Wednesday, 30th October 2024

ವಲಸೆ ಬಂದು ಹಾಳು ಮಾಡುವುದೇಕೆ ಶಿವಾ?

ಪ್ರಸ್ತುತ

ವಿರೇಶ್ ಎಸ್.ಅಬ್ಬಿಗೇರಿ

ಲೋಕಸಭಾ ಚುನಾವಣೆ ಇತ್ತೀಚೆಗಷ್ಟೇ ಮುಗಿದಿದೆ. ರಾಜ್ಯದ ಮಟ್ಟಿಗೆ ತೆಗೆದುಕೊಂಡರೆ ಬಿಜೆಪಿ- ಜೆಡಿಎಸ್ ಮೈತ್ರಿ ಅಭೂತಪರ್ವ ಯಶಸ್ಸು ಪಡೆದಿದ್ದು ಕನಿಷ್ಠ ಎರಡಂಕಿಯನ್ನಾದರೂ ಮುಟ್ಟಬೇಕೆಂಬ ಕಾಂಗ್ರೆಸ್ ಕನಸಿಗೆ ಕೊಳ್ಳಿ ಯಿಟ್ಟಂತಾಗಿದೆ. ಮೈತ್ರಿಕೂಟ ೧೯ ಸೀಟುಗಳನ್ನು ಪಡೆದರೆ ಕಾಂಗ್ರೆಸ್ ೯ ಸ್ಥಾನಗಳಿಗೆ ತೃಪ್ತಿಪಡಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಎಲ್ಲ ಅಭ್ಯರ್ಥಿಗಳೂ ಸೋತಾಗ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಹೋದರ ಡಿ.ಕೆ.ಸುರೇಶ ಅವರು ಮಾತ್ರ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಗೆದ್ದ ಪಕ್ಷದ ಮಾನ ಉಳಿಸಿದ್ದರು.

ಆದರೆ ದುರಾದೃಷ್ಟವೆಂಬಂತೆ ಈ ಬಾರಿ ತಮ್ಮ ಪಕ್ಷದ ೯ ಜನ ಗೆದ್ದು ಸಂಸದರಾಗಿದ್ದು ಸುರೇಶ್ ಅವರಿಗೆ ಮಾತ್ರ ಅದೃಷ್ಟ ಕೈಕೊಟ್ಟಿತು. ಸುರೇಶ ಅವರು ಜನರ ಡಾಕ್ಟರ್ ಎಂದೇ ಖ್ಯಾತರಾಗಿದ್ದ ಜಯದೇವ ಹೃದ್ರೋಗದ ನರ್ದೇಶಕರಾಗಿದ್ದ ಡಾ ಮಂಜುನಾಥ್ ರವರ ವಿರುದ್ಧ ಎರಡೂವರೆ ಲಕ್ಷಕ್ಕೂ ಹೆಚ್ಚು ಅಂತರಗಳಿಂದ ಸೋತರು. ಆದರೆ ಈ ಸೋಲು ಕಾಂಗ್ರೆಸ್ ಪಕ್ಷಕ್ಕೆ ಅದರಲ್ಲೂ ಕನಕಪುರದ ಸಹೋದರರಿಗೆ ದಿಗ್ಭ್ರಮೆ ಉಂಟುಮಾಡಿದೆ. ಸುರೇಶ್ ಅವರಂತೂ ಈ ಸೋಲಿನಿಂದ ಇನ್ನೂ ಹೊರಬಂದಿಲ್ಲ.

ಹಾಗೆ ನೋಡಿದರೆ ಮೈತ್ರಿಯಾಗಿದ್ದರಿಂದ ಮತ್ತು ಕುಮಾರಸ್ವಾಮಿಯವರ ಚಾಣಾಕ್ಷ ನಡೆಯಿಂದ ಸುರೇಶ ಅವರಿಗೆ ಸೋಲುಂಟಾಗಿದ್ದು, ಒಕ್ಕಲಿಗ ಸಮುದಾಯದ ನಾಯಕತ್ವಕ್ಕಾಗಿ ಎಚ್. ಡಿ. ಕುಮಾರಸ್ವಾಮಿ ಮತ್ತು ಡಿ. ಕೆ.ಶಿವಕುಮಾರ್ ನಡುವೆ ನಡೆಯುತ್ತಿರುವ ಗುzಟ ಈಗ ಮತ್ತೊಂದು ಮಜಲಿಗೆ
ಹೊರಳಿದೆ. ಚನ್ನಪಟ್ಟಣದಿಂದ ಗೆದ್ದು ಶಾಸಕರಾಗಿದ್ದ ಕುಮಾರಸ್ವಾಮಿ ಯವರು ಈಗ ಸಂಸದರು ಮಾತ್ರವ್ಲಲದೆ ಕೇಂದ್ರ ಸರಕಾರದ ಕ್ಯಾಬಿನೆಟ್ ಸಚಿವರೂ ಕೂಡ ಆದರು. ಹಾಗಾಗಿ ಈಗ ಅವರಿಂದ ತೆರವಾದ ಚನ್ನಪಟ್ಟಣ ಕ್ಷೇತ್ರದಿಂದ ಮುಂದೆ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಕುತೂಹಲಕ್ಕ ಕಾರಣವಾಗಿದೆ. ಬಿಜೆಪಿಯೇನೋ ಮೈತ್ರಿ ಧರ್ಮಪಾಲನೆಗಾಗಿ ಅದು ಜೆಡಿಎಸ್ ಸೀಟಾಗಿರುವುದರಿಂದ ಅವರಿಗೆ ಬಿಟ್ಟು ಕೊಡುವುದಾಗಿ ಹೇಳುತ್ತಿದೆ. ಒಂದೊಮ್ಮೆ ಸಿ. ಪಿ. ಯೋಗೀಶ್ವರ್ ಅವರೇ ಜೆಡಿಎಸ್ ಚಿಹ್ನೆಯಿಂದ ನಿಂತರೂ ಅಚ್ಚರಿ ಪಡಬೇಕಾಗಿಲ್ಲ.

ಕಾಂಗ್ರೆಸ್‌ನಿಂದ ಲೋಕಸಭೆಯಲ್ಲಿ ಸೋತಿರುವ ಸುರೇಶ್ ಅವರು ನಿಲ್ಲಬಹುದೆಂದು ಅಂದಾಜಿಸಲಾಗುತ್ತಿತ್ತು. ಆದರೆ ಈಗ ಓಡಾಡುತ್ತಿರುವ ತಾಜಾ ಸುದ್ದಿಯ ಪ್ರಕಾರ ಸುರೇಶ್ ಅವರಿಗೆ ತಮ್ಮ ಕ್ಷೇತ್ರವಾದ ಕನಕಪುರವನ್ನು ತ್ಯಾಗ (?) ಮಾಡಿ ಡಿಕೆಶಿಯವರೇ ಚನ್ನಪಟ್ಟಣಕ್ಕೆ ಬಂದು ನಿಲ್ಲಲಿದ್ದಾರೆ ಎಂದು ಹೇಳಲಾಗಿದೆ. ಹೌದು. ಈಗ ತಾನೇ ಚುನಾವಣೆಯಲ್ಲಿ ಸೋತಿರುವ ಸುರೇಶ್ ಅವರಿಗೆ ಮತ್ತೆ ಸೋಲುಂಟಾದರೆ ಅವರ ರಾಜಕೀಯ ಜೀವನಕ್ಕೆ ಪೆಟ್ಟು ಬೀಳಲಿದೆ ಎಂದರಿತಿರುವ ಡಿಕೆಶಿ ಅವರು ತಾವೇ ರಿ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಲ್ಲದೆ ಒಂದೊಮ್ಮೆ ಅವರು ನಿಂತರೆ ಉಪಮುಖ್ಯಮಂತ್ರಿ ಎನ್ನುವ ಕಾರಣಕ್ಕೆ ಗೆಲ್ಲುವ ಸಾಧ್ಯತೆಗಳು ಹೆಚ್ಚಾಗಿವೆ.

ಆದರೆ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಮತ್ತು ಬಿಜೆಪಿ ವೋಟ್ ಬ್ಯಾಂಕ್ ಒಂದಾಗುವುದರಿಂದ ಸುರೇಶ್ ಅವರ ಗೆಲುವಿಗೆ ತೊಡಕಾಗ ಬಹುದೆಂದು ಅಂದಾಜಿಸಲಾಗಿದೆ. ಅದೂ ಅಲ್ಲದೆ ಒಂದೊಮ್ಮೆ ಸೋತರೆ ತಮ್ಮ ರಾಜಕೀಯ ಭವಿಷ್ಯಕ್ಕೂ ಊಹಿಸಿಕೊಳ್ಳಲಾಗದ ಪೆಟ್ಟು ಬೀಳುತ್ತದೆ ಎನ್ನುವುದನ್ನು
ಶಿವಕುಮಾರ್ ಅವರೂ ಅರಿಯದ ವಿಷಯವೇನಲ್ಲ. ಆದರೆ ಇಂತಹ ರಿ ತೆಗೆದುಕೊಳ್ಳದೇ ರಾಜಕೀಯದಲ್ಲಿ ಎತ್ತರಕ್ಕೆ ಬೆಳೆಯಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಅವರೂ ಅರ್ಥ ಮಾಡಿಕೊಂಡಿದ್ದಾರೆ.

ಹಾಗಾಗಿ ಶತಾಯ ಗತಾಯ ಗೆಲ್ಲಲು ಬೇಕಾಗಿರುವ ಎಲ್ಲ ತಂತ್ರಗಳು, ಕೆಲಸಗಳನ್ನು ಅವರು ಮಾಡಲಿzರೆ ಎನ್ನುವುದು ಅವರಿಗೆ ತಿಳಿದಿದೆ. ಇದೆಲ್ಲದರ ಮಧ್ಯೆ ಸಾಮಾನ್ಯ ನಾಗರಿಕನಿಗೆ ಅನಿಸುವುದೇನು ಎಂದು ತಿಳಿದುಕೊಳ್ಳುವ ಗೋಜಿಗೆ ಯಾರೂ ಹೋದಂತಿಲ್ಲ. ಈಗಾಗಲೇ ಉಪಮುಖ್ಯಮಂತ್ರಿಯೂ ಆಗಿರುವ ಶಿವಕುಮಾರ್ ಅವರು ತಮ್ಮ ಕುಟುಂಬದ ರಾಜಕೀಯ ಲಾಭಕ್ಕಾಗಿ ಇದ್ದ ಸ್ಥಾನವನ್ನು ತ್ಯಜಿಸಿ ಇನ್ನೊಂದು ಕ್ಷೇತ್ರಕ್ಕೆ ವಲಸೆ ಹೋಗುವುದು ಶುದ್ಧ ಕುಟುಂಬದ ಸ್ವಾರ್ಥ.

ಆದರೆ ಜನರು ಮಾತ್ರ ನಾವು ನಿಮ್ಮನ್ನು ಚುನಾಯಿಸಿದ್ದೇವೆ. ಇನ್ನೂ ಅವಽ ಇರುವಾಗಲೇ ನಮ್ಮ ಪ್ರತಿನಿಧಿಯಾದ ನೀವು ಹೀಗೆ ಕ್ಷೇತ್ರ ತೊರೆದು ಹೋಗು ವುದು ಯಾಕೆಂದು ಯಾರೂ ಪ್ರಶ್ನಿಸುವುದಿಲ್ಲ. ಬದಲಿಗೆ ಗಮನಿಸಿ ನೋಡಿ, ಬದಲಾಗಿ ಅವರು ತಮಗೊಂದು ರೋಚಕ ಚುನಾವಣಾ ಹಣಾಹಣಿ ನೋಡಲು ಸಿಗುತ್ತದೆ ಎಂದು ಜಾತಕ ಪಕ್ಷಯಂತೆ ಕಾಯುತ್ತ ಕೂಡುತ್ತಾರೆ. ಇಂಥವರ ಮಧ್ಯೆ ರಾಜ್ಯ ಮುಂದಕ್ಕೆ ಹೋಗಬೇಕೆಂದರೆ ಎಲ್ಲಿಂದ ಹೋಗ ಬೇಕು.

(ಲೇಖಕರು: ಹವ್ಯಾಸಿ ಬರಹಗಾರರು)