ್ ಲರ್ನಿಂಗ್ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಬಹಳ ಮುಖ್ಯವಾಗಿರುವುದು ಎಂ.ಎಲ್.ಗೆ ಬೇಡಿಕೆಯನ್ನು ಹೆಚ್ಚಿಸಿದೆ. ಆದಾಗ್ಯೂ, ಎಂ.ಎಲ್. ಉದ್ಯೋಗಪಡೆಗೆ ಬೇಡಿಕೆಯು ಲಭ್ಯವಿರುವ ಪ್ರತಿಭಾ ಸಮೂಹವನ್ನು ಮೀರುತ್ತಿದೆ. ಅಮೆಜಾನ್ ಎಂ.ಎಲ್. ಸಮ್ಮರ್ ಸ್ಕೂಲ್ ಮೂಲಕ ನಾವು ಈ ಅಂತರವನ್ನು ತುಂಬುವ ಮತ್ತು ವಿದ್ಯಾರ್ಥಿಗಳನ್ನು ವಿಜ್ಞಾನ ವೃತ್ತಿಗಳಿಗೆ ಉದ್ಯಮಕ್ಕೆ ಸಿದ್ಧವಾಗಿಸುವ, ಎಂ.ಎಲ್. ಪರಿಣಿತಿ ಮತ್ತು ಅನ್ವಯಿಕ ವಿಜ್ಞಾನ ಕೌಶಲ್ಯಗಳನ್ನು ಬೆಳೆಸುವ ಉದ್ದೇಶ ಹೊಂದಿದೆ. ವಿಸ್ತಾರ ಮೆಷಿನ್ ಲರ್ನಿಂಗ್ ವಿಷಯಗಳ ಮುಂಚೂಣಿಯ ತರಬೇತಿಯನ್ನು ಈ ವರ್ಷ ಪೂರೈಸಿದ ನಂತರ ನಾವು ಪ್ರತಿಭೆಗಳಿಗೆ ನಿಜ ಜೀವನದ ಸವಾಲುಗಳನ್ನು ಎದುರಿಸಲು ಪ್ರಾಯೋಗಿಕ ಅನುಭವ ಪೂರೈಸಲು ಬಳಕೆ ಆಧರಿತ ವಿಧಾನಕ್ಕೆ ಹೆಚ್ಚು ಒತ್ತು ನೀಡುತ್ತೇವೆ” ಎಂದರು.

ಅಮೆಜಾನ್ ನ ಎಂ.ಎಲ್. ಸಮ್ಮರ್ ಸ್ಕೂಲ್ ಸಾಂಪ್ರದಾಯಿಕ ಕಾರ್ಯಕ್ರಮದಿಂದ ವಿಭಿನ್ನ ವಿಧಾನ ತೆಗೆದುಕೊಂಡಿದ್ದು ಸೈದ್ಧಾಂತಿಕ ಪರಿಕಲ್ಪನೆಗಳನ್ನು ಪ್ರಾಯೋಗಿಕ ಬಳಕೆಗಳೊಂದಿಗೆ ಸಂಯೋಜಿಸುತ್ತದೆ. ಇದು ಪ್ರಸ್ತುತದ ಉದ್ಯಮದ ಪ್ರವೃತ್ತಿಗಳು ಮತ್ತು ವಿಶ್ವವಿದ್ಯಾಲಯದ ಕೋರ್ಸ್ ಗಳಿಗೆ ಪೂರಕ ವಾಗಿದ್ದು ವೈವಿಧ್ಯಮಯ ಎಂ.ಎಲ್. ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಪೂರೈಕೆ ಮಾಡುತ್ತದೆ. ಈ ಕಾರ್ಯಕ್ರಮದ ಅಂತ್ಯದ ವೇಳೆಗೆ ವಿದ್ಯಾರ್ಥಿಗಳು ಪ್ರಮುಖ ಎಂ.ಎಲ್. ತಂತ್ರಜ್ಞಾನಗಳ ಕುರಿತು ಪರಿಣಿತಿ ಪಡೆಯುತ್ತಾರೆ.

ಈ ಅನುಭವ ಕುರಿತು ಅಮೆಜಾನ್ ಎಂ.ಎಲ್.ಎಸ್.ಎಸ್. 2022ರ ಬ್ಯಾಚ್ ಅಭ್ಯರ್ಥಿ ಮತ್ತು ಪ್ರಸ್ತುತ ಅಮೆಜಾನ್ ನಲ್ಲಿ ಅಪ್ಲೈಡ್ ಸೈಂಟಿಸ್ಟ್ ಆಗಿ ಕೆಲಸ ಮಾಡುತ್ತಿರುವ ಪ್ರಭಾಶ್ ಮಲೆ, “ಅಮೆಜಾನ್ ಎಂ.ಎಲ್.- ಸಮ್ಮರ್ ಸ್ಕೂಲ್ ನನ್ನ ಮೆಷಿನ್ ಲರ್ನಿಂಗ್ ಸಂಶೋಧನೆಯ ವೃತ್ತಿಜೀವನದಲ್ಲಿ ಗಮನಾರ್ಹ ಪರಿಣಾಮ ಬೀರಿದೆ. ಈ ಸಮ್ಮರ್ ಸ್ಕೂಲ್ ಭಾಗವಾಗಿ ನಡೆಸುವ ಕಾರ್ಯಕ್ರಮಗಳು ನನಗೆ ಹೇಗೆ ನಾನು ಕಾಲೇಜಿನಲ್ಲಿ ಕಲಿತ ಬಹಳಷ್ಟು ಆಲ್ಗಾರಿದಂಗಳು ಮತ್ತು ಪರಿಕಲ್ಪನೆಗಳು ಹೇಗೆ ಅಮೆಜಾನ್ ನಲ್ಲಿ ದೊಡ್ಡ ಪ್ರಮಾಣದ ಸಮಸ್ಯೆಗಳನ್ನು ಪರಿಹರಿಸಲು ಅನ್ವಯಿಸಬಹುದು ಎನ್ನುವುದರ ಕುರಿತು ವಿಶಿಷ್ಟ ಒಳನೋಟ ನೀಡಿದವು. ಈ ಕಾರ್ಯಕ್ರಮವು ನನಗೆ ಆರ್ಟಿಫಿಷಿಯಲ್ ಜನರಲ್ ಇಂಟೆಲಿಜೆನ್ಸ್(ಎಜಿಐ) ಆರ್ಗ್.ನಲ್ಲಿ ಆಟೊಮ್ಯಾಟಿಕ್ ಸ್ಪೀಚ್ ರಿಕಗ್ನಿಷನ್ ಇಂಟರ್ನ್ಶಿಪ್ ಪಡೆಯಲು ನೆರವಾಯಿತು. ನಾನು ದೊಡ್ಡ ಪ್ರಮಾಣದ ಸ್ಪೀಚ್ ಮಾಡೆಲ್ ಗಳ ಪ್ರಾಯೋಗಿಕ ಅನುಭವ ಪಡೆದೆ, ಅದು ನೇರವಾಗಿ ಅಮೆಜಾನ್ ಒಳಗಡೆ ನಡೆಯುತ್ತಿರುವ ಇತರೆ ಪ್ರಾಜೆಕ್ಟ್ ಗಳಿಗೆ ನೇರವಾಗಿ ಕೊಡುಗೆ ನೀಡಿದೆ. ಒಟ್ಟಾರೆ ಈ ಸಮ್ಮರ್ ಸ್ಕೂಲ್ ಪ್ರೋಗ್ರಾಮ್ ನನಗೆ ಅಸಾಧಾರಣ ಕಲಿಕೆಯ ಅನುಭವ ನೀಡಿದೆ” ಎಂದರು.

2021ರಿಂದ ಪ್ರಾಯೋಗಿಕವಾಗಿ ಪ್ರಾರಂಭಿಸಿದ ದಿನದಿಂದಲೂ ಅಮೆಜಾನ್ ಎಂ.ಎಲ್. ಸ್ಕೂಲ್ ತೀವ್ರವಾಗಿ ಬೆಳೆದಿದ್ದು ಅಸಾಧಾರಣ ಪ್ರಗತಿ ನಿರೂಪಿಸಿದೆ. ಈ ಉದ್ಘಾಟನಾ ಆವೃತ್ತಿಯು 900ಕ್ಕೂ ಹೆಚ್ಚು ಅರ್ಜಿಗಳನ್ನು ಪಡೆದಿದ್ದು 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸೇರಿಕೊಳ್ಳಲು ಅವಕಾಶ ಪಡೆದರು. ಈ ಯಶಸ್ಸಿನ ಹಿನ್ನೆಲೆಯಲ್ಲಿ 2023ರಲ್ಲಿ ಈ ಕಾರ್ಯಕ್ರಮವನ್ನು ಭಾರತದ ಯಾವುದೇ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಸ್ತರಿಸಲಾಗಿದ್ದು ಅದು 61000 ಅರ್ಜಿಗಳನ್ನು ಆಕರ್ಷಿಸಿದ್ದು 20000 ಮಹಿಳೆಯರು ಈ ಕೋರ್ಸ್ ಗೆ ನೋಂದಣಿಯಾಗಿದ್ದಾರೆ.

ಅಮೆಜಾನ್ ಎಂ.ಎಲ್. ಸಮ್ಮರ್ ಸ್ಕೂಲ್ ತನ್ನ ಮುಂದಿನ ಹಂತಕ್ಕೆ ಪ್ರವೇಶಿಸುತ್ತಿದ್ದಂತೆ ಅಮೆಜಾನ್ ಇಂಡಿಯಾ ಮೆಷಿನ್ ಲರ್ನಿಂಗ್ ನಲ್ಲಿ ಶ್ರೇಷ್ಠತೆಯನ್ನು ಪೋಷಿಸುತ್ತಿದೆ ಮತ್ತು ತಂತ್ರಜ್ಞಾನ ಉದ್ಯಮಕ್ಕೆ ಭವಿಷ್ಯದ ನಾಯಕರನ್ನು ಸಿದ್ಧಗೊಳಿಸುತ್ತಿದೆ. ಅಮೆಜಾನ್ ಎಂ.ಎಲ್. ಸಮ್ಮರ್ ಸ್ಕೂಲ್ ಕುರಿತು ಹೆಚ್ಚು ತಿಳಿಯಲು ಭೇಟಿ ಕೊಡಿ: