Wednesday, 11th December 2024

ಇಂದು ರೋಹಿತ್ ಬಳಗಕ್ಕೆ ಬಾಂಗ್ಲಾದೇಶ ಸವಾಲು

ಯಂಟಿಗುವಾ: ಬಾಂಗ್ಲಾದೇಶ ವಿರುದ್ಧ ಶನಿವಾರ ನಡೆಯುವ ಸೂಪರ್​-8 ಪಂದ್ಯಕ್ಕೆ ಟೀಮ್​ ಇಂಡಿಯಾ ತನ್ನ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆ ಮಾಡುವ ಸಾಧ್ಯತೆ ಇದೆ.

ಬಾಂಗ್ಲಾ ಎದುರಿನ ಪಂದ್ಯದಲ್ಲಿ ಶಿವಂ ದುಬೆ ಅವರನ್ನು ಬೆಂಚ್​ ಕಾಯಿಸುವುದು ಬಹುತೇಖ ಖಚಿತ.

ಐಪಿಎಲ್​​ನಲ್ಲಿ ಬಿರುಸಿನ ಬ್ಯಾಟಿಂಗ್​ ಮೂಲಕ ಅರ್ಧಶತಕ ಬಾರಿಸಿ ಗಮನಸೆಳೆದಿದ್ದ ದುಬೆ, ಟಿ20 ವಿಶ್ವಕಪ್​ನಲ್ಲಿ ರನ್​ ಗಳಿಸಲು ಪರದಾಟ ನಡೆಸುತ್ತಿದ್ದಾರೆ. ಹೀಗಾಗಿ ಇವರನ್ನು ಕೈ ಬಿಟ್ಟು ಹೊಡಿ-ಬಡಿ ಆಟಕ್ಕೆ ಹೆಸರುವಾಸಿ ಸಂಜು ಸ್ಯಾಮ್ಸನ್​ ಅಥವಾ ಯಶಸ್ವಿ ಜೈಸ್ವಾಲ್ ಅವರನ್ನು ಆಡಿಸುವ ಸಾಧ್ಯತೆ ಇದೆ.

ಮೂಲಗಳ ಪ್ರಕಾರ ಯಶಸ್ವಿ ಜೈಸ್ವಾಲ್​ಗೆ ಇಂದಿನ ಪಂದ್ಯದಲ್ಲಿ ಅವಕಾಶ ಸಿಗುವುದು ಖಚಿತ ಎನ್ನಲಾಗಿತ್ತಿದೆ. ನಾಯಕ ರೋಹಿತ್​ ಮತ್ತು ಕೊಹ್ಲಿ ಜೋಡಿ ಆಡಿದ ಎಲ್ಲ ಪಂದ್ಯಗಳಲ್ಲಿಯೂ ವಿಫಲರಾಗಿದ್ದಾರೆ. ಹೀಗಾಗಿ ಕೊಹ್ಲಿ ಬದಲು ರೋಹಿತ್​ ಮತ್ತು ಜೈಸ್ವಾಲ್​ ಆರಂಭಿಕರಾಗಿ ಆಡುವ ಸಾಧ್ಯತೆ ಇದೆ. ಜೈಸ್ವಾಲ್​ ವಿಂಡೀಸ್​ ನೆಲದಲ್ಲಿ ಉತ್ತಮ ಬ್ಯಾಟಿಂಗ್​ ದಾಖಲೆ ಕೂಡ ಹೊಂದಿದ್ದಾರೆ. ತಮ್ಮ ಚೊಚ್ಚಲ ಟೆಸ್ಟ್​ನಲ್ಲಿಯೇ ಶತಕ ಬಾರಿಸಿ ಮಿಂಚಿದ್ದರು. ಹಕವು ಮಾಜಿ ಆಟಗಾರರು ಕೂಡ ಕೊಹ್ಲಿಯನ್ನು ಆರಂಭಿಕನಾಗಿ ಆಡಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಜೈಸ್ವಾಲ್​ ಅವಕಾಶ ಪಡೆಯಬಹುದು.

ತಂಡ

ರೋಹಿತ್​ ಶರ್ಮ, ಯಶಸ್ವಿ ಜೈಸ್ವಾಲ್​, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಸೂರ್ಯಕುಮಾರ್‌ ಯಾದವ್, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಅಕ್ಷರ್‌ ಪಟೇಲ್, ಜಸ್​ಪ್ರೀತ್​ ಬುಮ್ರಾ, ಕುಲದೀಪ್​ ಯಾದವ್, ಅರ್ಶ್‌ದೀಪ್‌ ಸಿಂಗ್.