Sunday, 15th December 2024

ಆಗ್ನೇಯ ಶಿಕ್ಷಕರ ಕ್ಷೇತ್ರ: ಕಲಿಗಳ ಹಣೆಬರಹ ಬಹಿರಂಗ ಜೂ.6ಕ್ಕೆ

ತುಮಕೂರು: ಆಗ್ನೇಯ ಶಿಕ್ಷಕರ ಕ್ಷೇತ್ರದ ಕಲಿಗಳ ಹಣೆಬರಹ ಜೂ.6ಕ್ಕೆ ಬಹಿರಂಗಗೊಳ್ಳಲಿದೆ.
ಓರ್ವ ಮಹಿಳೆ ಸೇರಿ 15 ಅಭ್ಯರ್ಥಿಗಳು ಕಣಕ್ಕಿಳಿದಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ನಾಲ್ಕನೇ ಬಾರಿ ಅಧಿಕಾರ ಹಿಡಿಯಲು ಬಿಜೆಪಿ , ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾರಾಯಣಸ್ವಾಮಿ ಕಸರತ್ತು ನಡೆಸಿದ್ದಾರೆ. ಕಮಲ ಪಾಳಯದಲ್ಲಿ ಅಸ್ತಿತ್ವ ಆರಂಭಿಸಲು ಕಾಂಗ್ರೆಸ್ ನ‌ ಶ್ರೀನಿವಾಸ್ ತಂತ್ರಗಾರಿಕೆ ಕೈಗೊಂಡಿದ್ದಾರೆ.
ಜಿಲ್ಲೆಯಲ್ಲಿ  4967 ಪುರುಷ, 2758 ಮಹಿಳಾ ಮತದಾರರು ಸೇರಿ ಒಟ್ಟು 7725 ಮಂದಿ ಮತದಾರರಿದ್ದು, ಅದರ ಪೈಕಿ 4735 ಪುರುಷ, 2593 ಮಹಿಳಾ ಮತದಾರರು ಸೇರಿ ಒಟ್ಟು 7328 ಮಂದಿ ಮತದಾನ ಮಾಡಿದ್ದು, ಶೇ.94.86 ರಷ್ಟು ಮತದಾನವಾಗಿದೆ.
ತಾಲೂಕುವಾರು ಮತ ಚಲಾವಣೆ 
ತಾಲೂಕು-ಪುರುಷ-ಮಹಿಳೆ-ಒಟ್ಟು
*ತುಮಕೂರು ನಗರ-1205-1060-2265(ಶೇ.94.25)
*ಶಿರಾ-479-272-751(ಶೇ.94.58)
*ಪಾವಗಡ-584-163-747(ಶೇ.93.02)
*ತುಮಕೂರು ಗ್ರಾ.-440-252-692(ಶೇ.95.45)
*ತಿಪಟೂರು-378-180-558(ಶೇ.95.38)
*ಮಧುಗಿರಿ-385-142-527(ಶೇ.96.52)
*ಗುಬ್ಬಿ-312-146-458(ಶೇ.95.22)
*ಚಿ.ನಾ.ಹಳ್ಳಿ-322-108-430(ಶೇ.97.73)
ತುರುವೇಕೆರೆ-218-112-330(ಶೇ.97.06)
*ಕೊರಟಗೆರೆ-232-92-324(ಶೇ.94.19)
*ಕುಣಿಗಲ್-180-66-246(ಶೇ.93.18)
——————————
ಒಟ್ಟು-4735-2593-7328-ಶೇ.94.86