Sunday, 15th December 2024

ಹಾಸ್ಯ ನಟ ಪೃಥ್ವಿರಾಜ್ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್

ಮರಾವತಿ: ಹಾಸ್ಯ ನಟ ಪೃಥ್ವಿರಾಜ್ ವಿರುದ್ಧ ವಿಜಯವಾಡದ ಕೌಟುಂಬಿಕ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ.

ನ್ಯಾಯಾಲಯದ ಆದೇಶದಂತೆ ಪೃಥ್ವಿರಾಜ್ ಪತ್ನಿಗೆ 8 ಲಕ್ಷ ರೂ. ಜೀವನಾಂಶ ನೀಡಬೇಕಿದ್ದು, ನೀಡಿಲ್ಲ. ಅದೂ ಅಲ್ಲದೆ ನ್ಯಾಯಾಲಯಕ್ಕೆ ಹಾಜರಾಗದ ಕಾರಣ ಈ ಬಂಧನ ವಾರೆಂಟ್ ಜಾರಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

ವಿಜಯವಾಡದ ಶ್ರೀಲಕ್ಷ್ಮಿ 1984 ರಲ್ಲಿ ನಟ ಪೃದ್ವಿರಾಜ್​ ಅವರನ್ನು ವಿವಾಹವಾಗಿದ್ದರು. ಇಬ್ಬರಿಗೂ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಪೃಥ್ವಿರಾಜ್ ತಮ್ಮ ಪತ್ನಿಯ ನಡುವಿನ ಘರ್ಷಣೆಯಿಂದ ಬೇರ್ಪಟ್ಟಿದ್ದಾರೆ. ಶ್ರೀಲಕ್ಷ್ಮಿ ತನ್ನ ಇಬ್ಬರು ಮಕ್ಕಳೊಂದಿಗೆ ಹುಟ್ಟಿದ ಮನೆಯಲ್ಲಿದ್ದಾರೆ. 2017ರಲ್ಲಿ ಶ್ರೀಲಕ್ಷ್ಮಿ ನ್ಯಾಯಾಲಯದ ಮೊರೆ ಹೋಗಿದ್ದು, ತನ್ನ ಪತಿ ಪೃಥ್ವಿರಾಜ್‌ಗೆ ತಿಂಗಳಿಗೆ 8 ಲಕ್ಷ ರೂ.ಗಳನ್ನು ಕಾನೂನಾತ್ಮಕವಾಗಿ ಜೀವನಾಂಶ ನೀಡುವಂತೆ ನ್ಯಾಯಾಲಯವನ್ನು ಕೋರಿದ್ದರು.

ಅದಕ್ಕೆ ನ್ಯಾಯಾಲಯವೂ ಒಪ್ಪಿಗೆ ಸೂಚಿಸಿದ್ದು, ಶ್ರೀಲಕ್ಷ್ಮಿ ಅವರ ಕಾನೂನು ಹೋರಾಟದ ವೆಚ್ಚವನ್ನೂ ಪೃಥ್ವಿರಾಜ್ ಭರಿಸಬೇಕೆಂದು ಕೋರ್ಟ್ ತೀರ್ಪು ನೀಡಿತ್ತು.

ಅದರಂತೆ ಪೃಥ್ವಿರಾಜ್ ಪ್ರತಿ ತಿಂಗಳು 10ನೇ ತಾರೀಖಿನೊಳಗೆ ಆಕೆಗೆ 8 ಲಕ್ಷ ರೂ. ಜೀವನಾಂಶವನ್ನು ಪಾವತಿಸಬೇಕು ಎಂದು ತೀರ್ಪು ನೀಡಿತ್ತು.