ಜಾರ್ಖಂಡ್: ಪಶ್ಚಿಮ ಸಿಂಗ್ಭುಮ್ ಜಿಲ್ಲೆಯ ಸರಂದಾ ಅರಣ್ಯದಲ್ಲಿ ಸೋಮವಾರ ಭದ್ರತಾ ಪಡೆಗಳು ನಡೆಸಿದ ಎನ್ ಕೌಂಟರ್ ಗೆ ನಾಲ್ವರು ನಕ್ಸಲರು ಬಲಿಯಾಗಿದ್ದಾರೆ.
ಜಿಲ್ಲಾ ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮತ್ತು ಕಮಾಂಡೋ ಬೆಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ) ಬೆಟಾಲಿಯನ್ಗಳ ಜಂಟಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ಮಾವೋವಾದಿ ಸೇರಿದಂತೆ ನಿಷೇಧಿತ ಸಿಪಿಐ (ಮಾವೋವಾದಿ) ನ ನಾಲ್ವರು ಸದಸ್ಯರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುವಾ ಮತ್ತು ಜೆಟೆಯಾ ಪಿಎಸ್ ಪ್ರದೇಶಗಳ ಗಡಿಯಲ್ಲಿರುವ ಸರಂದಾ ಅರಣ್ಯಗಳಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಎನ್ಕೌಂಟರ್ನಲ್ಲಿ ನಮ್ಮ ಜಂಟಿ ಪಡೆಗಳು ಮಾವೋವಾದಿ ವಲಯ ಕಮಾಂಡರ್, ಉಪ-ವಲಯ ಕಮಾಂಡರ್, ಪ್ರದೇಶ ಕಮಾಂಡರ್ ಮತ್ತು ಮಹಿಳಾ ಮಾವೋವಾದಿ ಸೇರಿದಂತೆ ನಾಲ್ವರು ಮಾವೋವಾದಿಗಳನ್ನು ಹೊಡೆದುರುಳಿಸಿವೆ.
ಎನ್ಕೌಂಟರ್ ನಂತರ ಇನ್ನೂ ಇಬ್ಬರು ಮಾವೋವಾದಿಗಳನ್ನು ಬಂಧಿಸುವಲ್ಲಿ ಪಡೆಗಳು ಯಶಸ್ವಿಯಾಗಿವೆ ಎಂದು ಎಸ್ಪಿ ಹೇಳಿದರು.