Thursday, 12th December 2024

ಟಿ20 ವಿಶ್ವಕಪ್: ಕೆನಡಾಕ್ಕೆ ಸೋಲುಣಿಸಿದ ಯುಎಸ್​ಎ

ಡಲ್ಲಾಸ್: ಟಿ20 ವಿಶ್ವಕಪ್​ 2024 ಕ್ಕೆ ಅಧಿಕೃತ ಚಾಲನೆ ದೊರೆತಿದೆ. ಟಿ20 ವಿಶ್ವಕಪ್ 2024ರ ಮೊದಲ ಪಂದ್ಯದಲ್ಲೇ ಇತಿಹಾಸ ಸೃಷ್ಟಿಯಾಗಿದೆ.
ಡಲ್ಲಾಸ್​ನ ಪಂದ್ಯದಲ್ಲಿ ಟಾಸ್ ಗೆದ್ದ ಯುಎಸ್‌ಎ ತಂಡವು ಬೌಲಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಕೆನಡಾ 20 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 194 ರನ್ ಕಲೆಹಾಕಿತು. ಗುರಿ ಬೆನ್ನಟ್ಟಿದ ಯುಎಸ್​ಎ ತಂಡ 17.4  ಓವರ್​ಗಳಲ್ಲಿ 195 ರನ್ ಬಾರಿಸಿ, ಜಯಭೇರಿಯಾಯಿತು. ಯುಎಸ್​ಎ ಪರ ಮಧ್ಯಮ ಕ್ರಮಾಂಕದ ಶತಕದ ಜತೆಗಾರಿಕೆಯಿಂದ 3 ವಿಕೆಟ್ ಕಳೆದುಕೊಂಡು ವಿಜಯಿಯಾಯತು.
2014ರಲ್ಲಿ ಐರ್ಲೆಂಡ್ ವಿರುದ್ಧ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 193 ರನ್ ಗಳಿಸಿದ ನೆದರ್​ಲೆಂಡ್ಸ್ ತಂಡವು ಹೊಸ ಇತಿಹಾಸ ನಿರ್ಮಿಸಿತ್ತು. ಚೊಚ್ಚಲ ಪಂದ್ಯದಲ್ಲೇ 194 ರನ್ ಬಾರಿಸುವ ಮೂಲಕ ಕೆನಡಾ ತಂಡ 10 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದೆ.

ಈ ಪಂದ್ಯದಲ್ಲಿ ಕೆನಡಾ ಬ್ಯಾಟರ್​ಗಳು ಅತ್ಯುತ್ತಮ ಪ್ರದರ್ಶನ ನೀಡಿದರು. ನವನೀತ್ ಧಲಿವಾಲ್ 44 ಎಸೆತಗಳಲ್ಲಿ 61 ರನ್ ಬಾರಿಸಿದರೆ, ನಿಕೋಲಸ್ ಕಿರ್ಟನ್ ತಂಡಕ್ಕೆ 51 ರನ್ ಗಳ ಸ್ಪೋಟಕ ಇನ್ನಿಂಗ್ಸ್ ಆಡಿದರು.