Sunday, 15th December 2024

ಜೆಇಇ ಅಡ್ವಾನ್ಸ್ಡ್ 2024 ಫಲಿತಾಂಶ ಪ್ರಕಟ

ವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ(ಐಐಟಿ) ಮದ್ರಾಸ್ ಭಾನುವಾರ ಜಂಟಿ ಪ್ರವೇಶ ಪರೀಕ್ಷೆಯ(ಜೆಇಇ) ಅಡ್ವಾನ್ಸ್ಡ್ 2024 ಫಲಿತಾಂಶಗಳನ್ನು ಪ್ರಕಟಿಸಿದೆ.

ಈ ವರ್ಷ ಒಟ್ಟು 48,248 ಅಭ್ಯರ್ಥಿಗಳು ಐಐಟಿಗಳಿಗೆ ಪ್ರವೇಶಕ್ಕೆ ಅರ್ಹತೆ ಪಡೆದಿದ್ದಾರೆ, ಐಐಟಿ ದೆಹಲಿ ವಲಯದ ವೇದ್ ಲಹೋಟಿ ಅವರು 360 ರಲ್ಲಿ 355 ಅಂಕಗಳನ್ನು ಗಳಿಸುವ ಮೂಲಕ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದ್ದಾರೆ. ಐಐಟಿ ಬಾಂಬೆ ವಲಯದ ದ್ವಿಜಾ ಧರ್ಮೇಶ್‌ಕುಮಾರ್ ಪಟೇಲ್ ಮಹಿಳಾ ಅಭ್ಯರ್ಥಿಗಳಲ್ಲಿ ಮೊದಲ ರ್ಯಾಂಕ್ ಗಳಿಸಿ, 360 ಅಂಕಗಳಿಗೆ 322 ಅಂಕಗಳನ್ನು ಗಳಿಸಿ ಅಖಿಲ ಭಾರತ ಮಟ್ಟದಲ್ಲಿ 7ನೇ ರ್ಯಾಂಕ್ ಗಳಿಸಿದ್ದಾರೆ.

ಟಾಪ್ ಅಭ್ಯರ್ಥಿಗಳು:

  1. ವೇದ್ ಲಹೋಟಿ (IIT ದೆಹಲಿ ವಲಯ)
  2. ಆದಿತ್ಯ (ಐಐಟಿ ದೆಹಲಿ ವಲಯ)
  3. ಭೋಗಲ್ಪಲ್ಲಿ ಸಂದೇಶ್ (ಐಐಟಿ ಮದ್ರಾಸ್ ವಲಯ)
  4. ರಿದಮ್ ಕೆಡಿಯಾ (ಐಐಟಿ ರೂರ್ಕಿ ವಲಯ)
  5. ಪುಟ್ಟಿ ಕುಶಾಲ್ ಕುಮಾರ್ (ಐಐಟಿ ಮದ್ರಾಸ್ ವಲಯ)
  6. ರಾಜ್‌ದೀಪ್ ಮಿಶ್ರಾ (ಐಐಟಿ ಬಾಂಬೆ ವಲಯ)
  7. ಕೊಡೂರಿ ತೇಜೇಶ್ವರ್ (ಐಐಟಿ ಮದ್ರಾಸ್ ವಲಯ)
  8. ಧ್ರುವಿ ಹೇಮಂತ್ ದೋಷಿ (IIT ಬಾಂಬೆ ವಲಯ)
  9. ಅಲ್ಲದಬೋನ SSDB ಸಿಧ್ವಿಕ್ ಸುಹಾಸ್ (IIT ಮದ್ರಾಸ್ ವಲಯ)

ದೇಶದ ವಿವಿಧ ಐಐಟಿಗಳಲ್ಲಿ ಪ್ರವೇಶಕ್ಕಾಗಿ ಜೆಇಇ ಅಡ್ವಾನ್ಸ್ಡ್ ಪರೀಕ್ಷೆ ನಡೆಸಲಾಗುವುದು. ಈ ಬಾರಿ ಮದ್ರಾಸ್ ಐಐಟಿ ಪರೀಕ್ಷೆ ನಡೆಸುವ ಜವಾಬ್ದಾರಿ ವಹಿಸಿಕೊಂಡಿತ್ತು.