ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ್
ನವರಾತ್ರಿಯು ನಮ್ಮ ನಾಡಹಬ್ಬವಾಗಿದ್ದು, ದೇಶದ ಎಲ್ಲೆೆಡೆಯೂ ಒಂಭತ್ತು ರಾತ್ರಿಗಳು ಲೋಕಕಂಟಕರಾಗಿದ್ದ ಮಧು – ಕೈಟಭ,
ಶುಂಭ – ನಿಶುಂಭ, ಮಹಿಷಾಸುರ ಮೊದಲಾದ ಮಹಾರಾಕ್ಷಸರನ್ನು ಸಂಹರಿಸಿದ ಆ ಜಗನ್ಮಾತೆಯನ್ನು ಈ ನವರಾತ್ರಿಯಲ್ಲಿ ಉತ್ಸವವನ್ನು ಆಚರಿಸುವ ಮೂಲಕ ವಿಶೇಷವಾಗಿ ಪೂಜಿಸಲಾಗುತ್ತಿದೆ.
ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ ಮಹಾತ್ಮೆಯನ್ನು ಪಠಿಸುವುದರಿಂದ ಜಗನ್ಮಾತೆಯು ಸಂತುಷ್ಠಳಾಗಿ ಭಕ್ತರಿಗೆ ಸಕಲ ಸೌಖ್ಯಗಳನ್ನು ಅನುಗ್ರಹಿಸುತ್ತಾಳೆ. ನವರಾತ್ರಿ ಉತ್ಸವದ ಆಚರಣೆಯನ್ನು ಶ್ರೀಗುರುಮಠಗಳು ಹಾಗೂ ರಾಜ ಮಹಾರಾಜರು ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಹಾಗೂ ಮೈಸೂರು ಯದುವಂಶದ ಅರಸರಲ್ಲಿ ಈ ಆಚರಣೆಯು ವಿಶೇಷ ಹಾಗೂ ಪ್ರಾಮುಖ್ಯತೆಯನ್ನು ಹೊಂದಿದೆ.
ನವರಾತ್ರಿಯ ಹಿಂದಿನ ದಿನದಂದು ಅಂದರೆ ಈ ಬಾರಿ ಆಶ್ವಯುಜ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶ್ರೀಶಾರದಾಂಬೆಗೆ ಅನೇಕ ವಿಧವಾದ ಫಲ – ಪಂಚಾಮೃತ ಅಭಿಷೇಕದ ನಂತರ ಅಮ್ಮನವರಿಗೆ ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ಹಾಗೂ
108 ಸಲ ಶ್ರೀಸೂಕ್ತ ಪಠಣದೊಂದಿಗೆ ವಿಶೇಷ ಅಭಿಷೇಕಗಳನ್ನು ಮಾಡಲಾಗುತ್ತದೆ.
ಅಂದು ಅಮ್ಮನವರಿಗೆ ಮಾಡುವ ಹರಿದ್ರಾ ಅಲಂಕಾರವು ಸುಂದರ ಹಾಗೂ ಅಪರೂಪದ ಅಲಂಕಾರವಾಗಿದೆ. ಅಂದಿನ ರಾತ್ರಿ ಮಂದಸ್ಮಿತೆಯಾದ ಶ್ರೀ ಶಾರದಾ ಅಮ್ಮನವರು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ, ನೀನು ಮಗುವಿನಂತೆ ನನ್ನನ್ನು ಪೂಜಿಸುವು ದಾದರೆ ಮಗುವಿನಂತೆ ನಿನ್ನನ್ನು ರಕ್ಷಿಸುತ್ತೇನೆ ಎಂಬಂತೆ ತನ್ನ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು
ಸಂತೈಸುವ ಅಲಂಕೃತಳಾಗುತ್ತಾಳೆ.
ಮುಂದಿನ ದಿನದಿಂದ ನವರಾತ್ರಿಯ ದಿನಗಳಲ್ಲಿ ಪ್ರತ್ಯೇಕ ಅಲಂಕಾರಗಳನ್ನು ಮಾಡಲಾಗುತ್ತದೆ. ಮೊದಲ ದಿನದಲ್ಲಿ ಹಂಸ ವಾಹನರೂಢಳಾಗಿ ಅಮ್ಮನವರು ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶಾ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಬ್ರಹ್ಮನ ಪಟ್ಟದ ರಾಣಿಯಾಗಿ ಬ್ರಾಹ್ಮೀ ಅವತಾರಳಾಗಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಅಂದು ಚಿಂತಿತ ಕಾರ್ಯಸಿದ್ಧಿ, ಕುಜ ದೋಷ ನಿವಾರಣೆ ಮತ್ತು ಸಂತಾನ ಪ್ರಾಪ್ತಿಗಾಗಿ ಸಹಸ್ರ ಮೋದಕ ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ಹೋಮವನ್ನು ಲೊಕ ಕಲ್ಯಾಣಾ ರ್ಥವಾಗಿ ಮಾಡಲಾಗುವುದು. ಎರಡನೇ ದಿನ ವೃಷಭರೂಢಳಾಗಿ ಆದಿಶಕ್ತಿಯು ಮಹೇಶ್ವರನ ಅರ್ಧಾಂಗಿ ಮಹೇಶ್ವರಿಯಾಗಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ, ಚಂದ್ರರೇಖಾ ಭೂತಳಾಗಿ ಭಕ್ತರನ್ನು ಅನುಗ್ರಹಿಸುತ್ತಾಳೆ, ಅಂದು ನವಗ್ರಹ ಬಾಧ ನಿವಾರಣೆ, ದೀರ್ಘಾಯುಷ್ಯಕ್ಕಾಗಿ ನವಗ್ರಹ ಮತ್ತು ರುದ್ರ ಹೋಮವನ್ನು ಮಾಡಲಾಗುತ್ತದೆ.
ಮೂರನೇ ದಿನ ಮಯೂರ ವಾಹಿನಿಯಾಗಿ ಮಾತೆ ಶಾರದೆಯ ಕೈಯಲ್ಲಿ ಶಕ್ತ್ಯಾಯುಧವನ್ನು ಧರಿಸಿ, ನಲನ್ನೇರಿ ಕುಮಾರ
ಸ್ವಾಮಿಯ ಶಕ್ತಿಯಾಗಿ ಲೋಕವನ್ನು ಕೌಮಾರಿಯಾಗಿ ಅನುಗ್ರಹಿಸುತ್ತಾಳೆ. ಅಂದು ಆರೋಗ್ಯ ಪ್ರಾಪ್ತಿಗಾಗಿ ಮತ್ತು ಅಪಮೃತ್ಯು ನಿವಾರಣೆಗಾಗಿ ಧನ್ವಂತ್ರಿ ಮತ್ತು ಮಹಾಮೃತ್ಯುಂಜಯ ಹೋಮವನ್ನು ಮಾಡಲಾಗುವುದು. ನಾಲ್ಕನೆ ದಿನ ಗುರಡವಾಹಿನಿ
ಯಾಗಿ ಕೈಯಲ್ಲಿ ಶಂಖ, ಚಕ್ರ, ಗಧೆ ಮೊದಲಾದ ಆಯುಧಗಳನ್ನು ಧರಿಸಿ ಗರುಡನನ್ನು ಆರೋಹಿಸಿ ಶ್ರೀಮಹಾವಿಷ್ಣುವಿನ ಶಕ್ತಿಯಾಗಿ ವೈಷ್ಣವೀ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಅಂದು ಸುಖ, ಸಂತಾನಾಭಿವೃದ್ಧಿ, ಅನೋನ್ಯ ದಾಂಪತ್ಯಕ್ಕಾಗಿ ಲಕ್ಷ್ಮೀ ನಾರಾಯಣ ಹೃದಯ ಹೋಮವನ್ನು ಮಾಡಲಾಗು ವುದು. ಐದನೇ ದಿನ ಮಾತೆ ಶಾರದೆಯು ಕೈಯಲ್ಲಿ ಕಚ್ಛಪೀ ವೀಣೆಯನ್ನು ಧರಿಸಿ ಭಕ್ತರಿಗೆ ಜ್ಞಾನಾನುಗ್ರಹವನ್ನು ನೀಡುವಳು. ಅಂದು ಸದ್ಬುದ್ಧಿ ಪ್ರಾಪ್ತಿಗಾಗಿ ಮತ್ತು ವಿದ್ಯಾಭಿವೃದ್ಧಿಗಾಗಿ ಗಾಯತ್ರಿ ಮತ್ತು ವಿದ್ಯಾ ಸರಸ್ವತಿ ಹೋಮವನ್ನು ನೆರವೇರಿಸ ಲಾಗುವುದು ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವುದು ಅಂದಿನ ವಿಶೇಷ.
ಆರನೇ ದಿನ ಐರಾವತವನ್ನೇರಿ, ದೇವೇಂದ್ರನ ಪಟ್ಟಮಹಿಷಿಯಾಗಿ ವೃತಾಸುರ ಮೊದಲಾದ ದೃಷ್ಣ ದೈತ್ಯರನ್ನು ಸಂಹರಿಸಿ ಪ್ರಸನ್ನಳಾಗಿ ಗಜಲಕ್ಷ್ಮಿ ಅಲಂಕೃತಳಾಗಿ ದರ್ಶನ ನೀಡುತ್ತಾಳೆ. ಏಳನೇ ದಿನ ಅಮ್ಮನವರು ರಾಜರಾಜೇಶ್ವರಿ ಅಲಂಕಾರಭೂತಳಾಗಿ ಕೈಯಲ್ಲಿ ಪಾಶ, ಆಂಕುಶ, ಪುಷ್ಪ ಬಾಣ ಮತ್ತು ಬಿಲ್ಲುಗಳನ್ನು ಧರಿಸಿ ಕರುಣಾಪೂರಿತ ದೃಷ್ಟಿಯುಳ್ಳವಳಾಗಿ ಸರ್ವಾಲಂಕಾರ
ಭೂತಳಾಗಿ ಭಕ್ತರಿಗೆ ಸಕಲ ಸುಖ, ಸಂಪತ್ತುಗಳನ್ನು ಅನುಗ್ರಹಿಸುತ್ತಾಳೆ. ಎಂಟನೆ ದಿನ ಮೋಹಿನಿ ರೂಪವನ್ನು ತಾಳಿ ಕೈಯಲ್ಲಿ ಅಮೃತ ಕಳಸವನ್ನು ಹಿಡಿದು, ತನ್ನ ರೂಪ, ಲಾವಣ್ಯಗಳಿಂದ ದುಷ್ಟರು, ಕ್ರೂರಿಗಳೂ ಆದ ರಾಕ್ಷಸರನ್ನು ಮೋಹಗೊಳಿಸಿ,
ದೇವತೆಗಳಿಗೆ ಅಮೃತವು ಲಭಿಸುವಂತೆ ಮಾಡಿದ ಜಗನ್ಮಾತೆಯ ಮೋಹಿನಿ ಅಲಂಕಾರವು ವಿಶಿಷ್ಟವಾದುದು.
ಒಂಭತ್ತನೇ ದಿನ ಅಮ್ಮನವರು ಸಿಂಹವಾಹನವನ್ನೇರಿ, ಕೈಯಲ್ಲಿ ತ್ರಿಶೂಲವನ್ನು ಧರಿಸಿ ಚಂಡ-ಮುಂಡಾದಿ ದುಷ್ಟ ದೈತ್ಯರನ್ನು ಸಂಹರಿಸಿ, ಶಿಷ್ಟ ರಕ್ಷಣೆಗಾಗಿ ಆ ಜಗನ್ಮಾತೆ ಧರಿಸಿದ ಅವತಾರವೇ ಚಾಮುಂಡಾವತಾರ. ಅಂದು ದಾರಿದ್ರ್ಯ, ದುಃಖ ನಿವಾರಣೆ, ಶಾಂತಿ ಪ್ರಾಪ್ತಿಗಾಗಿ ದುರ್ಗಾ ಹೋಮವನ್ನು ಮಾಡಲಾಗುವುದು. ಈ ಜಗತ್ತಿನಲ್ಲಿ ಪರಾಶಕ್ತಿ ನಾನೊಬ್ಬಳೇ ಎಂದು ಶ್ರೀ ದೇವಿ ಮಹಾತ್ಮೆೆಯಲ್ಲಿ ಅಮ್ಮನವರು ತಿಳಿಸಿದಂತೆ ಎಲ್ಲಾ ಅಲಂಕಾರಗಳೂ ಜಗನ್ಮಾತೆಯದ್ದೇ ಆಗಿದೆ.
ಶ್ರೀಶಾರದಾ ಪೀಠದ ಜಗದ್ಗುರುಗಳವರು ನವರಾತ್ರಿಯ ಎಲ್ಲಾ ದಿವಸಗಳಲ್ಲೂ ಪ್ರಾತಃ ಕಾಲ ಹಾಗೂ ಮಧ್ಯಾಹ್ನ ಗುರುಪಾದುಕೆ ಗಳಿಗೂ, ಶ್ರೀ ಚಕ್ರಕ್ಕೂ ಹಾಗೂ ಅಮ್ಮನವರಿಗೂ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶೃಂಗೇರಿಯಲ್ಲಿ ನವರಾತ್ರಿಯ ವಿಶೇಷ ಕಾರ್ಯಕ್ರಮ ಅಂದರೆ ಅಂದು ರಾತ್ರಿ ನಡೆಯುವ ದರ್ಬಾರ್. ಶೃಂಗೇರಿಯಲ್ಲಿ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ಅಚ್ಛಿನ್ನವಾಗಿ ನಡೆದು ಬರುತ್ತಿದೆ. ಈ ದರ್ಬಾರಿಗೆ ಶ್ರೀಜಗದ್ಗುರುಗಳವರು ಸಂಪ್ರದಾಯಾನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶ್ರೀಶಾರದಾಂಬೆಯ ಉತ್ಸವ ಮೂರ್ತಿಯ ರಥೋತ್ಸವವನ್ನು ನಡೆಸಲಾಗುವುದು.
ರಥದ ಮುಂದೆ ಶ್ರೀ ಜಗದ್ಗುರುಗಳವರು ಅಭಿಮುಖವಾಗಿ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಅಮ್ಮನವರಿಗೆ ಅಭಿಮುಖವಾಗಿ ಇರಿಸಿರುವ ಸ್ವರ್ಣ ಸಿಂಹಾಸನದಲ್ಲಿ ಶ್ರೀಜಗದ್ಗುರುಗಳವರು ಆಸೀನರಾದ ಮೇಲೆ ಸಪ್ತಶತಿ ಪರಾಯಣ ಮಾಡಲಾಗುವುದು.
ಹೀಗೆ ನವರಾತ್ರಿಯ ಎಲ್ಲಾ ದಿವಸಗಳಲ್ಲೂ ಶ್ರೀ ಜಗದ್ಗುರು ಗಳವರು ದರ್ಬಾರಿನ ಪೋಷಾಕಿನಲ್ಲಿವಿಶೇಷ ದರ್ಶನ ನೀಡುವುದು
ಸಾಂಪ್ರದಾಯವಾಗಿದೆ. ನವರಾತ್ರಿ ಉತ್ಸವ ಆಚರಣೆಯನ್ನು ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಹಾಗೂ ಕಿರಿಯ ಜಗದ್ಗರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ಸಾಂಪ್ರದಾ ಯಿಕವಾಗಿ ಶ್ರದ್ಧಾಭಕ್ತಿಗಳಿಂದ ಅಮ್ಮನವರನ್ನು ಪೂಜಿಸುವುದು ಹಾಗೂ ಅದರ ದರ್ಶನವನ್ನು ಪಡೆದ ಭಕ್ತರು ಕೃತಾರ್ಥರು.
ಹಾಗೆಯೇ ಮೈಸೂರಿನ ಯದುವಂಶದ ದೊರೆಗಳೂ ಸಹ ಶ್ರದ್ಧಾ ಭಕ್ತಿಗಳಿಂದ ನವರಾತ್ರಿ ಉತ್ಸವ ಆಚರಣೆ ನಿಮಿತ್ತವಾಗಿ
ದೇವಸ್ಥಾನಗಳಿಂದ ಬಂದ ಎಣ್ಣೆ – ಅರಿಶಿನಗಳಿಂದ ಮಂಗಳ ಸ್ನಾನವನ್ನು ಮಾಡಿ ದೀಕ್ಷಾ ವಸ್ತ್ರವನ್ನುಟ್ಟು ಅರಮನೆಯಲ್ಲಿರುವ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣವನ್ನು ಧರಿಸಿಕೊಂಡು ಸರ್ವಾಲಂಕಾರ ಭೂತರಾಗಿ ಪಟ್ಟದ ಕತ್ತಿಯನ್ನು ಹಿಡಿದು ನವಗ್ರಹಾದಿ ದೇವತೆಗಳನ್ನು ಕಳಸದಲ್ಲಿ ಪೂಜಿಸಿ, ಕಾಳಿಕಾಪುರಾಣೋಕ್ತ ಪ್ರಾಕಾರವಾಗಿ ಸಿಂಹಾಸನ ಪೂಜೆಯನ್ನು ನೆರವೇರಿಸಿ, ಸುಮುಹೂರ್ತದಲ್ಲಿ ಸಿಂಹಾಸನಾರೂಢರಾಗುವರು.
ಆ ಸಮಯದಲ್ಲಿ ಕೆಮ್ಮಣ್ಣುಮಟ್ಟಿಯ ಸುತ್ತಲೂ ನಿಂತಿರುವ ಪಟ್ಟದ ಆನೆ, ಕುದುರೆ, ಒಂಟೆ ಹಾಗೂ ಕಾಲಾಳುಗಳಿಂದಲೂ ತಮ್ಮ ಭುಜ ಪರಾಕ್ರಮದಿಂದ ಸಂಪಾದಿಸಿದ ಹನುಮಧ್ವಜ, ಗರುಡಧ್ವಜ, ಬಿರುದುಗಳಿಂದಲೂ, ಮೃದಂಗ, ವೀಣಾವೇಣು, ಕಹಳಾಭೇರಿ ಮೊದಲಾದ ವಾದ್ಯ ಘೋಷಗಳಿಂದಲೂ, ಪುರೋಹಿತರು, ಬ್ರಾಹ್ಮಣರುಗಳಿಂದ ಕಲಶೋಧಕ ಮಾರ್ಜನೆಯಂ ಮಾಡಿಸಿಕೊಂಡು ಕುಲದೇವತೆಯಾದ ಶ್ರೀಚಾಮುಂಡೇಶ್ವರಿ ಅಮ್ಮ ನವರ ಸನ್ನಿಧಿಯಲ್ಲಿ ಜಪಪೂಜಾದಿಗಳನ್ನು ನೆರವೇರಿಸಿ ದೇವಸ್ಥಾನಗಳಿಂದ ಬಂದ ಪ್ರಸಾದವನ್ನು ಸ್ವೀಕರಿಸಿ, ಫಲಮಂತ್ರಾಕ್ಷತೆಗಳನ್ನು ಪಡೆದು ತಮ್ಮ ಪುತ್ರರು, ಅರಸುಗಳು, ಪಾಳೆಯಗಾರರು, ಅಧಿಕಾ ರಸ್ಥರು ಮೊದಲಾದವರು ಅವರವರಿಗೆ ಅನುಗುಣವಾಗಿ ಒಪ್ಪಿಸಿದ ಕಾಣಿಕೆಯನ್ನು ಪಡೆದು ಆರತಿಯನ್ನೆತ್ತಿದ ಬಳಿಕ ಸಿಂಹಾಸನ ದಿಂದ ಇಳಿಯುವ ಸಂದರ್ಭದಲ್ಲಿ 5 ಕುಶಾಲ ಪಿರಂಗಿಗಳು ಹಾರಿಸಿದ ಮೇಲೆ ಮರ್ಯಾದಾನುಸಾರವಾಗಿ ಸಿಂಹಾಸನಕ್ಕೆ ನಮ ಸ್ಕರಿಸಿ, ಅಂತಃಪುರಕ್ಕೆ ತೆರಳುವರು.
ಹೀಗೆ ನವರಾತ್ರಿಯ ಮೊದಲ ದಿನದಿಂದ ಮಹಾನವಮಿ ವರೆಗೆ ಸಂಪ್ರದಾಯ ಆಚರಣೆಯನ್ನು ಪಾಲಿಸ ಲಾಗುವುದು. ವಿಜಯ
ದಶಮಿ ದಿವಸ ಪ್ರಾತಃಕಾಲದಲ್ಲಿ ಸ್ನಾನ, ಸಂಧ್ಯಾ ವಂದನೆಯನ್ನು ಮಾಡಿ, ಸರ್ವಾಲಂಕಾರಭೂತರಾಗಿ, ಆಯುಧಗಳಿಗೆ ಉತ್ತರ ಪೂಜೆಯನ್ನು ಮಾಡಿದ ಮೇಲೆ ಪೂರ್ವದಂತೆ ಓಲಗ ವಜರೆ ನಡೆಯುವ ಸಮಯದಲ್ಲಿ ಆಯುಧದ ಎದುರಿಗೆ ರಕ್ತ ಬೀಳುವಂತೆ ಜಟ್ಟಿ ಕಾಳಗವನ್ನು ವೀಕ್ಷಿಸಿ, ಆನಂತರ ಪಟ್ಟದ ಕತ್ತಿಯನ್ನೂ, ಆಯುಧ ಗಳನ್ನೂ ಬನ್ನಿಯ ಮರದ ಮಂಟಪಕ್ಕೆ ಪಟ್ಟದ ಆನೆ, ಕುದುರೆಗಳ ಸತವಾಗಿ ಪೂರ್ವದಂತೆ ಆಗಮಿಸಿ, ಶಮೀ ವೃಕ್ಷದ ಪೂಜೆಯನ್ನು ಮಾಡಿ, ಪ್ರಸಾದವನ್ನುಸ್ವೀಕರಿಸುವರು.
ಆನಂತರ ಪಟ್ಟದ ಕತ್ತಿಯನ್ನು ಅರಮನೆಯಲ್ಲಿನ ಶ್ರೀಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಇರಿಸಿ ಪೂಜಿಸಲಾಗುವುದು.
ಈ ನವರಾತ್ರಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶಜರಾದ ಶ್ರೀಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿಯ ಎಲ್ಲಾ ದಿನಗಳಲ್ಲೂ ಅರಮನೆಯಲ್ಲಿ ಖಾಸಗಿ ದರ್ಬಾರನ್ನು ನಡೆಸಿ ಸಂಪ್ರದಾಯವನ್ನುಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆೆಯ ವಿಷಯ.
ನವರಾತ್ರಿಯು ನಮ್ಮ ನಾಡಹಬ್ಬವಾಗಿದ್ದು, ದೇಶದ ಎಲ್ಲೆೆಡೆಯೂ ಒಂಭತ್ತು ರಾತ್ರಿಗಳು ಲೋಕಕಂಟಕರಾಗಿದ್ದ ಮಧು – ಕೈಟಭ,
ಶುಂಭ – ನಿಶುಂಭ, ಮಹಿಷಾಸುರ ಮೊದಲಾದ ಮಹಾರಾಕ್ಷಸರನ್ನು ಸಂಹರಿಸಿದ ಆ ಜಗನ್ಮಾತೆಯನ್ನು ಈ ನವರಾತ್ರಿಯಲ್ಲಿ ಉತ್ಸವವನ್ನು ಆಚರಿಸುವ ಮೂಲಕ ವಿಶೇಷವಾಗಿ ಪೂಜಿಸಲಾಗುತ್ತಿದೆ. ಆ ಜಗನ್ಮಾತೆಗೆ ವಿಶೇಷ ಪೂಜೆ ಸಲ್ಲಿಸಿ ದೇವಿಯ
ಮಹಾತ್ಮೆಯನ್ನು ಪಠಿಸುವುದರಿಂದ ಜಗನ್ಮಾತೆಯು ಸಂತುಷ್ಠಳಾಗಿ ಭಕ್ತರಿಗೆ ಸಕಲ ಸೌಖ್ಯಗಳನ್ನು ಅನುಗ್ರಹಿಸುತ್ತಾಳೆ.
ನವರಾತ್ರಿ ಉತ್ಸವದ ಆಚರಣೆಯನ್ನು ಶ್ರೀಗುರುಮಠಗಳು ಹಾಗೂ ರಾಜ ಮಹಾರಾಜರು ವಿಶೇಷವಾಗಿ ಆಚರಿಸುತ್ತಾರೆ. ಅದರಲ್ಲೂ ಶೃಂಗೇರಿಯ ಶ್ರೀ ಶಾರದಾ ಪೀಠದಲ್ಲಿ ಹಾಗೂ ಮೈಸೂರು ಯದುವಂಶದ ಅರಸರಲ್ಲಿ ಈ ಆಚರಣೆಯು ವಿಶೇಷ ಹಾಗೂ ಪ್ರಾಮುಖ್ಯತೆಯನ್ನು ಹೊಂದಿದೆ. ನವರಾತ್ರಿಯ ಹಿಂದಿನ ದಿನದಂದು ಅಂದರೆ ಈ ಬಾರಿ ಆಶ್ವಯುಜ ಮಾಸ, ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಶ್ರೀಶಾರದಾಂಬೆಗೆ ಅನೇಕ ವಿಧವಾದ ಫಲ – ಪಂಚಾಮೃತ ಅಭಿಷೇಕದ ನಂತರ ಅಮ್ಮನವರಿಗೆ
ಮಹಾನ್ಯಾಸ ಪೂರ್ವಕ ಶತರುದ್ರಾಭಿಷೇಕ ಹಾಗೂ 108 ಸಲ ಶ್ರೀಸೂಕ್ತ ಪಠಣದೊಂದಿಗೆ ವಿಶೇಷ ಅಭಿಷೇಕಗಳನ್ನು ಮಾಡಲಾಗು ತ್ತದೆ.
ಅಂದು ಅಮ್ಮನವರಿಗೆ ಮಾಡುವ ಹರಿದ್ರಾ ಅಲಂಕಾರವು ಸುಂದರ ಹಾಗೂ ಅಪರೂಪದ ಅಲಂಕಾರವಾಗಿದೆ. ಅಂದಿನ ರಾತ್ರಿ ಮಂದಸ್ಮಿತೆಯಾದ ಶ್ರೀ ಶಾರದಾ ಅಮ್ಮನವರು ಈ ಜಗತ್ತಿನ ಸೃಷ್ಟಿಗೆ ನಾನೇ ತಾಯಿ, ನೀನು ಮಗುವಿನಂತೆ ನನ್ನನ್ನು ಪೂಜಿಸುವು ದಾದರೆ ಮಗುವಿನಂತೆ ನಿನ್ನನ್ನು ರಕ್ಷಿಸುತ್ತೇನೆ ಎಂಬಂತೆ ತನ್ನ ತೊಡೆಯ ಮೇಲೆ ಮುದ್ದಾದ ಮಗುವನ್ನು ಮಲಗಿಸಿಕೊಂಡು
ಸಂತೈಸುವ ಅಲಂಕೃತಳಾಗುತ್ತಾಳೆ.
ಮುಂದಿನ ದಿನದಿಂದ ನವರಾತ್ರಿಯ ದಿನಗಳಲ್ಲಿ ಪ್ರತ್ಯೇಕ ಅಲಂಕಾರಗಳನ್ನು ಮಾಡಲಾಗುತ್ತದೆ. ಮೊದಲ ದಿನದಲ್ಲಿ ಹಂಸ ವಾಹನರೂಢಳಾಗಿ ಅಮ್ಮನವರು ಕೈಯಲ್ಲಿ ಕಮಂಡಲು, ಅಕ್ಷಮಾಲೆ, ಪುಸ್ತಕ, ಪಾಶಾ ಮತ್ತು ಚಿನ್ಮುದ್ರೆಗಳನ್ನು ಧರಿಸಿ ಬ್ರಹ್ಮನ ಪಟ್ಟದ ರಾಣಿಯಾಗಿ ಬ್ರಾಹ್ಮೀ ಅವತಾರಳಾಗಿ ಭಕ್ತರನ್ನು ಅನುಗ್ರಹಿಸುತ್ತಾಳೆ. ಅಂದು ಚಿಂತಿತ ಕಾರ್ಯಸಿದ್ಧಿ, ಕುಜ ದೋಷ ನಿವಾರಣೆ ಮತ್ತು ಸಂತಾನ ಪ್ರಾಪ್ತಿಗಾಗಿ ಸಹಸ್ರ ಮೋದಕ ಮಹಾಗಣಪತಿ ಮತ್ತು ಸುಬ್ರಹ್ಮಣ್ಯ ಹೋಮವನ್ನು ಲೊಕ ಕಲ್ಯಾಣಾ ರ್ಥವಾಗಿ ಮಾಡಲಾಗುವುದು. ಎರಡನೇ ದಿನ ವೃಷಭರೂಢಳಾಗಿ ಆದಿಶಕ್ತಿಯು ಮಹೇಶ್ವರನ ಅರ್ಧಾಂಗಿ ಮಹೇಶ್ವರಿಯಾಗಿ ಕೈಯಲ್ಲಿ ತ್ರಿಶೂಲವನ್ನು ಧರಿಸಿ, ಚಂದ್ರರೇಖಾ ಭೂತಳಾಗಿ ಭಕ್ತರನ್ನು ಅನುಗ್ರಹಿಸುತ್ತಾಳೆ, ಅಂದು ನವಗ್ರಹ ಬಾಧ ನಿವಾರಣೆ, ದೀರ್ಘಾಯುಷ್ಯಕ್ಕಾಗಿ ನವಗ್ರಹ ಮತ್ತು ರುದ್ರ ಹೋಮವನ್ನು ಮಾಡಲಾಗುತ್ತದೆ.
ಮೂರನೇ ದಿನ ಮಯೂರ ವಾಹಿನಿಯಾಗಿ ಮಾತೆ ಶಾರದೆಯ ಕೈಯಲ್ಲಿ ಶಕ್ತ್ಯಾಯುಧವನ್ನು ಧರಿಸಿ, ನಲನ್ನೇರಿ ಕುಮಾರ
ಸ್ವಾಮಿಯ ಶಕ್ತಿಯಾಗಿ ಲೋಕವನ್ನು ಕೌಮಾರಿಯಾಗಿ ಅನುಗ್ರಹಿಸುತ್ತಾಳೆ. ಅಂದು ಆರೋಗ್ಯ ಪ್ರಾಪ್ತಿಗಾಗಿ ಮತ್ತು ಅಪಮೃತ್ಯು ನಿವಾರಣೆಗಾಗಿ ಧನ್ವಂತ್ರಿ ಮತ್ತು ಮಹಾಮೃತ್ಯುಂಜಯ ಹೋಮವನ್ನು ಮಾಡಲಾಗುವುದು. ನಾಲ್ಕನೆ ದಿನ ಗುರಡವಾಹಿನಿ
ಯಾಗಿ ಕೈಯಲ್ಲಿ ಶಂಖ, ಚಕ್ರ, ಗಧೆ ಮೊದಲಾದ ಆಯುಧಗಳನ್ನು ಧರಿಸಿ ಗರುಡನನ್ನು ಆರೋಹಿಸಿ ಶ್ರೀಮಹಾವಿಷ್ಣುವಿನ ಶಕ್ತಿಯಾಗಿ ವೈಷ್ಣವೀ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ.
ಅಂದು ಸುಖ, ಸಂತಾನಾಭಿವೃದ್ಧಿ, ಅನೋನ್ಯ ದಾಂಪತ್ಯಕ್ಕಾಗಿ ಲಕ್ಷ್ಮೀ ನಾರಾಯಣ ಹೃದಯ ಹೋಮವನ್ನು ಮಾಡಲಾಗು ವುದು. ಐದನೇ ದಿನ ಮಾತೆ ಶಾರದೆಯು ಕೈಯಲ್ಲಿ ಕಚ್ಛಪೀ ವೀಣೆಯನ್ನು ಧರಿಸಿ ಭಕ್ತರಿಗೆ ಜ್ಞಾನಾನುಗ್ರಹವನ್ನು ನೀಡುವಳು. ಅಂದು ಸದ್ಬುದ್ಧಿ ಪ್ರಾಪ್ತಿಗಾಗಿ ಮತ್ತು ವಿದ್ಯಾಭಿವೃದ್ಧಿಗಾಗಿ ಗಾಯತ್ರಿ ಮತ್ತು ವಿದ್ಯಾ ಸರಸ್ವತಿ ಹೋಮವನ್ನು ನೆರವೇರಿಸ ಲಾಗುವುದು ಹಾಗೂ ಮಕ್ಕಳಿಗೆ ಅಕ್ಷರಾಭ್ಯಾಸವನ್ನು ಮಾಡಿಸುವುದು ಅಂದಿನ ವಿಶೇಷ. ಆರನೇ ದಿನ ಐರಾವತವನ್ನೇರಿ,
ದೇವೇಂದ್ರನ ಪಟ್ಟಮಹಿಷಿಯಾಗಿ ವೃತಾಸುರ ಮೊದಲಾದ ದೃಷ್ಣ ದೈತ್ಯರನ್ನು ಸಂಹರಿಸಿ ಪ್ರಸನ್ನಳಾಗಿ ಗಜಲಕ್ಷ್ಮಿ ಅಲಂಕೃತ ಳಾಗಿ ದರ್ಶನ ನೀಡುತ್ತಾಳೆ.
ಏಳನೇ ದಿನ ಅಮ್ಮನವರು ರಾಜರಾಜೇಶ್ವರಿ ಅಲಂಕಾರಭೂತಳಾಗಿ ಕೈಯಲ್ಲಿ ಪಾಶ, ಆಂಕುಶ, ಪುಷ್ಪ ಬಾಣ ಮತ್ತು ಬಿಲ್ಲುಗಳನ್ನು ಧರಿಸಿ ಕರುಣಾಪೂರಿತ ದೃಷ್ಟಿಯುಳ್ಳವಳಾಗಿ ಸರ್ವಾಲಂಕಾರ ಭೂತಳಾಗಿ ಭಕ್ತರಿಗೆ ಸಕಲ ಸುಖ, ಸಂಪತ್ತುಗಳನ್ನು ಅನುಗ್ರಹಿಸು ತ್ತಾಳೆ. ಎಂಟನೆ ದಿನ ಮೋಹಿನಿ ರೂಪವನ್ನು ತಾಳಿ ಕೈಯಲ್ಲಿ ಅಮೃತ ಕಳಸವನ್ನು ಹಿಡಿದು, ತನ್ನ ರೂಪ, ಲಾವಣ್ಯಗಳಿಂದ ದುಷ್ಟರು, ಕ್ರೂರಿಗಳೂ ಆದ ರಾಕ್ಷಸರನ್ನು ಮೋಹಗೊಳಿಸಿ, ದೇವತೆಗಳಿಗೆ ಅಮೃತವು ಲಭಿಸುವಂತೆ ಮಾಡಿದ ಜಗನ್ಮಾತೆಯ ಮೋಹಿನಿ ಅಲಂಕಾರವು ವಿಶಿಷ್ಟ ವಾದುದು. ಒಂಭತ್ತನೇ ದಿನ ಅಮ್ಮನವರು ಸಿಂಹವಾಹನವನ್ನೇರಿ, ಕೈಯಲ್ಲಿ ತ್ರಿಶೂಲವನ್ನು ಧರಿಸಿ ಚಂಡ-ಮುಂಡಾದಿ ದುಷ್ಟ ದೈತ್ಯರನ್ನು ಸಂಹರಿಸಿ, ಶಿಷ್ಟ ರಕ್ಷಣೆಗಾಗಿ ಆ ಜಗನ್ಮಾತೆ ಧರಿಸಿದ ಅವತಾರವೇ ಚಾಮುಂಡಾವ ತಾರ.
ಅಂದು ದಾರಿದ್ರ್ಯ, ದುಃಖ ನಿವಾರಣೆ, ಶಾಂತಿ ಪ್ರಾಪ್ತಿಗಾಗಿ ದುರ್ಗಾ ಹೋಮವನ್ನು ಮಾಡಲಾಗುವುದು. ಈ ಜಗತ್ತಿನಲ್ಲಿ ಪರಾಶಕ್ತಿ
ನಾನೊಬ್ಬಳೇ ಎಂದು ಶ್ರೀ ದೇವಿ ಮಹಾತ್ಮೆಯಲ್ಲಿ ಅಮ್ಮನವರು ತಿಳಿಸಿದಂತೆ ಎಲ್ಲಾ ಅಲಂಕಾರಗಳೂ ಜಗನ್ಮಾತೆಯದ್ದೇ ಆಗಿದೆ.
ಶ್ರೀಶಾರದಾ ಪೀಠದ ಜಗದ್ಗುರುಗಳವರು ನವರಾತ್ರಿಯ ಎಲ್ಲಾ ದಿವಸಗಳಲ್ಲೂ ಪ್ರಾತಃ ಕಾಲ ಹಾಗೂ ಮಧ್ಯಾಹ್ನ ಗುರು ಪಾದುಕೆ ಗಳಿಗೂ, ಶ್ರೀ ಚಕ್ರಕ್ಕೂ ಹಾಗೂ ಅಮ್ಮನವರಿಗೂ ವಿಶೇಷ ಪೂಜೆ ಸಲ್ಲಿಸುತ್ತಾರೆ. ಶೃಂಗೇರಿಯಲ್ಲಿ ನವರಾತ್ರಿಯ ವಿಶೇಷ ಕಾರ್ಯ ಕ್ರಮ ಅಂದರೆ ಅಂದು ರಾತ್ರಿ ನಡೆಯುವ ದರ್ಬಾರ್.
ಶೃಂಗೇರಿಯಲ್ಲಿ ದರ್ಬಾರ್ ಶ್ರೀ ವಿದ್ಯಾರಣ್ಯರ ಕಾಲದಿಂದಲೂ ಅಚ್ಛಿನ್ನವಾಗಿ ನಡೆದು ಬರುತ್ತಿದೆ. ಈ ದರ್ಬಾರಿಗೆ ಶ್ರೀಜಗದ್ಗುರು ಗಳವರು ಸಂಪ್ರದಾಯಾನುಸಾರವಾಗಿ ಕಿರೀಟ, ಆಭರಣಗಳನ್ನು ಧರಿಸಿ ವ್ಯಾಖ್ಯಾನ ಸಿಂಹಾಸನದಲ್ಲಿರುವ ಶ್ರೀಶಾರದಾಂಬೆಯ ಉತ್ಸವ ಮೂರ್ತಿಯ ರಥೋತ್ಸವವನ್ನು ನಡೆಸಲಾಗುವುದು. ರಥದ ಮುಂದೆ ಶ್ರೀ ಜಗದ್ಗುರುಗಳವರು ಅಭಿಮುಖವಾಗಿ ಪ್ರದಕ್ಷಿಣೆ ಹಾಕುತ್ತಾರೆ. ನಂತರ ಅಮ್ಮನವರಿಗೆ ಅಭಿಮುಖವಾಗಿ ಇರಿಸಿರುವ ಸ್ವರ್ಣ ಸಿಂಹಾಸನದಲ್ಲಿ ಶ್ರೀಜಗದ್ಗುರುಗಳವರು ಆಸೀನರಾದ
ಮೇಲೆ ಸಪ್ತಶತಿ ಪರಾಯಣ ಮಾಡಲಾಗುವುದು.
ಹೀಗೆ ನವರಾತ್ರಿಯ ಎಲ್ಲಾ ದಿವಸಗಳಲ್ಲೂ ಶ್ರೀ ಜಗದ್ಗುರು ಗಳವರು ದರ್ಬಾರಿನ ಪೋಷಾಕಿನಲ್ಲಿ ವಿಶೇಷ ದರ್ಶನ ನೀಡುವುದು
ಸಾಂಪ್ರದಾಯವಾಗಿದೆ. ನವರಾತ್ರಿ ಉತ್ಸವ ಆಚರಣೆಯನ್ನು ಶೃಂಗೇರಿಯಲ್ಲಿ ಶ್ರೀ ಶಾರದಾ ಪೀಠಾಧಿಪತಿಗಳಾದ ಜಗದ್ಗುರು ಶ್ರೀ ಭಾರತೀತೀರ್ಥ ಮಹಾಸ್ವಾಮಿಗಳವರು ಹಾಗೂ ಕಿರಿಯ ಜಗದ್ಗರುಗಳಾದ ಶ್ರೀ ವಿಧುಶೇಖರ ಭಾರತೀ ಸ್ವಾಮಿಗಳವರು ಸಾಂಪ್ರ ದಾಯಿಕವಾಗಿ ಶ್ರದ್ಧಾ ಭಕ್ತಿಗಳಿಂದ ಅಮ್ಮನವರನ್ನು ಪೂಜಿಸುವುದು ಹಾಗೂ ಅದರ ದರ್ಶನವನ್ನು ಪಡೆದ ಭಕ್ತರು ಕೃತಾರ್ಥರು.
ಹಾಗೆಯೇ ಮೈಸೂರಿನ ಯದುವಂಶದ ದೊರೆಗಳೂ ಸಹ ಶ್ರದ್ಧಾ ಭಕ್ತಿಗಳಿಂದ ನವರಾತ್ರಿ ಉತ್ಸವ ಆಚರಣೆ ನಿಮಿತ್ತವಾಗಿ
ದೇವಸ್ಥಾನಗಳಿಂದ ಬಂದ ಎಣ್ಣೆ – ಅರಿಶಿನಗಳಿಂದ ಮಂಗಳ ಸ್ನಾನವನ್ನು ಮಾಡಿ ದೀಕ್ಷಾ ವಸ್ತ್ರವನ್ನುಟ್ಟು ಅರಮನೆಯಲ್ಲಿರುವ ಶ್ರೀಚಾಮುಂಡೇಶ್ವರಿ ಸನ್ನಿಧಿಯಲ್ಲಿ ಕಂಕಣವನ್ನು ಧರಿಸಿಕೊಂಡು ಸರ್ವಾಲಂಕಾರ ಭೂತರಾಗಿ ಪಟ್ಟದ ಕತ್ತಿಯನ್ನು ಹಿಡಿದು ನವಗ್ರಹಾದಿ ದೇವತೆ ಗಳನ್ನು ಕಳಸದಲ್ಲಿ ಪೂಜಿಸಿ, ಕಾಳಿಕಾಪುರಾಣೋಕ್ತ ಪ್ರಾಕಾರ ವಾಗಿ ಸಿಂಹಾಸನ ಪೂಜೆಯನ್ನು ನೆರವೇರಿಸಿ, ಸುಮುಹೂರ್ತದಲ್ಲಿ ಸಿಂಹಾಸನಾರೂಢರಾಗುವರು. ಆ ಸಮಯದಲ್ಲಿ ಕೆಮ್ಮಣ್ಣುಮಟ್ಟಿಯ ಸುತ್ತಲೂ ನಿಂತಿರುವ ಪಟ್ಟದ
ಆನೆ, ಕುದುರೆ, ಒಂಟೆ ಹಾಗೂ ಕಾಲಾಳುಗಳಿಂದಲೂ ತಮ್ಮ ಭುಜ ಪರಾಕ್ರಮದಿಂದ ಸಂಪಾದಿಸಿದ ಹನುಮಧ್ವಜ, ಗರುಡಧ್ವಜ, ಬಿರುದುಗಳಿಂದಲೂ, ಮೃದಂಗ, ವೀಣಾವೇಣು, ಕಹಳಾಭೇರಿ ಮೊದಲಾದ ವಾದ್ಯ ಘೋಷಗಳಿಂದಲೂ, ಪುರೋಹಿತರು,
ಬ್ರಾಹ್ಮಣರುಗಳಿಂದ ಕಲಶೋಧಕ ಮಾರ್ಜನೆಯಂ ಮಾಡಿಸಿಕೊಂಡು ಕುಲದೇವತೆಯಾದ ಶ್ರೀಚಾಮುಂಡೇಶ್ವರಿ ಅಮ್ಮ ನವರ ಸನ್ನಿಧಿಯಲ್ಲಿ ಜಪಪೂಜಾದಿಗಳನ್ನು ನೆರವೇರಿಸಿ ದೇವಸ್ಥಾನಗಳಿಂದ ಬಂದ ಪ್ರಸಾದವನ್ನು ಸ್ವೀಕರಿಸಿ, ಫಲಮಂತ್ರಾಕ್ಷತೆಗಳನ್ನು ಪಡೆದು ತಮ್ಮ ಪುತ್ರರು, ಅರಸುಗಳು, ಪಾಳೆಯಗಾರರು, ಅಧಿಕಾರಸ್ಥರು ಮೊದಲಾದವರು ಅವರವರಿಗೆ ಅನುಗುಣವಾಗಿ ಒಪ್ಪಿಸಿದ ಕಾಣಿಕೆಯನ್ನು ಪಡೆದು ಆರತಿಯನ್ನೆತ್ತಿದ ಬಳಿಕ ಸಿಂಹಾಸನದಿಂದ ಇಳಿಯುವ ಸಂದರ್ಭದಲ್ಲಿ 5 ಕುಶಾಲ ಪಿರಂಗಿಗಳು ಹಾರಿಸಿದ ಮೇಲೆ ಮರ್ಯಾದಾನುಸಾರ ವಾಗಿ ಸಿಂಹಾಸನಕ್ಕೆ ನಮಸ್ಕರಿಸಿ, ಅಂತಃಪುರಕ್ಕೆ ತೆರಳುವರು. ಹೀಗೆ ನವರಾತ್ರಿಯ ಮೊದಲ ದಿನದಿಂದ ಮಹಾನವಮಿ ವರೆಗೆ ಸಂಪ್ರದಾಯ ಆಚರಣೆಯನ್ನು ಪಾಲಿಸ ಲಾಗುವುದು.
ವಿಜಯ ದಶಮಿ ದಿವಸ ಪ್ರಾತಃಕಾಲದಲ್ಲಿ ಸ್ನಾನ, ಸಂಧ್ಯಾವಂದನೆಯನ್ನು ಮಾಡಿ, ಸರ್ವಾಲಂಕಾರಭೂತರಾಗಿ, ಆಯುಧಗಳಿಗೆ ಉತ್ತರ ಪೂಜೆಯನ್ನು ಮಾಡಿದ ಮೇಲೆ ಪೂರ್ವದಂತೆ ಓಲಗ ವಜರೆ ನಡೆಯುವ ಸಮಯದಲ್ಲಿ ಆಯುಧದ ಎದುರಿಗೆ ರಕ್ತ ಬೀಳು ವಂತೆ ಜಟ್ಟಿ ಕಾಳಗವನ್ನು ವೀಕ್ಷಿಸಿ, ಆನಂತರ ಪಟ್ಟದ ಕತ್ತಿಯನ್ನೂ, ಆಯುಧಗಳನ್ನೂ ಬನ್ನಿಯ ಮರದ ಮಂಟಪಕ್ಕೆ ಪಟ್ಟದ ಆನೆ, ಕುದುರೆಗಳ ಸತವಾಗಿ ಪೂರ್ವದಂತೆ ಆಗಮಿಸಿ, ಶಮೀ ವೃಕ್ಷದ ಪೂಜೆಯನ್ನು ಮಾಡಿ, ಪ್ರಸಾದವನ್ನು ಸ್ವೀಕರಿಸು ವರು.
ಆನಂತರ ಪಟ್ಟದ ಕತ್ತಿಯನ್ನುಅರಮನೆಯಲ್ಲಿನ ಶ್ರೀಚಾಮುಂಡೇಶ್ವರಿ ಅಮ್ಮನವರ ಸನ್ನಿಧಿಯಲ್ಲಿ ಇರಿಸಿ ಪೂಜಿಸಲಾಗುವುದು.
ಈ ನವರಾತ್ರಿ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮೈಸೂರು ಸಂಸ್ಥಾನವನ್ನು ಆಳಿದ ಯದುವಂಶಜರಾದ ಶ್ರೀಯದು ವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ನವರಾತ್ರಿಯ ಎಲ್ಲಾ ದಿನಗಳಲ್ಲೂ ಅರಮನೆಯಲ್ಲಿ ಖಾಸಗಿ ದರ್ಬಾರನ್ನು ನಡೆಸಿ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ವಿಷಯ.