Saturday, 14th December 2024

ಭಾರತದಲ್ಲಿ ಕ್ರಿಯೇಟರ್ ಯೂನಿವರ್ಸಿಟಿ ಮತ್ತು ಕ್ರಿಯೇಟರ್ ಕನೆಕ್ಟ್‌ ಆರಂಭಿಸಿದ ಅಮೆಜಾನ್.ಇನ್

*ಅಮೆಜಾನ್ ಕ್ರಿಯೇಟರ್ ಯೂನಿವರ್ಸಿಟಿ: ಇದು ಕಂಟೆಂಟ್ ಕ್ರಿಯೇಟರ್‌ಗಳಿಗೆ ಅಗತ್ಯವಿರುವ ಜ್ಞಾನವನ್ನು ಒದಗಿಸುವ ಉದ್ದೇಶದ ಕಲಿಕಾ ಕಾರ್ಯಕ್ರಮ. ಅಮೆಜಾನ್ ವೇದಿಕೆಯಲ್ಲಿ ಯಶಸ್ಸು ಕಾಣುವಲ್ಲಿ ಇದು ಅವರಿಗೆ ನೆರವಾಗುತ್ತದೆ. ವಿಡಿಯೊ ಕಲಿಕಾ ಸಾಮಗ್ರಿ, ಲೇಖನಗಳು, ಕಾರ್ಯಾಗಾರಗಳು ಹಾಗೂ ಉದಾಹರಣೆ ಸಹಿತ ಕೆಲವು ವಿವರಣೆಗಳನ್ನು ಇದು ನೀಡುತ್ತದೆ.
* ಪ್ರಮುಖ ಪ್ರಯೋಜನಗಳು: ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮಗಳ ಮೂಲಕ ಇತರ ಕಂಟೆಂಟ್ ಕ್ರಿಯೇಟರ್‌ಗಳ ಜೊತೆ ಸಂಪರ್ಕ ಸಾಧಿಸುವುದು, ಉದ್ಯಮದ ತಜ್ಞರಿಂದ ಕಲಿಯುವುದು, ಅಮೆಜಾನ್‌ನಲ್ಲಿ ಯಶಸ್ಸು ಸಾಧಿಸಲು (ಉತ್ಪನ್ನ ವಿಭಾಗ, ಕಂಟೆಂಟ್ ಸೃಷ್ಟಿ ಮತ್ತು ಬಳಕೆದಾರರ ಗಮನ ಸೆಳೆಯುವುದು) ಅನುಕೂಲ ಮಾಡಿಕೊಡುವ, ಕಾರ್ಯರೂಪಕ್ಕೆ ತರಲು ಸಾಧ್ಯವಾಗುವ ಆಲೋಚನೆಗಳನ್ನು ಪಡೆದುಕೊಳ್ಳುವುದು, ಪರಸ್ಪರ ಸಮನ್ವಯ ಒದಗಿಸುವ ಸಮುದಾಯವೊಂದರಲ್ಲಿ ಭಾಗಿಯಾಗುವುದು.
* ವಿಸ್ತೃತವಾದ ಬದ್ಧತೆಯೊಂದರ ಭಾಗ: ಕಂಟೆಂಟ್ ಕ್ರಿಯೇಟರ್‌ಗಳು ಹಾಗೂ ಗ್ರಾಹಕರ ಮೇಲೆ ಪ್ರಭಾವ ಬೀರುವ ಶಕ್ತಿ ಇರುವವರಿಗೆ ಬೆಂಬಲ ಒದಗಿಸುವ ಅಮೆಜಾನ್‌ನ ಯತ್ನದ ಭಾಗ ಈ ಕಾರ್ಯಕ್ರಮ. ಅಮೆಜಾನ್‌ ಲೈವ್ (ಲೈವ್‌ ಶಾಪಿಂಗ್) ಹಾಗೂ ಅಮೆಜಾನ್ ಇನ್‌ಫ್ಲುಯೆನ್ಸರ್‌ ಪ್ರೋಗ್ರಾಮ್ (ಉತ್ಪನ್ನಗಳನ್ನು ಅನುಮೋದಿಸುವುದು ಹಾಗೂ ಕಮಿಷನ್ ಸಂಪಾದಿಸುವುದು) ಇತರ ಕಾರ್ಯಕ್ರಮಗಳು.

ಬೆಂಗಳೂರು: ಅಮೆಜಾನ್‌.ಇನ್‌ ತಾನು ಕ್ರಿಯೇಟರ್ ಯೂನಿವರ್ಸಿಟಿ ಹಾಗೂ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮಗಳನ್ನು ಆರಂಭಿಸು ತ್ತಿರುವುದಾಗಿ ಇಂದು ಘೋಷಿಸಿದೆ. ಕ್ರಿಯೇಟರ್ ಅರ್ಥವ್ಯವಸ್ಥೆಯಲ್ಲಿ ಬೆಳವಣಿಗೆ ಸಾಧಿಸಲು ಸಾಧ್ಯವಾಗುವಂತೆ ಕಂಟೆಂಟ್‌ ಕ್ರಿಯೇಟರ್‌ಗಳಿಗೆ ಮಾಹಿತಿ ಮತ್ತು ಅಗತ್ಯ ಪರಿಕರಗಳನ್ನು ಒದಗಿಸುವ ಉದ್ದೇಶದಿಂದ ಕಂಟೆಂಟ್ ಯೂನಿವರ್ಸಿಟಿ ಹೆಸರಿನಲ್ಲಿ ಕಲಿಕಾ ಕಾರ್ಯಕ್ರಮ ರೂಪಿಸಲಾಗಿದೆ. ಬೇರೆ ಬೇರೆ ವರ್ಗಗಳಿಗೆ ಸೇರಿದ ಕಂಟೆಂಟ್ ಕ್ರಿಯೇಟರ್‌ಗಳಿಗೆ, ಹಳಬರಿಗೆ ಹಾಗೂ ಈ ಕ್ಷೇತ್ರದಲ್ಲಿ ಛಾಪು ಮೂಡಿಸುವ ಆಸಕ್ತಿ ಹೊಂದಿರುವವರಿಗೆ ಈ ಕಾರ್ಯಕ್ರಮವು ನೆರವಾಗಲಿದೆ.

ಸಂಪನ್ಮೂಲಗಳನ್ನು ಬಹಳ ಎಚ್ಚರಿಕೆಯಿಂದ ಇಲ್ಲಿ ಆಯ್ಕೆ ಮಾಡಲಾಗಿದ್ದು, ಅಮೆಜಾನ್‌ ಮಾರುಕಟ್ಟೆಯಲ್ಲಿ ಸುಸ್ಥಿರವಾದ ವಹಿವಾಟನ್ನು ಬೆಳೆಸಲು ಅಗತ್ಯವಿರುವ ಮೂಲಭೂತ ಮಾಹಿತಿಯನ್ನು ಹಾಗೂ ಪ್ರಾಯೋಗಿಕವಾದ ಕಾರ್ಯತಂತ್ರಗಳನ್ನು ಈ ಕಾರ್ಯಕ್ರಮವು ಒದಗಿಸುತ್ತದೆ.

ಅಮೆಜಾನ್‌ ವ್ಯವಸ್ಥೆಯಲ್ಲಿ ಕ್ರಿಯೇಟರ್‌ಗಳಿಗೆ ಬೆಳವಣಿಗೆ ಸಾಧಿಸಲು ನೆರವು ನೀಡುವ ಉದ್ದೇಶದಿಂದ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮ ರೂ‍ಪಿಸಲಾಗಿದೆ. ಇದು ಕ್ರಿಯೇಟರ್‌ಗಳಿಗೆ ಹೆಚ್ಚಿನ ಸಂಪರ್ಕಗಳನ್ನು ಕಟ್ಟಿಕೊಳ್ಳಲು, ಕಲಿಯಲು ಹಾಗೂ ಬೆಳೆಯಲು ಸಹಾಯ ಮಾಡುತ್ತದೆ. ಈ ಕಾರ್ಯಕ್ರಮಗಳನ್ನು ಅಮೆಜಾನ್‌ ವೇದಿಕೆಯ ಮೂಲಕ ನಡೆಯುವ ಪ್ರಮುಖ ಮಾರಾಟ ಮೇಳಗಳ ಸಂದರ್ಭದಲ್ಲಿ ಹಾಗೂ ಅಮೆಜಾನ್‌ನ ಇತರ ಪ್ರಮುಖ ಕಾರ್ಯಕ್ರಮಗಳ ಸಂದರ್ಭದಲ್ಲಿ ಆಯೋಜಿಸಲಾಗುತ್ತದೆ, ಆ ಮೂಲಕ ಎರಡು ಗುರಿಗಳನ್ನು ಈಡೇರಿಸುವ ಉದ್ದೇಶ ಇದೆ: ಮುಂಬರುವ ಪ್ರಚಾರ ಕಾರ್ಯಕ್ರಮಗಳ ಸಂದರ್ಭದಲ್ಲಿ ಒಂದಿಷ್ಟು ಸಂಭ್ರಮವನ್ನು ಹೆಚ್ಚು ಮಾಡುವುದು, ಅಮೆಜಾನ್ ಇನ್‌ಫ್ಲುಯೆನ್ಸರ್ ಕಾರ್ಯಕ್ರಮಕ್ಕೆ ಹೊಸ ಕ್ರಿಯೇಟರ್‌ಗಳು ಬರುವಂತೆ ಮಾಡುವುದು.

ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮವು ಹಲವು ಬಗೆಯ ಸಂವಾದದ ಅವಕಾಶಗಳನ್ನು ಒದಗಿಸುತ್ತದೆ. ಇನ್‌ಫ್ಲುಯೆನ್ಸರ್‌ಗಳು ಆಯೋಜಿಸುವ ಕಾರ್ಯಾ ಗಾರಗಳು, ಅಮೆಜಾನ್‌ನ ನಾಯಕರನ್ನು ಹಾಗೂ ಈಗಾಗಲೇ ಹೆಸರು ಮಾಡಿರುವ ಕ್ರಿಯೇಟರ್‌ಗಳನ್ನು ಭೇಟಿ ಮಾಡುವ ಅವಕಾಶ, ಉತ್ಪನ್ನಗಳ ಪ್ರದರ್ಶನಕ್ಕೆ ಅವಕಾಶ, ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವುದು ಯಾವುದು ಎಂಬ ಬಗ್ಗೆ ಚರ್ಚೆ ಸೇರಿದಂತೆ ಹಲವು ಅವಕಾಶಗಳು ಇಲ್ಲಿ ಇರಲಿವೆ. ಮೊದಲ ಕ್ರಿಯೇಟರ್ ಕನೆಕ್ಟ್ ಕಾರ್ಯಕ್ರಮ ‘ಅ ಸಮ್ಮರ್ ಎಸ್ಕೇಪ್’ ಮುಂಬೈನಲ್ಲಿ ಜೂನ್ 3ಕ್ಕೆ ಆರಂಭವಾಗಲಿದೆ. ಇದು ಫ್ಯಾಷನ್ ಹಾಗೂ ಲೈಫ್‌ಸ್ಟೈಲ್‌ ವಿಷಯಗಳ ಕ್ರಿಯೇಟರ್‌ಗಳ ಒಂದು ಸಮುದಾಯವನ್ನು ಕಟ್ಟುವ ಉದ್ದೇಶ ಹೊಂದಿದೆ. ಈ ಕಾರ್ಯಕ್ರಮದ ಸಂದರ್ಭದಲ್ಲಿಯೇ ಅಮೆಜಾನ್‌ ಫ್ಯಾಷನ್‌ನ ‘ವಾರ್ಡ್‌ರೋಬ್ ರಿಫ್ರೆಶ್ ಸೇಲ್‘ ಮಾರಾಟ ಮೇಳ ಕೂಡ ಇರಲಿದೆ.