Thursday, 12th December 2024

ಬಿಜೆಪಿ ನಾಯಕ ಶೀಲವಂತ ಉಮರಾಣಿ ಹುಟ್ಟುಹಬ್ಬ: ಆಸ್ಪತ್ರೆಯಲ್ಲಿ ಹಣ್ಣುಹಂಪಲ ವಿತರಣೆ

ಇಂಡಿ: ಬಿ.ಜೆ.ಪಿ ಒ.ಬಿ.ಸಿ ರಾಜ್ಯ ಕರ‍್ಯಕಾರಣಿ ಸದಸ್ಯ ಶೀಲವಂತ ಉಮರಾಣಿಸಾಹುಕಾರ ಇವರ ಅಭಿಮಾನಿ ಬಳಗದ ವತಿಯಿಂದ ೫೪ನೇ ವರ್ಷದ ಹುಟ್ಟು ಹಬ್ಬ ಇಂದು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಡರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿ ಸರಳ ರೀತಿಯಿಂದ ಆಚರಣೆ ಮಾಡಿದರು.

ಈ ಸಂಧರ್ಬದಲ್ಲಿ ಶಿವಯೋಗಿ ರೂಗಿಮಠ ಮಾತನಾಡಿ, ಶೀಲವಂತ ಉಮರಾಣಿ ಸಾಹುಕಾರ ಒಬ್ಬ ಮುಗ್ದ ಮನಸ್ಸಿನ ಸರಳ ರಾಜಕಾರಣಿ. ಇವರು ಪಕ್ಷದ ತತ್ವ ಸಿದ್ದಾಂತವನ್ನು ಜೀವನದ ಉಸಿರಾಗಿಸಿಕೊಂಡು ಶಿಸ್ತಿನ ಸಿಪಾಯಿಯಂತೆ ಇಡೀ ಯುವಕರ ಪಡೆಯನ್ನೆ ಕಟ್ಟಿಕೊಂಡು ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಇಂದು ಎಷ್ಟೋ ಜನ ರಾಜಕೀಯ ಅಧಿಕಾರ ಅನುಭವಿಸಿದರು ಸಾರ್ವಜನಿಕ ಕಷ್ಟ ,ನಷ್ಟಗಳಿಗೆ ಸ್ಪಂದಿಸುವುದಿಲ್ಲ. ಆದರೆ ಸಾಹುಕಾರರು ತಮ್ಮ ಬಳಿಗೆ ಬಂದ ಬಡವ ದೀನ ದುರ್ಬಲರಿಗೆ ಕೈಲಾದಮಟ್ಟಿಗೆ ಸಹಾಯ ಸಹಕಾರ ಮಾಡುವ ಗುಣ ಇವರಲ್ಲಿದೆ.

ಕಳೆದ ವಿಧಾನ ಸಭಾ ಚುನಾವಣೆಗಳಲ್ಲಿ ಅಕಾಂಕ್ಷಿ ಅಭ್ಯರ್ಥಿ ಇದ್ದರೂ ಸಹಿತ ಕೊನೆಗಳಿಗೆಯಲ್ಲಿ ಟಿಕೇಟ ಕೈತಪ್ಪಿದರೂ ಧೃತಿಗೆಡದೆ ವರಿಷ್ಠರ ನಿರ್ಣಯಕ್ಕೆ ತಲೆಬಾಗಿ ಯಾರಿಗೆಟಿಕೇಟ ಸಿಕ್ಕಿದೆ ಅಂತಹವರ ಪರವಾಗಿ ಬದ್ದತೆಯಿಂದ ದುಡಿದಿದ್ದಾರೆ ಮುಂಬರುವ ದಿನಗಳಲ್ಲಿ ರಾಜ್ಯ ಕೇಂದ್ರ ವರಿಷ್ಠರು ಇವರ ಸೇವೆಯನ್ನು ಪರಿಗಣಿಸಿ ಒಳ್ಳೇಯ ಅವಕಾಶ ನೀಡಲಿ ಇಂದು ಹುಟ್ಟು ಹಬ್ಬದ ಆಚರಣೆ ದಿನದಂದು ಭಗವಂತ ಅವರಿಗೆ ಒಳ್ಳೇಯ ಆರೋಗ್ಯೆ,ಆಯುಷ್ಯ ಕೊಟ್ಟು ದಯಪಾಲಿಸಲಿ ಎಂದು ಶುಭ ಕೋರಿದರು.

ಭೀಮರಾಯಗೌಡ ಪಾಟೀಲ, ಮಲ್ಲು ನವಲಿ, ಬಸು ಚವ್ಹಾಣ, ಸಿದ್ದರಾಮ ರಾಠೋಡ, ರಂಗು ಚವ್ಹಾಣ ಉಪಸ್ಥಿತರಿದ್ದರು.

ಮಾಜಿ ಪುರಸಭೆ ಅಧ್ಯಕ್ಷ ದೇವೇಂದ್ರ ಕುಂಬಾರ, ಸಿದ್ದಣ್ಣಾ ಗುನ್ನಾಪೂರ,ಸಿಕಿಂದರ ಬೋರಾಮಣಿ, ಬತ್ತು ಸಾಹುಕಾರ ಹಾವಳಗಿ ,ಚನ್ನುಗೌಡ ಪಾಟೀಲ ರೋಡಗಿ, ರಮೇಶ ಧರೇನವರ್, ನಿವೃತ್ತ ಸೈನಿಕ ಗಾಯಕವಾಡ, ಅಭಿಮಾನಿ ವಿವೇಕ ರಾಠೋಡ, ಪಿಂಟು ರಾಠೋಡ ಸೇರಿದಂತೆ ಅನೇಕ ಅಭಿಮಾನಿಗಳು ಶುಭ ಹಾರೈಸಿದ್ದಾರೆ.