ಛತ್ತೀಸ್ಗಢ: ನಕ್ಸಲರು ಬಿಜಾಪುರದ ಎರಡು ಗ್ರಾಮಗಳಲ್ಲಿ ಎರಡು ಮೊಬೈಲ್ ಟವರ್ಗಳನ್ನು ಸುಟ್ಟು ಭಸ್ಮ ಮಾಡಿದ್ದಾರೆ. ವಾರದ ಹಿಂದಷ್ಟೇ ಇದೇ ಪ್ರದೇಶದಲ್ಲಿ 30 ಮಂದಿ ನಕ್ಸಲರು ಶರಣಾಗಿದ್ದರು. ಛತ್ತೀಸ್ಗಢದಲ್ಲಿ ಮತ್ತೆ ನಕ್ಸಲರ ಹಾವಳಿ ಮುಂದುವರೆದಿದ್ದು, ಇಂದು ಮೊಬೈಲ್ ಟವರ್ ಸುಟ್ಟು ಭಸ್ಮ ಮಾಡಿದ್ದಾರೆ.
ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ಶನಿವಾರ ಮುಕ್ತಾಯಗೊಂಡಿದೆ.
ಬಿಜಾಪುರದ ಎರಡು ಗ್ರಾಮಗಳಲ್ಲಿ ಅಳವಡಿಸಿದ್ದ ಎರಡು ಮೊಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದಾರೆ. ಧೌಡೈ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಮೇ 27ರಂದು ನಾರಾಯಣಪುರದ ಛೋಟೆಡೊಂಗರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರ್ಮಾಣ ಹಂತದಲ್ಲಿದ್ದ ಎರಡು ಮಬೈಲ್ ಟವರ್‌ಗಳಿಗೆ ಬೆಂಕಿ ಹಚ್ಚಿದ್ದರು. ಮೇ 25ರಂದು ಬಿಜಾಪುರದ ಜಪ್ಪೆಮಾರ್ಕ್ ಮತ್ತು ಕಮ್ಕನಾರ್ ಅರಣ್ಯದಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಇಬ್ಬರು ನಕ್ಸಲರು ಹತರಾಗಿದ್ದರು.
ಛತ್ತೀಸ್ಗಢದ ಬಿಜಾಪುರದಲ್ಲಿ 30 ನಕ್ಸಲರು(Naxals) ಭದ್ರತಾಪಡೆಗಳ ಮುಂದೆ ಶರಣಾಗಿದ್ದಾರೆ. ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಮತ್ತು ಮಾವೋವಾದದ ಪೊಳ್ಳು ಸಿದ್ದಾಂತದಿಂದ ನಿರಾಶಗೊಂಡಿದ್ದೇವೆ ಎಂದು ನಕ್ಸಲರು ಹೇಳಿದ್ದಾರೆ. ಛತ್ತೀಸ್ಗಢ ಪೊಲೀಸ್ ಹಾಗೂ ಸಿಆರ್ಪಿಎಫ್ನ ಹಿರಿಯ ಅಧಿಕಾರಿಗಳ ಮುಂದೆ ಶರಣಾದ ನಕ್ಸಲರಲ್ಲಿ ಆರು ಮಹಿಳೆಯರೂ ಇದ್ದಾರೆ.