Sunday, 15th December 2024

ಯೋಗದ ವ್ಯಾಸ, ಜಗದಗಲ ವೃದ್ದಿಸಿದ ಎಸ್-ವ್ಯಾಸ !

ಯೋಗಾ ಯೋಗ

ರವೀ ಸಜಂಗದ್ದೆ

ಪತಂಜಲಿ ಮಹರ್ಷಿಗಳು ಯೋಗವನ್ನು ‘ಯೋಗಃ ಚಿತ್ತ-ವೃತ್ತಿ ನಿರೋಧಃ’ ಎಂದು ಸಂಸ್ಕೃತ ಭಾಷೆಯಲ್ಲಿ ವರ್ಣಿಸಿದ್ದಾರೆ. ಅದನ್ನೇ ಸ್ವಾಮಿ ವಿವೇಕಾನಂದರು ‘ಯೋಗವೆಂದರೆ ಮನಸ್ಸಿನ ಅಂತರಾಳವು (ಚಿತ್ತ) ವಿವಿಧ ಅನಗತ್ಯ ರೂಪಗಳನ್ನು (ವೃತ್ತಿ) ತಾಳಗಳಂತೆ ನಿಗ್ರಹಿಸುವುದು’ ಎಂದು ವ್ಯಾಖ್ಯಾನಿಸಿದ್ದಾರೆ. ಒಟ್ಟಿನಲ್ಲಿ
ಸರಳವಾಗಿ ಹೇಳುವುದಾದರೆ ‘ಯೋಗವು ದೈಹಿಕ ಹಾಗೂ ಮಾನಸಿಕ ಆಚರಣೆಗಳ ಮೂಲಕ ಮನಸ್ಸಿನ ಚಂಚಲತೆಯ ಮೇಲೆ ನಿರ್ಬಂಧ ಹೇರುವಿಕೆಯ
ಪ್ರಕ್ರಿಯೆ’ಯಾಗಿದೆ.

ದೇಹ ಮತ್ತು ಮನಸ್ಸಿನ ಆರೋಗ್ಯ ಸುಧಾರಣೆ ಮತ್ತು ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವುದು ಯೋಗದ ಗುರಿ. ದೇಹ ಮತ್ತು ಮನಸ್ಸುಗಳ, ಆತ್ಮ ಮತ್ತು ಪರಮಾತ್ಮರ ಕೂಡುವಿಕೆಯೇ ಯೋಗ. ಯೋಗವು ದೈಹಿಕ, ಮಾನಸಿಕ, ಆಧ್ಯಾತ್ಮಿಕ ಅಭ್ಯಾಸ. ಯೋಗಕ್ಕೆ ಯಾವುದೇ ಧರ್ಮ, ಜಾತಿ, ವರ್ಣ, ಪಂಗಡ
ಇತ್ಯಾದಿಗಳ ಬೇಧವಿಲ್ಲ. ಆಸಕ್ತಿ ಇರುವ ಯಾರೂ ಯೋಗವನ್ನು ಅಭ್ಯಸಿಸಬಹುದು. ಜೂನ್ ೨೧ನ್ನು ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಘೋಷಣೆಗೆ ದಶಮಾನದ ಸಂಭ್ರಮ.

ಯೋಗದ ವಿಶ್ವವ್ಯಾಪಿಯ ಪರಿಧಿ ನೋಡಿದರೆ ಹದಿನೆಂಟನೆಯ ಶತಮಾನದ ಕೊನೆಯಿಂದ ೨೦೧೪ರ ವರೆಗಿನ ಯುಗ ಒಂದೆಡೆಯಾದರೆ ಕಳೆದ ಒಂದು
ದಶಕಗಳಲ್ಲಿ (೨೦೧೪-೨೦೨೪) ಅದು ಪಸರಿಸಿದ, ತಲುಪಿದ ವಿಸ್ತಾರ ಮತ್ತೊಂದು ಮೈಲಿಗಲ್ಲು. ಪ್ರಪಂಚದ ಬಹುತೇಕ ದೇಶಗಳು ಯೋಗದ
ಸತ್ಪರಿಣಾಮಗಳನ್ನು ಮನನ ಮಾಡಿಕೊಂಡು ಯೋಗವನ್ನು ಜೀವನಶೈಲಿಯಾಗಿ ಅಳವಡಿಸುವ ನಿಟ್ಟಿನಲ್ಲಿ ಕಾರ್ಯಯೋಜನೆ ಹಮ್ಮಿಕೊಂಡು ಆ
ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವುದು ಯೋಗದ ಶ್ರೇಷ್ಠತೆಗೆ ಉತ್ತಮ ಉದಾಹರಣೆ.

ಯೋಗ ಎಂದಾಗ ನೆನಪಾಗುವುದು ಸ್ವಾಮಿ ವಿವೇಕಾನಂದರು. ತನ್ನ ಕಾಲಾವಧಿಯಲ್ಲಿ ಯೋUವನ್ನು ವಿಶ್ವದಾದ್ಯಂತ ಪ್ರಚುರಪಡಿಸಲು ಅವರು ನಡೆಸಿದ ಪ್ರಯತ್ನ ಶ್ಲಾಘನೀಯ. ಅವರ ದೃಷ್ಟಿಕೋನದಿಂದ ಪ್ರಭಾವಿತಗೊಂಡು ಸ್ವಾಮಿ ವಿವೇಕಾನಂದ ಯೋಗ ಪ್ರತಿಷ್ಠಾನ ಸ್ಥಾಪಿಸಿ ಆ ನಿಟ್ಟಿನಲ್ಲಿ ತನ್ನ ಸರ್ವಸ್ವವನ್ನೂ ಮುಡಿಪಾಗಿಟ್ಟವರು ಏಕನಾಥ ರಾನಡೆಯವರು. ಕನ್ಯಾಕುಮಾರಿಯ ಸಮುದ್ರದ ಬಂಡೆಯ ಮೇಲಿನ ಸ್ವಾಮಿ ವಿವೇಕಾನಂದ ಕೇಂದ್ರದ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸಿ ಅದನ್ನು ಸಾಧ್ಯವಾಗಿಸಿದ್ದು ರಾನಡೆಯವರ ಹೆಗ್ಗಳಿಕೆ.

ಮೊನ್ನೆಯ ಲೋಕಸಭಾ ಚುನಾವಣೆಯ ನಂತರ ಧ್ಯಾನದಲ್ಲಿ ತಲ್ಲೀನರಾಗಲು ಕನ್ಯಾಕುಮಾರಿಯ ಅದೇ ಕೇಂದ್ರವನ್ನು ನರೇಂದ್ರ ಮೋದಿಯವರು ಆರಿಸಿ ಕೊಂಡದ್ದನ್ನು ಸ್ಮರಿಸಬಹುದು. ಏಕನಾಥ ರಾನಡೆಯವರ ಪ್ರಭಾವಕ್ಕೆ ಒಳಗಾಗಿ, ಅಮೆರಿಕದ ಪ್ರತಿಷ್ಠಿತ ಸಂಶೋಧನೆ ಸಂಸ್ಥೆ ನಾಸಾದ ಕೈತುಂಬಾ ಸಂಬಳ ಕೊಡುವ ಮತ್ತು ಸ್ಥಾನಮಾನ ಇರುವ ಕೆಲಸವನ್ನು ಬಿಟ್ಟು ತಾಯ್ನಾಡಿಗೆ ಬಂದು ಯೋಗ ವಿಶ್ವವಿದ್ಯಾಲಯ ಸ್ಥಾಪಿಸಿದ ಹೊಂಗಸಂದ್ರ ರಾಮರಾವ್ ನಾಗೇಂದ್ರ ಅವರ ಸಾಧನೆಯ ಹಾದಿ ಮತ್ತೊಂದು ರೋಚಕ ಜೀವನ ಪಯಣ!

೯೮೦-೯೦ರ ದಶಕದಲ್ಲಿ ವಿವೇಕಾನಂದ ಯೋಗ ಕೇಂದ್ರದ ಹಲವು ಜವಾಬ್ದಾರಿಗಳನ್ನು ನಿಭಾಯಿಸುತ್ತಾ ಯೋಗ ಮತ್ತದರ ಮಹತ್ವವನ್ನು ಪಸರಿಸುವ
ಕಾರ್ಯದಲ್ಲಿ ಡಾ. ನಾಗೇಂದ್ರ ತಲ್ಲೀನರಾಗಿದ್ದರು. ೨೦೦೦ರಲ್ಲಿ ಬೆಂಗಳೂರಿನ ಹೊರವಲಯದ ಆನೇಕಲ-ಜಿಗಣಿ ಭಾಗದ ಕಲ್ಲುಬಾಳು ಪ್ರದೇಶದಲ್ಲಿನ ನೂರು ಎಕರೆ ಪ್ರದೇಶ ‘ಪ್ರಶಾಂತಿ ಕುಟೀರಂ’ ನಲ್ಲಿ ಯೋಗಾಧ್ಯಯನ ನೀಡುವ ಮಹದಾಸೆಯೊಂದಿಗೆ ‘ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥಾನ’ (ಖ್ಖ್ಗಅಖಅ) ಹೆಸರಿನ ಸಂಸ್ಥೆ ನಾಗೇಂದ್ರ ಅವರ ನೇತೃತ್ವದಲ್ಲಿ ಜನ್ಮತಾಳಿತು. ಮೈಸೂರು ವಿಶ್ವವಿದ್ಯಾಲಯ, ಮಂಗಳೂರು ವಿಶ್ವವಿದ್ಯಾಲಯ ಮತ್ತು ರಾಜೀವ್ ಗಾಂಽ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಯೋಗ ಕೇಂದ್ರೀಕೃತ ಹಲವು ಪದವಿ ಮತ್ತು ಸ್ನಾತಕೋತ್ತರ ಮತ್ತು ವೈದ್ಯಕೀಯ ಶಿಕ್ಷಣವನ್ನು ಆರಂಭಿಸಲಾಯಿತು.

ಕಳೆದ ಒಂದೂವರೆ ದಶಕಗಳಿಂದ ಯೋಗ ಕೇಂದ್ರಿತ ಹಲವಾರು ಪದವಿಗಳನ್ನು ನೀಡಲಾಗುತ್ತಿದೆ. ಪ್ರಪಂಚದಾದ್ಯಂತ ಇರುವ ಆಸಕ್ತ ವಿದ್ಯಾರ್ಥಿಗಳು ಬಂದು ವ್ಯಾಸಂಗ ಮತ್ತು ವಿದ್ಯಾರ್ಜನೆ ಪೂರ್ತಿಗೊಳಿಸಿ, ಜಗತ್ತಿನಾದ್ಯಂತ ಯೋಗದ ರಾಯಭಾರಿ ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಯೋಗವೂ ಒಂದು ಪ್ರಮುಖ ವಿಷಯವಾಗಿ ಆಖ್ಚ, ಆಇಅ, ಆSಛ್ಚಿe, ಆಆಅ, Iಇಅ, Iಖ್ಚ Iಆಅಮುಂತಾದ ಕೋರ್ಸುಗಳು ಇಲ್ಲಿ ಇವೆ. ಯೋಗ, ಛಿbಜ್ಚಿ oಜಿಛ್ಞ್ಚಿಛಿ, meqsoಜಿಟಠಿeಛ್ಟಿZmqs,ಪ್ರಕೃತಿ ಚಿಕಿತ್ಸೆ (Zಠ್ಠ್ಟಿಟmZಠಿeqs), Peಈ, Iಈ ಮುಂತಾದ ಕೋರ್ಸುಗಳು ಲಭ್ಯವಿವೆ. ವಾರ್ಷಿಕ ಸರಾಸರಿ
ಒಂದು ಸಾವಿರದಷ್ಟು ವಿದ್ಯಾರ್ಥಿಗಳು ಈ ಕೇಂದ್ರ ದಿಂದ ಯೋಗದ ವಿಷಯದ ಜೊತೆಗ ಪದವಿ ಪಡೆಯುತ್ತಿದ್ದಾರೆ. ಯೋಗವು ಕಳೆದೊಂದು ದಶಕ
ದಿಂದ ಹೆಚ್ಚಿನ ಪ್ರಮಾಣದಲ್ಲಿ ಪ್ರಸಿದ್ಧಿಯಾಗುತ್ತಿರುವುದರ ಫಲವಾಗಿ, ಇಲ್ಲಿ ನೀಡಲಾಗುವ ಒಂದು ತಿಂಗಳ ಅವಧಿಯ ‘ಯೋಗ ಬೋಧಕ ಕೋರ್ಸ್’ (ಟಜZ
ಐoಠ್ಟ್ಠ್ಚಿಠಿಟ್ಟ ಇಟ್ಠ್ಟoಛಿ) ಬಹಳ ಜನಪ್ರಿಯ ಮತ್ತು ಹೆಚ್ಚಿನ ಬೇಡಿಕೆ ಇರುವ ಕೊರ್ಸುಗಳಂದು!

ಈ ಸಂಸ್ಥೆಯ ಇನ್ನೊಂದು ಹೆಗ್ಗಳಿಕೆ ಎಂದರೆ ಯೋಗವನ್ನು ಪ್ರಮುಖ ವಿಷಯವಾಗಿ ಪಠ್ಯ ಮತ್ತು ಅಭ್ಯಾಸವಾಗಿ(ಠಿeಛಿಟ್ಟqs Zb mZಠಿಜ್ಚಿಛಿ) ಬೋಧನಾ ಕ್ರಮ ಮತ್ತು ಆಹಾರ ಕ್ರಮ ಇರುವ ಆಸ್ಪತ್ರೆ, ದುರಭ್ಯಾಸ ವರ್ಜನ ಶಿಬಿರ, ಸಕ್ಕರೆ ಕಾಯಿಲೆ ನಿಯಂತ್ರಣ ಶಿಬಿರ, ಒತ್ತಡ ನಿವಾರಣೆ ಮತ್ತು ಮನಃ ಶಾಂತಿ ವೃದ್ಧಿಸುವ ಶಿಬಿರ…. ಹೀಗೆ ಈ ಎಲ್ಲ ಶಿಬಿರಗಳೂ ಹಲವರ ಬಾಳಿನಲ್ಲಿ ಬೆಳಕು ಚೆಲ್ಲಿ ಒಳ್ಳೆಯ ಮತ್ತು ಸಂತುಷ್ಟ ಜೀವನ ನಡೆಸುವ ನಿಟ್ಟಿನಲ್ಲಿ ಸಾತತ್ಯ ಪಡೆದಿವೆ. ೨೫೦ ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ‘ಆರೋಗ್ಯ ಧಾಮ’ವೂ ಸಾರ್ವಜನಿಕರಿಗೆ ಉತ್ತಮ ಮತ್ತು ಅಗ್ಗದ ದರದಲ್ಲಿ ಎಲ್ಲ ರೀತಿಯ ವೈದ್ಯಕೀಯ ಸೇವೆ ನೀಡುತ್ತಿದೆ.

ಪ್ರಪಂಚದ ಯಾವುದೇ ಔಷಧ ಕ್ರಮದಿಂದ ಗುಣವಾಗದ ಖಾಯಿಲೆಗಳು, ಎಲ್ಲ ಪ್ರಯತ್ನಗಳು ಕೈಚೆಲ್ಲಿದ, ಅನಾರೋಗ್ಯದಿಂದ ಮಲಗಿದ ಇದ್ದು ಇಲ್ಲಿಗೆ ಬಂದ ಹಲವಾರು ರೋಗಿಗಳು ಎಸ್ ವ್ಯಾಸದ ವಿವಿಧ ವೈಜ್ಞಾನಿಕ, ಪ್ರಾಯೋಗಿಕವಾಗಿ ಸಾಬೀತಾದ (mZಠಿಜ್ಚಿZqs mಟqಛ್ಞಿ) ಯೋಗ ಚಿಕಿತ್ಸಾ ಕ್ರಮಗಳ ಮೂಲಕ ಪವಾಡಸದೃಶವಾಗಿ ಚೇತರಿಸಿಕೊಂಡ ದೃಷ್ಟಾಂತಗಳು ಹಲವಾರು ಇವೆ. ‘ಈ ಎಲ್ಲ ರೋಗ ಮತ್ತು ಪರಿಸ್ಥಿತಿಗೆ ನಮ್ಮ ಅನಾರೋಗ್ಯಕರ ಮತ್ತು ಅಶಿಸ್ತಿನ ಆಹಾರ ಕ್ರಮ ಮತ್ತು ಜೀವನ ಶೈಲಿ ಕಾರಣ’ ಎನ್ನುತ್ತಾರೆ ಡಾ. ನಾಗರತ್ನ. ಇವರು ಡಾ. ನಾಗೇಂದ್ರ ಅವರ ಸಹೋದರಿ. ಎಸ್ ವ್ಯಾಸದ ಮತ್ತೋರ್ವ ಆಧಾರ ಸ್ಥಂಭ.

‘ಜೀವನ ಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ, ಪ್ರಾಣಾಯಾಮದ ಜೊತೆಗೆ ದೈನಂದಿನ ಯೋಗಾಭ್ಯಾಸ, ವ್ಯಾಯಾಮ, ಶಿಸ್ತುಬದ್ಧ ಆಹಾರ ಕ್ರಮದ ಮೂಲಕ ಯಾವುದೇ ರೋಗವನ್ನು ನಿಯಂತ್ರಿಸಲು ಸಾಧ್ಯ ಮತ್ತು ರೋಗಮುಕ್ತವಾದ ಜೀವನ ನಡೆಸಬಹುದು, ದೇಹ ಮತ್ತು ಮನಸ್ಸು ಸುಸ್ಥಿತಿಯಲ್ಲಿ ಇರಲು ಇದು ಸಹಕಾರಿ’ ಎನ್ನುತ್ತಾರೆ ಗುರೂಜಿ ಡಾ. ನಾಗೇಂದ್ರ. ಈ ಶೈಕ್ಷಣಿಕ ವರ್ಷದಿಂದ ಮೈಸೂರು ರಸ್ತೆಯ ರಾಜರಾಜೇಶ್ವರಿ ನಗರದಲ್ಲಿ ಮತ್ತೊಂದು ವಿಶಾಲವಾದ ‘ಗ್ಲೋಬಲ್ ಸಿಟಿ ಕ್ಯಾಂಪಸ್’ ಲೋಕಾರ್ಪಣೆಗೊಂಡು ಕಾರ್ಯ ನಿರ್ವಹಿಸುತ್ತಿದೆ. ಮೂರು ಸಾವಿರದಷ್ಟು ವಿದ್ಯಾರ್ಥಿಗಳು ಯೋಗವು ಪ್ರಮುಖ ವಿಷಯವಾಗಿ ಪಠ್ಯ ಮತ್ತು ಅಭ್ಯಾಸವಾಗಿ(ಠಿeಛಿಟ್ಟqs Zb mZಠಿಜ್ಚಿಛಿ)ಇರುವ ವಿವಿಧ ಪದವಿ, ಸ್ನಾತಕೋತ್ತರ, ವೈದ್ಯಕೀಯ ಶಿಕ್ಷಣ ಕೊರ್ಸುಗಳಿಗೆ ದಾಖಲಾತಿ ಪಡೆದು ತರಗತಿಗಳು ಅದಾಗಲೇ ಆರಂಭಗೊಂಡಿವೆ.

ಎಸ್ ವ್ಯಾಸವೂ ನ್ಯಾಕ್ (ಘೆಅಅಇ) ಸಂಸ್ಥೆಯಿಂದ ಎ ಪ್ಲಸ್ ಗ್ರೇಡ್ ಪಡೆದಿರುವ ಡೀಮ್ಡ ವಿಶ್ವ ವಿದ್ಯಾಲಯ (ಈಛಿಛಿಞಛಿb ಖ್ಞಿಜಿqಛ್ಟಿoಜಿಠಿqs). ಯೋಗ ಚಿಕಿತ್ಸೆ, ನ್ಯಾಚುರೋಪತಿ, ಆಯುರ್ವೇದ, ಫಿಸಿಯೋಥೆರಪಿ, ಆಕ್ಯುಪಂಕ್ಚರ್ ಇತ್ಯಾದಿ ವೈದ್ಯಕೀಯ ಕಲಿಕೆಯ ವಿಧಾನಗಳನ್ನೂ ಇಲ್ಲಿ ಬಳಸಲಾಗುತ್ತಿದೆ. ಸ್ವಾಮಿ ವಿವೇಕಾ ನಂದರ ’ಇಟಞಚಿಜ್ಞಿಛಿ ಠಿeಛಿ ಚಿಛಿoಠಿ ಟ್ಛ ಠಿeಛಿ ಛಿZoಠಿ ಡಿಜಿಠಿe ಠಿeಛಿ ಚಿಛಿoಠಿ ಟ್ಛ ಡಿಛಿoಠಿ’ನುಡಿ ಇಲ್ಲಿನ ಪ್ರಮುಖ ಸಿದ್ಧಾಂತ. ಈ ಸಂಸ್ಥೆ ಯೋಗಾಧ್ಯನ ಮತ್ತು ತತ್ಸಂಬಂಧಿತ ಸಂಶೋಧನೆಗಳಿಗೆ ಮೀಸಲಿರುವ, ಹೆಸರುವಾಸಿ ಯಾಗಿರುವ ಪ್ರಪಂಚದ ಏಕೈಕ ವಿಶ್ವ ವಿದ್ಯಾಲಯ!

ಡಾ. ಎಚ್. ಆರ್. ನಾಗೇಂದ್ರ ಯೋಗತಜ್ಞ, ಆರೋಗ್ಯ ತಜ್ಞ, ವಿಷಯ ತಜ್ಞ, ಹೃದಯವಂತ ಮತ್ತು ದಣಿವರಿಯದ ಶ್ರಮಜೀವಿ. ೮೨ರ ಹರೆಯದ ಅವರು ಇಂದಿಗೂ ತಿಂಗಳಿನಲ್ಲಿ ಅರ್ಧಕ್ಕಿಂತ ಹೆಚ್ಚು ದಿನಗಳಲ್ಲಿ ಜಗತ್ತಿನಾದ್ಯಂತ ಸಂಚರಿಸಿ ಯೋಗದ ಕುರಿತು ಉಪನ್ಯಾಸ, ಬೋಧನೆ, ವಿಚಾರ ಸಂಕೀರ್ಣ ಮತ್ತು ಪ್ರಾತ್ಯಕ್ಷಿಕೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿರುತ್ತಾರೆ. ಇದೆಲ್ಲದರ ಜೊತೆಗೆ ಎಡೆ ಇರುವ ತನ್ನ ಸಂಸ್ಥೆಯ ದೈನಂದಿನ ಆಗುಹೋಗುಗಳ ಬಗ್ಗೆ ಸದಾ ಕ್ರಿಯಾಶೀಲರಾಗಿ,
ನಿರತರಾಗಿರುತ್ತಾರೆ. ಎಸ್ ವ್ಯಾಸದ ‘ಪ್ರಶಾಂತಿ ಕುಟೀರಂ’ ಪರಿಸರ ಯೋಗ ಪ್ರಿಯರ ಅಚ್ಚುಮೆಚ್ಚಿನ ತಾಣ. ಅಲ್ಲಿಗೆ ಬಂದು ಚಿಕಿತ್ಸೆ, ತರಬೇತಿ ಮತ್ತು ಶಿಕ್ಷಣ ಪಡೆದ ಅನೇಕರು ಹಲವರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದ್ದಾರೆ.

ಯೋಗ ಮತ್ತು ಜೀವನಶೈಲಿಯ ಬಗೆಗಿನ ಗುರೂಜಿಯವರ ಸುಮಾರು ಎರಡು ಸಾವಿರ ಗಂಟೆಗಳಷ್ಟಿರುವ ಉಪನ್ಯಾಸಗಳು ಸೋಶಿಯಲ್ ಮೀಡಿಯಾದಲ್ಲಿ
ಜನಪ್ರಿಯವಾಗಿವೆ. ಇವರು ಬರೆದ ೨೨೦ಕ್ಕೂ ಹೆಚ್ಚಿನ ಕೃತಿಗಳು ವಿವಿಧ ಭಾಷೆಗಳಲ್ಲಿ ಪ್ರಕಟಗೊಂಡಿವೆ. ಗುರೂಜಿ ಡಾ. ನಾಗೇಂದ್ರ ಮಾಡಿದ ಸಾಧನೆ
ಅಪರೂಪ, ವಿಶಿಷ್ಟ, ಅನನ್ಯ ಮತ್ತು ಶ್ರೇಷ್ಠವಾದದ್ದು. ಮನುಕುಲದ ಒಳಿತಿಗಾಗಿ ಯೋಗವನ್ನು ಆರಿಸಿಕೊಂಡು, ಆ ಕ್ಷೇತ್ರದಲ್ಲಿ ನಿರಂತರ ಸಂಶೋಧನೆ,
ಅಧ್ಯಯನ ಮತ್ತು ಶಿಕ್ಷಣ ನೀಡುತ್ತಾ ಬಂದಿದ್ದಾರೆ.

ಇವರ ಈ ಸೇವೆಗೆ ದೇಶ ವಿದೇಶಗಳ ಹಲವಾರು ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ಅವರ ಈ ಶ್ರೇಷ್ಠ ಸಾಧನೆಗೆ ೨೦೧೬ರಲ್ಲಿ ಕೇಂದ್ರ ಸರಕಾರವು ದೇಶದ
ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿದೆ. ‘ನಾನು ನೆಪ ಮಾತ್ರ. ಈ ಎಲ್ಲಾ ಸಾಧನೆ ನನ್ನ ಜೊತೆಗೂಡಿ ಜನರಿಗೆ ಸದಾ
ನಗುಮೊಗದ ಸೇವೆ ಸಲ್ಲಿಸುತ್ತಿರುವ ಸಾವಿರಾರು ನನ್ನ ಸಹವರ್ತಿ ಮತ್ತು ಸಹೋದ್ಯೋಗಿಗಳ ತಂಡದ್ದು. ಅವರ ನಿರಂತರ ಶ್ರಮ, ಕೆಲಸದಿಂದ ನಾವು ಪ್ರಪಂಚ
ದಾದ್ಯಂತ ಒಂದಷ್ಟು ಒಳ್ಳೆಯ ಮತ್ತು ಪ್ರಯೋಜನಕಾರಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿದೆ.

ಸಂದ ಗೌರವಾದರಗಳು ಅವರೆಲ್ಲರ ದಣಿವರಿಯದ ಸೇವಾತತ್ಪರತೆಗೆ ಸಿಕ್ಕಿರುವ ಪಾರಿತೋಷಕಗಳು. ಜೊತೆಗೆ ಇದೆಲ್ಲ-ಇಷ್ಟೆಲ್ಲ ಸ್ವಾಮಿ ವಿವೇಕಾನಂದ
ಮತ್ತು ಏಕನಾಥ ರಾನಡೆಯವರ ಆಶೀರ್ವಾದದ ಫಲ. ನಾನು ಮುಖವಾಣಿ ಅಷ್ಟೇ. ಧನ್ಯೋಸ್ಮಿ’ ಎನ್ನುವಾಗ ಅವರ ಕಂಗಳು ಹೊಳೆಯುತ್ತಿದ್ದವು; ಮುಖದ ತುಂಬಾ ಮಂದಹಾಸ ಪ್ರಜ್ವಲಿಸುತ್ತಿತ್ತು. ಕನ್ನಡಿಗರಾದ ಇವರು ಕಟ್ಟಿ ಬೆಳೆಸಿದ ವಿಶಾಲ ಹೆಮ್ಮರ ‘ಎಸ್ ವ್ಯಾಸ ಪರಿವಾರ’ ಜಗದಗಲ ಯೋಗಾಧ್ಯಯನ ಮತ್ತು ತತ್ಸಂಬಂಧಿತ ಸಂಶೋಧನೆಗಳ ವ್ಯಾಸ ಮತ್ತು ವ್ಯಾಸಂಗವನ್ನು ವೃದ್ಧಿಸಿ ಕಂಗೊಳಿಸುತ್ತಿರುವುದು ನಮಗೆಲ್ಲ ಹೆಮ್ಮೆಯ ವಿಚಾರ.

ಭಗವದ್ಗೀತೆಯಲ್ಲಿ ‘ಯೋಗಃ ಕರ್ಮಸು ಕೌಶಲಂ’ ಎನ್ನುವ ಉಕ್ತಿಯೊಂದಿದೆ. ‘ಮಾಡುವ ಕೆಲಸದಲ್ಲಿ ಸದಾ ಶ್ರೇಷ್ಠತೆ ಹೊಂದುವುದೇ ಯೋಗ’ ಎನ್ನುವುದು ಇದರ ಸರಳ ಅರ್ಥ. ‘ವಿವೇಚನೆಯಿಂದ ಮಾಡುವ ಯಾವುದೇ ಉನ್ನತ ಕೆಲಸವೂ ಯೋಗ’ ಎನ್ನುವುದು ಇದರ ವಿಶಾಲ ಅರ್ಥ. ಎಸ್ ವ್ಯಾಸ ಪರಿವಾರ ಈ ಎರಡೂ ಅರ್ಥಗಳಲ್ಲಿ ನಿರಂತರ ಕೆಲಸ ಮಾಡುತ್ತಿದೆ. ಪತಂಜಲಿ ಮಹರ್ಷಿ, ಸ್ವಾಮಿ ವಿವೇಕಾನಂದ, ಏಕನಾಥ ರಾನಡೆ, ಪ್ರಧಾನಿ ನರೇಂದ್ರ ಮೋದಿ, ಡಾ. ಎಚ್. ಆರ್. ನಾಗೇಂದ್ರ ಮುಂತಾದ ಹಲವಾರು ಮಹನೀಯರ ಕೆಲಸ ಮತ್ತು ಪ್ರೋತ್ಸಾಹದ ಫಲವಾಗಿ ಯೋಗವು ವಿಶ್ವದಾದ್ಯಂತ ಮುನ್ನೆಲೆಗೆ ಬಂದು ಹಲವರ ಬದುಕನ್ನು ಉನ್ನತೀಕರಿಸಲು ನೆರವಾಗಿದೆ.

ಧರ್ಮ, ಜಾತಿ, ಪಂಗಡ, ಪ್ರದೇಶಗಳನ್ನು ಮೀರಿದ, ಎಲ್ಲರೂ ಅನುಕರಿಸಿ ಅನುಷ್ಠಾನ ಗೊಳಿಸಬಹುದಾದ, ವಿಶ್ವದಾದ್ಯಂತ ಇರುವ ಏಕೈಕ mZಠಿಛ್ಞಿಠಿ ಛಿಛಿಸಿದ್ಧಾಂತವೆಂದರೆ ಅದು ಯೋಗ! ದೈನಂದಿನ ಯೋಗಾಭ್ಯಾಸ ದೇಹ ಮತ್ತು ಮನಸ್ಸಿನ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಡಲು ಬಲು ಸಹಕಾರಿ. ಒತ್ತಡ, ಆತಂಕ, ಅತಿಯಾದ ಭಾವನಾತ್ಮಕತೆ, ಖಿನ್ನತೆ, ದುಷ್ಚಟ ಮುಂತಾದವುಗಳಿಂದ ದೂರವಿರಲು ಸರಳ ಯೋಗ ಮತ್ತು ಪ್ರಾಣಾಯಾಮ ತುಂಬಾ ಸಹಕಾರಿ. ಸೂರ್ಯ ನಮಸ್ಕಾರ, ವಿವಿಧ ಪ್ರಾಣಾಯಾಮಗಳು, ತಾಡಾಸನ, ವೀರ ಭದ್ರಾಸನ, ಭುಜಂಗಾಸನ ಮುಂತಾದ ಅಷ್ಟೇನೂ ಕ್ಲಿಷ್ಟಕರವಲ್ಲದ ಆಸನಗಳನ್ನು ಪ್ರತಿ ದಿನ ಮನೆಯಲ್ಲಿ ಮಾಡುವುದು ಮತ್ತು ಅಭ್ಯಸಿಸುವುದರ ಮೂಲಕ ದೇಹ ಮತ್ತು ಮನಸ್ಸಿನ ನೆಮ್ಮದಿಯನ್ನು ಸ್ವತೇಹ ಕಂಡುಕೊಳ್ಳಬಹುದು.

ಮಾಡುವ ಕೆಲಸದಲ್ಲಿ ಶ್ರದ್ಧೆ ಮತ್ತು ಏಕಾಗ್ರತೆ ಬರಲು ಯೋಗ ಮತ್ತು ಪ್ರಾಣಾಯಾಮ ಹೆಚ್ಚು ಸಹಕಾರಿ. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯವೂ ವೃದ್ಧಿಸುತ್ತದೆ. ವಿಶ್ವ ಯೋಗ ದಿನಾಚರಣೆಯ ದಶಮಾನೋತ್ಸವ ಸಂಭ್ರಮಾಚರಣೆಯ ಈ ಸಂದರ್ಭದಲ್ಲಿ, ಯೋಗ ಸಿದ್ಧಾಂತವನ್ನು ಪ್ರತಿಪಾದಿಸಿ ಜಗತ್ತಿನಾದ್ಯಂತ ಪಸರಿಸಿ ಜನರ ಜೀವನ ಶೈಲಿ, ಯೋಚನಾ ಲಹರಿ ಮತ್ತು ಆರೋಗ್ಯದ ಮೇಲೆ ಸತ್ಪರಿಣಾಮಗಳನ್ನು ಬೀರಿದ, ಕಾಲಾಂತರದಲ್ಲಿ ತಮ್ಮ ಸಂಪೂರ್ಣ ಜೀವನವನ್ನು
ಇದಕ್ಕಾಗಿ ಮುಡಿಪಾಗಿಟ್ಟ ಎಲ್ಲ ಯೋಗಸಂತರ ಪಾದಾರವಿಂದಗಳಿಗೆ ಭಕ್ತಿ ಮತ್ತು ಅಭಿಮಾನ ಪೂರ್ವಕ ದೀರ್ಘ ದಂಡ ಉದ್ದಂಡಾಸನ! ಸರ್ವೇ ಭವಂತು ಸುಖಿನಃ, ಸರ್ವೇ ಸಂತು ನಿರಾಮಯಾಃ.

(ಲೇಖಕರು: ಹವ್ಯಾಸಿ ಬರಹಗಾರ)