ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಬಸನಗೌಡ ಬಾದರ್ಲಿ ಅಂತಿಮ ಕಣದಲ್ಲಿ
ರಾಯಚೂರು: ಜಿಲ್ಲೆಯ ಹಾಲಿ ಶಾಸಕರ ವಿರೋಧದ ನಡುವೆಯೇ ಪರಿಷತ್ತು ಸದಸ್ಯ ನಾಗಿ ಎನ್ ಎಸ್ ಬೋಸರಾಜ ರಾಜ್ಯ ಸರ್ಕಾರದ ಕ್ಯಾಬಿನೆಟ್ ಸಚಿವರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿತ್ತು.
ಅದರಂತೆಯೇ ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಕಾಂಗ್ರೆಸ್ ಪಕ್ಷದಿಂದ ಎನ್ ಎಸ್ ಬೋಸರಾಜ, ಎ ವಸಂತಕುಮಾರ್, ಸಿಂಧನೂರು ತಾಲೂಕಿನ ರಾಜ್ಯ ಯುವ ಮುಖಂಡ ಬಸನಗೌಡ ಬಾದರ್ಲಿ ಈ ಮೂವರು ಅಂತಿಮ ಕಣದಲ್ಲಿದ್ದಾರೆ ಎನ್ನುವುದು ಜಿಲ್ಲೆಯ ಜನರಲ್ಲಿ ಸಂತೋಷ ಮೂಡಿದೆ. ಅದರಲ್ಲೂ ಆಡಳಿತ ರೂಢ ಕಾಂಗ್ರೆಸ್ ಪಕ್ಷದಿಂದ ರಾಯಚೂರು ಜಿಲ್ಲೆಗೆ ಮೂವರು ಆಯ್ಕೆಯಾಗಿದ್ದು ಮಾತ್ರ ಜನರಲ್ಲಿ ಅಚ್ಚರಿಯ ಜೊತೆಗೆ ಸಂತೋಷವನ್ನುಂಟು ಮಾಡಿದೆ.
ರಾಯಚೂರು ಜಿಲ್ಲೆಗೆ ನಿರಂತರ ರಾಜಕೀಯ ಮಲತಾಯಿ ಧೋರಣೆಗೆ ಗುರಿಯಾಗುತ್ತಿತ್ತು ಆದರೆ ಪ್ರಸ್ತುತ ರಾಜಕೀಯದ ಶುಕ್ರದಶೆ ಆರಂಭವಾಗಿದೆ.
ವಿಧಾನ ಪರಿಷತ್ ಗೆ 11 ಸ್ಥಾನ ಚುನಾವಣೆ ಘೋಷಣೆಯ ಬೆನ್ನ ಹಿಂದೆಯೇ ಹಾಲಿ ಸಚಿವ ಎನ್ ಎಸ್ ಬೋಸರಾಜು, ಮತ್ತು ಕಾರ್ಯ ಅಧ್ಯಕ್ಷ ವಿ ವಸಂತ್ ಕುಮಾರ, ಮಾಜಿ ಯುವ ಕಾಂಗ್ರೆಸ್ ರಾಜ್ಯ ಅಧ್ಯಕ್ಷ ಬಸನಗೌಡ ಬಾದರ್ಲಿ ಇವರನ್ನು ಬಿಜೆಪಿಯ ಜಗದೀಶ್ ಶೆಟ್ಟರ್ ಇವರಿಂದ ತರುವಾಗಿ ರುವ ಸ್ಥಾನಕ್ಕೆ ಚುನಾವಣೆ ಮೂಲಕ ಮರು ಆಯ್ಕೆ ಮಾಡಲು ಆದೇಶಿಸಲಾ ಗಿದೆ. ಶತಾಯಗತಾಯ ವಿಧಾನಪರಿಷತ್ ಸದಸ್ಯ ಪ್ರಯತ್ನ ಮೂವರಿಗೂ ಸ್ಥಾನ ಪ್ರಧಾನ ಸುಖಾಂತ್ಯ ಜಿಲ್ಲೆಯ ಬಣಗಳಲ್ಲಿ ಉತ್ಸಾಹ ಮೂಡಿಸಿದೆ.
ಕಳೆದ ವರ್ಷದಲ್ಲಿ ಒಂದು ವರ್ಷದ ಅವಧಿಗೆ ಮಾತ್ರ ಎನ್ ಎಸ್ ಬೋಸ ರಾಜು ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಲಾಗಿತ್ತು ಆದರೆ ಇವರನ್ನು ಮುಂದುವರೆಸಲು ಜಿಲ್ಲೆಯ ಹಾಗೂ ರಾಜ್ಯದ ಅನೇಕ ನಾಯಕರ ವಿರೋಧದ ನಡುವೆಯೂ ಮತ್ತೊಮ್ಮೆ ಆಯ್ಕೆ ಮಾಡಿದ್ದು ರಾಜಕೀಯ ಶಕ್ತಿಗೆ ಮುನ್ನುಡಿ ಬರೆದಂತಾಗಿದೆ.
ರಾಜಕೀಯ ಏಳು ದಶಕದ ಇತಿಹಾಸದಲ್ಲಿ ಜಿಲ್ಲೆ ಈ ರೀತಿ ಏಕಕಾಲಕ್ಕೆ ಒಂದೇ ಜಿಲ್ಲೆಗೆ ಮೂರು ಪರಿಷತ್ ಸ್ಥಾನ ಪಡೆದ ಮತ್ತೊಂದು ಉದಾಹರಣೆ ಇಲ್ಲ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ನಾಲ್ಕು ವಿಧಾನ ಸಭೆ ಕ್ಷೇತ್ರ ಗೆದ್ದು ಈಗ ಮೂರು ವಿಧಾನ ಪರಿಷತ್ ಸ್ಥಾನ ಪಡೆಯುವ ಮೂಲಕ ಜಿಲ್ಲೆಯ ಪಾಲಿಗೆ ಬಹುದೊಡ್ಡ ರಾಜಕೀಯ ಉಡುಗೊರೆಯಾಗಿದು, ಪ್ರಾತಿನಿಧ್ಯ ಶುಕ್ರದೆಸೆ ಕಾಲಮಾನ ಜಿಲ್ಲೆಯ ಬಣಗಳ ಬೆಂಬಲಿಗರಲ್ಲಿ ಭಾರಿ ಉತ್ಸಹಕ್ಕೆ ಕಾರಣವಾಗಿದೆ.