ತುಮಕೂರು: ಭರತಖಂಡದಲ್ಲಿ ಸನ್ಯಾಸಿಗಳಿಗೆ ಅಪಾರ ಗೌರವವಿದೆ ಎಂದು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಶ್ರೀನಿವಾಸ ಎಸ್. ಬಳ್ಳಿ ಅಭಿಪ್ರಾಯಪಟ್ಟರು.
ನಗರದ ರಾಮಕೃಷ್ಣ-ವಿವೇಕಾನಂದ ಆಶ್ರಮ ಮತ್ತು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ ನೆರವೇರಿದ ‘ಮಾನವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ’ ಎಂಬ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಮಹಾನ್ ಪರಂಪರೆಯಲ್ಲಿ ಮೂಡಿಬಂದ ಸ್ವಾಮಿ ವಿವೇಕಾನಂದರನ್ನು ಭಾರತೀಯರು ಗೌರವಿಸಿದರಷ್ಟೇ ಅಲ್ಲದೆ ಅವರಲ್ಲಿ ಅಪಾರ ಭರವಸೆ ಯನ್ನಿತ್ತರು. ಕಾರಣವೇನೆಂದರೆ ಸ್ವಾಮಿ ವಿವೇಕಾನಂದರು ತಮ್ಮ ಶ್ರೇಷ್ಠ ಬದುಕಿನ ಮೂಲಕ ಭಾರತದ ಉತ್ಕೃಷ್ಟ ನಂಬಿಕೆಗಳಿಗೆ ವಿವರಣಾತ್ಮಕ ದಾಖಲೆಯಾದರು
ಡಾ.ವೀರೇಶಾನಂದ ಸ್ವಾಮೀಜಿ ಮಾತನಾಡಿ, ‘ಗುರುವಾದವನನ್ನು ಹಗಲಿರುಳೆನ್ನದೆ ಪರೀಕ್ಷಿಸಿ ಸ್ವೀಕರಿಸಬೇಕು ಎಂಬುದು ಶ್ರೀರಾಮಕೃಷ್ಣರ ಧೋರಣೆ ಯಾದರೆ ಮಾನವ ಇತಿಹಾಸದಲ್ಲಿ ವಿವೇಕಾನಂದರಷ್ಟು ಗುರುವನ್ನು ಪರೀಕ್ಷಿಸಿದ ಉದಾಹರಣೆಗಳು ಅಪರೂಪ. ಅಲ್ಲದೆ ಹಸಿದ ಹೊಟ್ಟೆಗೆ ಧರ್ಮ ಬೋಧನೆ ಕೂಡದೆಂದು ಮತ್ತು ಕಣ್ಣು ತೆರೆದು ದೇವರನ್ನು ಕಾಣುವುದು ನೂತನ ವೇದಾಂತವೆಂದು ಗುರುವಿನಿಂದ ನಿರ್ದೇಶಿಸಲ್ಪಟ್ಟ ಸ್ವಾಮಿ ವಿವೇಕಾ ನಂದರು ಮಾನವನ ಬದುಕಿಗೆ ಬೆಳಕನ್ನಿತ್ತರಲ್ಲದೆ ಭಾರತ ಮಾತೆಯನ್ನು ದಾಸ್ಯದ ಶೃಂಖಲೆಯಿಂದ ಮುಕ್ತಗೊಳಿಸಿದರು ಎಂದರು.
ಇದೇ ಸಂದರ್ಭದಲ್ಲಿ ಕಳೆದ ವರ್ಷ ಈ ಐಚ್ಛಿಕ ವಿಷಯದ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕಗಳಿಸಿದ ಏಳು ಜನ ವಿದ್ಯಾರ್ಥಿಗಳನ್ನು ಸತ್ಕರಿಸ ಲಾಯಿತು.
ತುಮಕೂರಿನ ಡಾ. ಕೆ.ವಿ ಅನಸೂಯ, ‘ಸ್ವಾಮಿ ವಿವೇಕಾನಂದರ ಶೈಕ್ಷಣಿಕ ಪರಿಕಲ್ಪನೆಗಳು’, ಡಾ. ಕೆ. ಎಸ್ ಸ್ಮಿತಾ , ‘ಸ್ವಾಮಿ ವಿವೇಕಾನಂದರು ಮತ್ತು ಸಮಾಜ ಸೇವೆ’, ಪ್ರೊ. ರಮ್ಯಾ ಕಲ್ಲೂರ್ , ‘ಸ್ವಾಮಿ ವಿವೇಕಾನಂದರು ಮತ್ತು ಯುವಶಕ್ತಿ’ ಹಾಗು ಸ್ವಾಮಿ ವೀರೇಶಾನಂದರು, ‘ಐರೋಪ್ಯ ರಾಷ್ಟ್ರಗಳಲ್ಲಿ ಸ್ವಾಮಿ ವಿವೇಕಾನಂದರು’ ಎಂಬ ವಿಷಯಾಧಾರಿತ ಪ್ರವಚನಗಳನ್ನು ನೀಡಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಧೀರಾನಂದ ಸ್ವಾಮೀಜಿ ಭಗವನ್ನಾಮ ಸಂಕೀರ್ತನೆಯನ್ನು ನಡೆಸಿದರು. ಕಾರ್ಯಾಗಾರದಲ್ಲಿ ನೃಪತುಂಗ ವಿಶ್ವವಿದ್ಯಾ ನಿಲಯದ ಸುಮಾರು ೨೩೦ ಪದವಿ ಹಾಗು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವೇದಿಕೆಯಲ್ಲಿ ಪ್ರೊ. ಮುರಳಿ, ಪ್ರೊ. ಸುಶೀಲಾ , ಪ್ರೊ. ಇಂದ್ರಾಣ , ಪ್ರೊ. ಭಾವನಾ , ಪ್ರೊ. ಪೂರ್ಣೀಮ, ಪ್ರೊ. ಶೈಲೇಂದ್ರ ಉಪಸ್ಥಿತರಿದ್ದರು. ಶೋಭಾ ಉಮಾಮಹೇಶ್ ಸ್ವಾಗತಿಸಿದರು ಹಾಗೂ ಸುನೀಲ್ ಹುಲಿಕಲ್ ವಂದಿಸಿದರು.