Sunday, 15th December 2024

ಫ್ರೆಂಚ್ ಫಿನ್‌ಟೆಕ್ ಸ್ಟಡ್ಲಿ ಭಾರತಕ್ಕೆ ಸೇವೆ ವಿಸ್ತಾರ

ಯುರೋಪ್ ಪ್ರದೇಶಗಳಲ್ಲಿನ ಅಧ್ಯಯನಕ್ಕೆ ಸಂಬಂಧಿಸಿದಂತೆ ಒತ್ತಡ ಮುಕ್ತ, ಸಮಗ್ರ ಪರಿಹಾರಗಳನ್ನು ಒದಗಿಸುವ ಫ್ರೆಂಚ್ ಫಿನ್‌ಟೆಕ್ ಸ್ಟಡ್ಲಿ ಭಾರತಕ್ಕೆ ಸೇವೆಯನ್ನು ವಿಸ್ತರಿಸಿಕೊಂಡಿದೆ

– ಫ್ರಾನ್ಸ್‌ ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ ಸ್ಟಡ್ಲಿ, ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ವಿದ್ಯಾಭ್ಯಾಸ ಮಾಡುವ ಹಂಬಲ ಹೊಂದಿರುವ ಹೆಚ್ಚಿನ ಸಂಖ್ಯೆಯ ಭಾರತೀಯ ವಿದ್ಯಾರ್ಥಿಗಳ ಆರ್ಥಿಕ ಮತ್ತು ಸಾಗಣೆ ಅಗತ್ಯಗಳನ್ನು ಪೂರೈಸುವ ಗುರಿಯನ್ನು ಹೊಂದಿದೆ.

ಬೆಂಗಳೂರು: ಫ್ರಾನ್ಸ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪ್ರವರ್ತಕ ಫಿನ್‌ಟೆಕ್ ಕಂಪನಿ ‘ಸ್ಟಡ್ಲಿ’ ಭಾರತದಲ್ಲಿ ತನ್ನ ಕಾರ್ಯಾರಂಭ ಮಾಡಿದೆ. ಸ್ಟಡ್ಲಿ ಫ್ರಾನ್ಸ್ ಮತ್ತು ಜರ್ಮನಿಯಲ್ಲಿ ಉನ್ನತ ಶಿಕ್ಷಣವನ್ನು ಪಡೆಯುತ್ತಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅವರ ಸವಾಲುಗಳನ್ನು ಪರಿಹರಿಸಲು ಸೂಕ್ತವಾದ ಆರ್ಥಿಕ ಪರಿಹಾರಗಳನ್ನು ಒದಗಿಸುತ್ತದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಾರ, 2022ರಲ್ಲಿ ಅಂದಾಜು 7,50,000 ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಪ್ರಯಾಣಿಸಿದ್ದಾರೆ ಮತ್ತು 2024 ಮತ್ತು 2032ರ ನಡುವೆ ಈ ಪ್ರಮಾಣ ಮತ್ತಷ್ಟು ಹೆಚ್ಚಾಗಬಹುದು ಎಂದು ನಿರೀಕ್ಷಿಸಲಾಗಿದೆ. ಈ ಟ್ರೆಂಡ್ ಅನ್ನು ಗುರುತಿಸಲು ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಪರಿಹರಿಸಲು ಈ ಯೋಜನೆ ನೆರವಾಗಲಿದೆ. ಎಂಪವರ್ ಫೈನಾನ್ಸಿಂಗ್‌ ಸೋಷಿಯಲ್ ಇಂಪಾಕ್ಟ್ ರಿಪೋರ್ಟ್ ಪ್ರಕಾರ 83% ವಿದ್ಯಾರ್ಥಿಗಳ ಓದಿಗೆ ಆರ್ಥಿಕ ಸವಾಲುಗಳು ಒಂದು ದೊಡ್ಡ ಅಡಚಣೆಯಾಗಿದೆ, ಹೀಗಾಗಿ ಇದಕ್ಕೊಂದು ಪರಿಹಾರವನ್ನು ಕಂಡು ಹಿಡಿಯಲು ‘ಸ್ಟಡ್ಲಿ’ ಹೆಜ್ಜೆ ಹಾಕುತ್ತಿದೆ.

ಈ ಬ್ರಾಂಡ್ ಆರ್ಥಿಕ ಯೋಜನೆಯನ್ನು ಸರಳೀಕರಿಸುಸುತ್ತದೆ ಮತ್ತು ಮಹತ್ವಾಕಾಂಕ್ಷೆಯುಳ್ಳ ಭಾರತೀಯ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬ ಗಳಿಗೆ ಸುಗಮವಾದ ಮತ್ತು ಒತ್ತಡ- ಮುಕ್ತವಾದ ಅನುಭವವನ್ನು ಒದಗಿಸಲು ಕಾರ್ಯನಿರ್ವಹಿಸುತ್ತದೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಇಯು ಕಂಪ್ಲೈಂಟ್ ‘ಬ್ಲಾಕ್ ಡ್ ಅಂಕೌಂಟ್ಸ್’ ತೆರೆಯುವುದು ಮತ್ತು ನಿರ್ವಹಿಸುವುದು ತೆರೆಯುವುದು ಮತ್ತು ನಿರ್ವಹಿಸುವುದರಲ್ಲಿ ಈ ಕಂಪನಿಯು ಪರಿಣತಿ ಹೊಂದಿದೆ. ಇದು ಅವರ ಅಧ್ಯಯನಕ್ಕೆ ಸಾಕಷ್ಟು ಹಣಕಾಸಿನ ಸಂಪನ್ಮೂಲಗಳನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿ ವೀಸಾ ಒದಗಿಸಲು ತುಂಬಾ ಉತ್ತಮ ಕಾರ್ಯ ನಿರ್ವಹಿಸುತ್ತಿದೆ.

ಖಾತೆಗಳನ್ನು ನಿರ್ವಹಿಸುವುದರ ಜೊತೆಗೆ ಸ್ಟಡ್ಲಿ ಹೆಚ್ಚುವರಿಯಾಗಿ ಪಾವತಿಗಳನ್ನು ಸುಗಮಗೊಳಿಸುವುದು, ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆಗಳನ್ನು ಹುಡುಕುವುದು ಮತ್ತು ಆರೋಗ್ಯ ವಿಮೆಯನ್ನು ಒದಗಿಸುವುದು ಸೇರಿದಂತೆ ಸಾಗಣೆ ನೆರವನ್ನು ನೀಡುತ್ತದೆ.