Sunday, 15th December 2024

ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ: ಆಪ್​ ಸಂಸದೆ ಸ್ವಾತಿ ಮಲಿವಾಲ್ ಕಿಡಿ

ವದೆಹಲಿ: ದೆಹಲಿ ನೀರು ಬಿಕ್ಕಟ್ಟಿನ ಹಿನ್ನೆಲೆ ಹರಿಯಾಣ ನೀರ ನೀಡಬೇಕೆಂದು ಆಗ್ರಹಿಸಿ ಆಪ್​ ಸಚಿವೆ ಅತಿಶಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಬಗ್ಗೆ ಮತ್ತೊಮ್ಮ ಆಪ್​ ನಾಯಕಿ, ಸಂಸದೆ ಸ್ವಾತಿ ಮಲಿವಾಲ್ ಕಿಡಿಕಾರಿದ್ದಾರೆ. ಉಪವಾಸ ಸತ್ಯಾಗ್ರಹವನ್ನು ಒಳ್ಳೆಯ ಮನಸ್ಸಿನಿಂದ ಮಾಡಬೇಕು ಎಂದು ತಿರುಗೇಟು ನೀಡಿದ್ದಾರೆ.

ಆಪ್​ ಮುಖ್ಯಸ್ಥ ಅರವಿಂದ್​ ಕೇಜ್ರಿವಾಲ್​​​​​​ ಜಾಮೀನಿಗಾಗಿ ಕಾನೂನು ಹೋರಾಟ ನಡೆಸುತ್ತಿದ್ದರೆ, ಇತ್ತ ಆಪ್​ ನಾಯಕಿಯರು ಸುದ್ದಿಯಲ್ಲಿದ್ದಾರೆ.

ಸಂಸದೆ ಸ್ವಾತಿ ಮಲಿವಾಲ್ ಮಾತಣಾಡಿ, ಗಾಂಧಿಜೀ ಅವರು ಉಪವಾಸದ ಪವಿತ್ರ ವಿಧಾನವನ್ನು ಸತ್ಯಾಗ್ರಹ ಎಂದು ಹೆಸರಿಸಿದ್ದಾರೆ. ಸತ್ಯಾಗ್ರಹವನ್ನು ಯಾವಾಗಲೂ ನಿಜವಾದ ಮತ್ತು ಶುದ್ಧ ಹೃದಯದಿಂದ ಮಾಡಲಾಗುತ್ತದೆ. ನಾನು ಎರಡು ಬಾರಿ ಉಪವಾಸ ಮಾಡಿದ್ದೇನೆ. ಒಮ್ಮೆ 10 ದಿನಗಳು ಮತ್ತು ಇನ್ನೊಮ್ಮೆ 13 ದಿನಗಳು ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದೇನೆ. ನನ್ನ ಉಪವಾಸದ ನಂತರ, ಮಕ್ಕಳ ಅತ್ಯಾಚಾರಿಗಳಿಗೆ ಮರಣದಂಡನೆ ವಿಧಿಸಬೇಕೆಂದು ದೇಶದಲ್ಲಿ ಕಾನೂನನ್ನು ರಚಿಸಲಾಯಿತು.

ಉಪವಾಸ ಸತ್ಯಾಗ್ರಹ ಮಾಡುವ ಶಕ್ತಿಯು ಅನೇಕ ವರ್ಷಗಳ ಕಾಲ ಹೋರಾಡುವುದರಿಂದ ಮಾತ್ರ ಸಿಗುತ್ತದೆ. ಇಡೀ ದಿನ ಇತರರ ಬಗ್ಗೆ ಸುಳ್ಳು ಮತ್ತು ಕೊಳಕು ಮಾತುಗಳನ್ನು ಆಡುವುದರಿಂದ ಅಲ್ಲ. ನಿಮ್ಮ ಆರೋಗ್ಯವು ಸುಧಾರಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಶೀಘ್ರದಲ್ಲೇ ನೀವು ದೆಹಲಿಯ ಜನರಿಗಾಗಿ ಕೆಲಸ ಮಾಡುತ್ತೀರಿ ಎಂದು ಬರೆದುಕೊಂಡಿದ್ದಾರೆ.

ಹರಿಯಾಣ ಸರ್ಕಾರವು ರಾಜಧಾನಿಗೆ ಸಾಕಷ್ಟು ನೀರು ಸರಬರಾಜು ಮಾಡುತ್ತಿದ್ದೇವೆ ಎಂದು ಹೇಳಿದೆ. ನಂತರ, ಅತಿಶಿ ಹರಿಯಾಣದಿಂದ ನೀರು ಬಿಡುವವರೆಗೆ ತಮ್ಮ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹವನ್ನು ಪ್ರಾರಂಭಿಸಿದರು.