ಪ್ರಸ್ತುತ
ಅಜಯ್ ಅಂಗಡಿ
ಹದಿನೆಂಟನೇ ಲೋಕಸಭಾ ಚುನಾವಣೆ ಮುಗಿದು, ಫಲಿತಾಂಶ ಕೂಡ ಬಂದಿದೆ. ಭಾರತೀಯ ಜನತಾ ಪಾರ್ಟಿ ಏಕಾಂಗಿಯಾಗಿ ಬಹುಮತಕ್ಕಿಂತ ಕೊಂಚ
ಕಡಿಮೆ ಕ್ಷೇತ್ರಗಳಲ್ಲಿ ಗೆದ್ದರೂ ಎನ್ಡಿಎ ಮಿತ್ರಪಕ್ಷಗಳೊಂದಿಗೆ ಸತತ ಮೂರನೇ ಬಾರಿಗೆ ಅಧಿಕಾರದ ಗದ್ದುಗೆಯೇರಿದೆ. ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಹಳೆಯ ಕಾಂಗ್ರೆಸಿನ ನೆ ಇತಿಹಾಸವನ್ನು ಧೂಳೀಪಟ ಮಾಡಿದ್ದಾರೆ.
ಇವೆಲ್ಲವೂ ಭಾರತೀಯರು ಹೆಮ್ಮೆ ಪಡುವಂತಹ ಸಂಗತಿ ಗಳೇ. ಆದರೆ ಭಾರತೀಯ ಜನತಾ ಪಕ್ಷ ಇನ್ನು ಮುಂದಾದರೂ ತುಸು ಎಚ್ಚರಿಕೆಯಿಂದ ಹೆಜ್ಜೆ ಇಡಬೇಕಿರುವುದು ಅನಿವಾರ್ಯ. ದೇಶದ ಗದ್ದುಗೆ ಏರಲು ಯಾವ ರಾಜ್ಯದಲ್ಲಿ ಲೀಡ್ ಬರಬೇಕಿತ್ತೋ ಆ ರಾಜ್ಯಗಳೇ ಬಿಜೆಪಿ ಪಾಳಯಕ್ಕೆ ಕೊಡಲಿ ಪೆಟ್ಟು ಕೊಟ್ಟಿದ್ದು ಯಾರೂ ಊಹಿಸದ ಸಂಗತಿ. ಭಾಜಪದ ಭದ್ರಕೋಟೆಯಾದ ಉತ್ತರ ಪ್ರದೇಶದ ಪಕ್ಷಕ್ಕೆ ಹಿನ್ನಡೆಯಾಗಿರುವುದು ದುಃಖಕರ.
ಕಾಂಗ್ರೆಸ್ ನೀಡುತ್ತಿರುವ ಅಸಂಬದ್ಧ ಆಮಿಷಗಳಿಗೆ ಒಂದಷ್ಟು ಜನತೆ ಬಲಿಯಾದರೆ ಬಿಜೆಪಿಯಲ್ಲಿನ ಅಂತರಿಕ ಕಚ್ಚಾಟಗಳು, ಜನವಿರೋಧಿ ಅಲೆಯಿರುವ ಅಭ್ಯರ್ಥಿಗಳಿಗೆ ಟಿಕೇಟ್ ಹಂಚಿಕೆ ಮಾಡಿದ್ದು ಇನ್ನೊಂದೆಡೆ ಬಿಜೆಪಿಯ ಸೋಲಿಗೆ ಮುಖ್ಯ ಕಾರಣ. ಕರ್ನಾಟಕದ ಹಲವೆಡೆ ಬಿಜೆಪಿಯ ಹಿನ್ನಡೆಗೆ ಇದೇ ಪ್ರಬಲವಾದ ಕಾರಣ. ಸತತ ಎರಡು ಬಾರಿ ನರೇಂದ್ರ ಮೋದಿ ಸ್ಪಷ್ಟ ಬಹುಮತದಿಂದ ಸರಕಾರ ರಚಿಸಿ ಆಡಳಿತ ಯಂತ್ರವನ್ನು ಶರವೇಗದಲ್ಲಿ ಓಡಿಸಿದ್ದು ವಿಪಕ್ಷಗಳಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳ ಸಾಲು ಸಾಲು ಹಗರಣಗಳನ್ನು ಬಯಲಿಗೆಳೆದಾಗ ಚುನಾವಣೆ ಗೆಲ್ಲಲು ಅವರು ಹೂಡಿದ ರಣತಂತ್ರವೇ ಟಕಾಟಕ್ ಗ್ಯಾರಂಟಿಗಳು.
ಕರ್ನಾಟಕದಲ್ಲಿ ಗ್ಯಾರಂಟಿಯ ಅನಾಹುತ ಸಾಲದೆಂಬಂತೆ ದೇಶಕ್ಕೂ ಅದನ್ನು ವಿಸ್ತರಿಸುವ ಹಂಬಲಧಲ್ಲಿ ಕಾಂಗ್ರೆಸ್ ಉರುಳಿಸಿದ ದಾಳ ಉತ್ತರಪ್ರದೇಶ ಮತ್ತು ರಾಜಸ್ಥಾನ ಇತರೆಡೆ ಭಾಜಪಕ್ಕೆ ಮುಳುವಾಯಿತೆನ್ನಬಹುದು. ಇನ್ನು ಮಹಾರಾಷ್ಟ್ರದಲ್ಲಿ ಬಿಜೆಪಿ ಶಿವಸೇನೆಯನ್ನು ಮತ್ತು ಎನ್ಸಿಪಿ ಯನ್ನು ಒಡೆದ ಪರಿಣಾಮವಾಗಿ ಅವರಿಗೆ ಹಿನ್ನಡೆಯಾಗಿರುವುದು ಅಸಂಭವವೇನಲ್ಲ. ಇಷ್ಟು ದಿನ ಸ್ವತಂತ್ರ ನಿರ್ಧಾರ ಕೈಗೊಳ್ಳುತ್ತಿದ್ದ ಮೋದಿ ಈಗ ಅತ್ತ ಇತ್ತ ನೋಡುವಂತಾಗಿದೆ. ಕೆಲವು ಕಾಯ್ದೆ ಕಾನೂನುಗಳನ್ನು ಈಗಲೇ ಜಾರಿ ಮಾಡುವುದು ಅಸಾಧ್ಯವೂ ಆಗಬಹುದು. ಅದರಲ್ಲೂ ಏಕರೂಪ ನಾಗರಿಕ ಸಂಹಿತೆಯನ್ನು ಮುಟ್ಟುವುದು ಸುಲಭದ ಮಾತಲ್ಲ.
ಹೊಸ ಮನ್ವಂತರಕ್ಕೆ ತೆರೆದುಕೊಳ್ಳುತ್ತಿರುವ ಭಾರತದ ಬಾಗಿಲನ್ನು ಮುಚ್ಚಿ ಮತ್ತದೇ ಹಳೆಯ ಹಾದಿಯ ಬಿದ್ದು ಒzಡಿಸಲು ಪಣ ತೊಟ್ಟಂತಿವೆ ಈ ಎಡಪಕ್ಷಗಳು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ಅಟ್ಟಹಾಸ, ಪಂಜಾ ಬಿನಲ್ಲಿ ಆಪ್ ಬೆಂಬಲಿತ ಖಲಿಸ್ತಾನಿಗಳ ಪ್ರತ್ಯೇಕತಾವಾದ. ಇವೆಲ್ಲ ಘಟನೆಗಳಿಗೆ ಕಾಃಗ್ರೆಸ್ಸಿನ ಮೌನ ಸಮ್ಮತಿ. ಇವೆಲ್ಲವೂ ಬಂದ್ ಆಗಬೇಕೆಂದರೆ ಭಾಜಪ ಎಚ್ಚೆತ್ತುಕೊಳ್ಳಲೇಬೇಕಿದೆ. ಕುಟುಂಬ ರಾಜಕಾರಣವನ್ನು ಖಡಾಖಂಡಿತವಾಗಿ ಮೋದಿ ವಿರೋಧಿಸುತ್ತಾರೆ. ಆದರೆ ತಮ್ಮದೇ ಪಕ್ಷದಲ್ಲಿನ ಕೆಲವು ಕುಟುಂಬಗಳ ಹಿಡಿತದಿಂದ ವಿಧಾನಸಭಾ ಅಥವಾ ಲೋಕಸಭಾ ಕ್ಷೇತ್ರಗಳನ್ನು ಮುಕ್ತ
ಮಾಡುವುದು ಅವರಿಗಿನ್ನೂ ಆಗಿಲ್ಲ.
ಮೊಟ್ಟಮೊದಲು ನರೇಂದ್ರ ಮೋದಿ ಆ ನಿಟ್ಟಿನಲ್ಲಿ ನಿರ್ಧಾರ ಕೈಗೊಂಡು ಭಾಜಪದಲ್ಲಿನ ಕುಟುಂಬಗಳ ಹಿಡಿತವನ್ನು ಕಿತ್ತೊಗೆಯುವುದು ಸದ್ಯಕ್ಕೆ ಅತಿ ಅವಶ್ಯಕ. ಮತ್ತೆ ಮತ್ತೆ ಮೋದಿ ಹೆಸರಿನಲ್ಲಿ ಮಾತ್ರ ಗೆಲ್ಲುವ ಹಳೆಯ ತಲೆಗಳನ್ನು ಬದಿಗೆ ಸರಿಸಿ, ಪಕ್ಷದ -ರ ಒಲವಿರುವ ಜನಸಾಮಾನ್ಯರೂ ಚುನಾಯಿತ ರಾಗುವಂತೆ ಮಾಡಿದರೇನೆ ಒಳ್ಳೆಯದು. ಭಾಜಪದಲ್ಲಿ ಆಗಬೇಕಾಗಿರುವ ರಿಪೇರಿ ಕೆಲಸ ಬಹಳಷ್ಟಿದೆ. ಹೀಗಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಮತದಾರ ಭಾಜಪದ ಕೈಯನ್ನು ಭದ್ರಗೊಳಿಸಬಲ್ಲ.