ಮಾರು-ಕಟ್ಟೆ
ನಾರಾಯಣ ಯಾಜಿ
ಕೆಲದಿನಗಳ ಹಿಂದೆ Quant ಮ್ಯುಚುವಲ್ ನಿಧಿಯ ಕಂಪನಿಯ ಮೇಲೆ ಸೆಬಿ ದಾಳಿ ಮಾಡಿತು ಎನ್ನುವ ಸುದ್ದಿ ಬಂದಿದ್ದೇ ತಡ ಒಮ್ಮೆಲೇ ಮಾರುಕಟ್ಟೆ ಯಲ್ಲಿ ಹೇರಾಪೇರಿ ಪ್ರಾರಂಭವಾಯಿತು. ಕೆಲವೊಂದು ಷೇರುಗಳ ಬೆಲೆಯಲ್ಲಿ ಏರಿಳಿತ ಪ್ರಾರಂಭವಾಗಿ ದಿನದ ಕೊನೆಯಲ್ಲಿ ಏನೂ ಆಗಿಲ್ಲವೇನೋ ಎನ್ನುವಂತೆ ಸೂಚ್ಯಂಕ ತಣ್ಣಗೆ ೭೭,೩೪೧.೦೮ ಮಟ್ಟಕ್ಕೆ ಏರಿತು. ಆದರೆ ಇದಾದ ನಂತರ ಇಷ್ಟು ದಿನ ಹೂಡಿಕೆಗೆ ಉತ್ತಮ ಫಂಡ್ ಎಂದರೆ ಅದು ಕ್ಠಿZಠಿ
ಎಂದು ಹೇಳುವ ಪರಿಣತರೆಲ್ಲರಿಗೆ ಇದ್ದಕ್ಕಿದ್ದಂತೆ ದೋಷಗಳೇ ಕಾಣಿಸತೊಡಗಿದವು.
ಇದೊಂಥರಾ ಚುನಾವಣಾ ವಿಶ್ಲೇಷಣೆಯ ಹಾಗೆ ತಮಾಷೆಯಾಗಿತ್ತು. ಇಷ್ಟು ದಿವಸ ಕೇವಲ ಒಳಮನೆಯ ವ್ಯವಹಾರ (ಐoಜಿbಛಿ SZbಛ್ಟಿ) ಎನ್ನುವ ಶಬ್ದ
ಹಿಂದೆ ಸರಿದು ಹೊಸತಾದ ಶಬ್ದ ಊಟ್ಞಠಿ ಜ್ಞಿಜ ಎನ್ನುವದು ಮಾರುಕಟ್ಟೆಯಲ್ಲಿ ಹರಿದಾಡತೊಡಗಿದವು. ಅಷ್ಟಕ್ಕೂ ಷೇರು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಕ್ವಾಂಟ್ ಪರಸ್ಪರ ನಿಧಿಯ ಮೇಲೆ ಸೆಬಿ ದಾಳಿಮಾಡಿದ ಕಾರಣವನ್ನು ವಿಶ್ಲೇಷಿಸೋಣ.
ಭಾರತದಲ್ಲಿ ೧೯೯೨ ರ ತನಕ ಇದ್ದಿದ್ದು ಕೇವಲ ಖಿSಐ ಮ್ಯುಚುವಲ್ ಫಂಡ್ ಮಾತ್ರ. ನಂತರ ಎಲ್ಲ ರಂಗದಲ್ಲಿ ಆದ ಬದಲಾವಣೆಯ ಹಾಗೆ ಇಲ್ಲಿಯೂ ಖಾಸಗಿ ಮುಚುವಲ್ ಫಂಡ್ಗಳು ಬಂದವು. ಇಂದು ಒಟ್ಟೂ ೪೪ ಫಂಡುಗಳು ವಿವಿಧ ರೀತಿಯ ಸುಮಾರು ೨೫೦೦ ಯೋಜನೆಗಳಲ್ಲಿ ಜನಸಾಮಾನ್ಯರ ಹಣವನ್ನು ವ್ಯವಹರಿಸುತ್ತಿವೆ. ಕೆಲವೊಂದಿಷ್ಟು ಕಂಪನಿಗಳು ಉಸಿರಾಡಲಾಗದೆ ಬೇರೆ ಕೆಲ ಕಂಪನಿಗಳ ಜತೆಗೆ ವಿಲೀನವಾಗಿವೆ. ಈ ಫಂಡ್ಗಳು ಒಟ್ಟೂ ಸೇರಿ ನಿರ್ವಹಿಸುತ್ತಿರುವ ಹಣದ ಮೌಲ್ಯ ೫೮.೬೦ ಲಕ್ಷಕೋಟಿ ರುಪಾಯಿಗಳಷ್ಟು!
ಇತ್ತೀಚಿನ ದಿನಗಳಲ್ಲಿ ಎಲ್ಲರ ಬಾಯಲ್ಲಿಯೂ ಹಣವನ್ನು ಬ್ಯಾಂಕಿನಲ್ಲಿ ಇಡುವುದಕ್ಕಿಂತ ಮ್ಯೂಚುವಲ್ ಫಂಡ್ಗಳಲ್ಲಿ ಇಡುವುದು ಒಳ್ಳೆಯದು ಎನ್ನುವ ಮಾರುಕಟ್ಟೆಯ ತಂತ್ರವನ್ನು ಚೆನ್ನಾಗಿ ಹರಡಲಾಗುತ್ತಿದೆ. ಭಾರತದ ಅರ್ಥವ್ಯವಸ್ಥೆ ಉಳಿತಾಯ ಪ್ರಧಾನವಾದದ್ದು. ಇತ್ತೀಚಿನ ದಿನಗಳಲ್ಲಿ ಬ್ಯಾಂಕಿನಲ್ಲಿ
ಬಡ್ಡಿ ಕಡಿಮೆ ಇರುವ ಕಾರಣ ಷೇರುಮಾರುಕಟ್ಟೆಯಲ್ಲಿ ಹೂಡಿಕೆ ಹೆಚ್ಚಾಗುತ್ತಿದೆ. ಈ ದಿಸೆಯಲ್ಲಿ ಇರುವ ವಿಧಾನಗಳು ಒಂದೋ ಷೇರು ಮಾರುಕಟ್ಟೆ ಯಲ್ಲಿ ನೇರವಾಗಿ ಹೂಡಿಕೆ ಮಾಡುವುದು ಇಲ್ಲವೇ ಅದನ್ನು ಮ್ಯೂಚುವಲ್ ಫಂಡ್ಗಳಲ್ಲಿ ತೊಡಗಿಸುವುದು. ಒಂದು ರೀತಿಯ ಹುಚ್ಚು ಆವೇಗದಲ್ಲಿ ಹಣ ಈ ರಂಗದಲ್ಲಿ ಹರಿಯುತ್ತಿದೆ.
ಹಾಗಾಗಿ ೨೦೧೭ ರಲ್ಲಿ ಪ್ರಾರಂಭವಾದ ಕ್ವಾಂಟ್ ಮ್ಯುಚುವಲ್ ಫಂಡ್ ೨೦೧೯ರಲ್ಲಿ ೧೦೦ಕೋಟಿ ರುಪಾಯಿಗಳಿಂದ ಶುರುವಾಗಿ, ಇಂದು ೯೩,೦೦೦ ಕೋಟಿ ರುಪಾಯಿಗಳಷ್ಟು ಸಂಪತ್ತನ್ನು ನಿರ್ವಹಿಸುತ್ತಿದೆ. ದೇಶದ ಇಪ್ಪತ್ತನೇ ಅತಿದೊಡ್ಡ ಕಂಪನಿ ಇದಾಗಿದೆ. ಹೀಗೆ ಅತ್ಯಂತ ವೇಗವಾಗಿ ಬೇಳೆದ ಹಿನ್ನೆಲೆ ಯನ್ನು ಗಮನಿಸಿದಾಗ ಕೆಲವೊಂದಿಷ್ಟು ಸಂಶಯಗಳು ಸಹಜವಾಗಿಯೇ ಮಾರುಕಟ್ಟೆಯಲ್ಲಿ ಹರಿದಾಡುತ್ತಿದ್ದವು. ಅದರಲ್ಲಿ ಈ ಕಂಪನಿಯ ಹೂಡಿಕೆಯ ವೈಖರಿ, ಯಾವ್ಯಾವದೋ ಹೆಸರಿಲ್ಲದ ಕಂಪನಿಯ ಷೇರುಗಳಲ್ಲಿ ಇದು ಹೂಡಿಕೆಯನ್ನು ಮಾಡುತ್ತಿತ್ತು ಎನ್ನುವ ಗಂಭೀರವಾದ ಆಪಾದನೆ ಕೇಳಿಬರುತ್ತಿತ್ತು.
ಇದೀಗ ಬಂದ ವರದಿಯಂತೆ ಸುಮಾರು ಹದಿನಾಲ್ಕು ಕಂಪನಿಗಳಲ್ಲಿ ಉದಾ. Century Enka, Rossel India, Best Agro Life ಮೊದಲಾದ ಕಂಪನಿಗಳಲ್ಲಿ ಇನ್ನೂ ಬೇರೆ ಯಾರೂ ಹೂಡಿಕೆಯನ್ನು ಮಾಡಿಲ್ಲ! ಹೀಗೆ ಹೂಡಿಕೆಯನ್ನು ಮಾಡಿದ ಷೇರುಗಳು ಸುಮಾರು ೩೦% ರಿಂದ ೫೮% ದ ವರೆಗೂ ಏರಿಕೆಯನ್ನು ಕಂಡಿವೆ. ಇದರಿಂದ ಹೂಡಿಕೆದಾರರಿಗೂ ಖುಷಿಯಾಗಿ ಕ್ವಾಂಟ್ ಎಂದರೆ ದುಡ್ಡಿನ ಮಳೆ ಎನ್ನುವ ವಾತಾವರಣ ಸೃಷ್ಟಿಯಾಗಿತ್ತು. ಇದರ ಸ್ಥಾಪಕ ಸಂದೀಪ ಟಂಡನ್ ಈಚೆಗೆ ಕೆಲದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಹರ್ಷದ್ ಮೆಹ್ತಾನ ಹಗರಣದ ಹೊತ್ತಿಗೆ ನಾನು ಕಾಲೇಜಿಗೆ
ಹೋಗುತ್ತಿದೆ.
ಆಗಲೇ ನನಗೆ ಮಾರುಕಟ್ಟೆಯ ಹೂಡಿಕೆಯ ಕುರಿತು ಆಸಕ್ತಿ ಮೂಡಿತ್ತು. ಏನೋ ಸರಿ ಇಲ್ಲ ಎಂದು ತಿಳಿದ ತನ್ನ ತಂದೆಯ ಮತ್ತು ಚಿಕ್ಕಪ್ಪನ ಷೇರು ಗಳನ್ನು ಕೂಡಲೇ ಮಾರಾಟಮಾಡುವಂತೆ ತಿಳಿಸಿದೆ. ನಂತರ ಒಮ್ಮೆಲೇ ಮಾರುಕಟ್ಟೆ ಸುಮಾರು ೨೦% ಏರಿ ಒಮ್ಮೆಲೇ ಪತಾಳಕ್ಕೆ ಕುಸಿಯಿತು. ಅದಾದ ನಂತರ ನನ್ನ ತಂದೆ ಮತ್ತು ಚಿಕ್ಕಪ್ಪ ತಮ್ಮ ಹಣವನ್ನು ನನ್ನ ಕೈಗೆ ಕೊಟ್ಟು ನಿರ್ವಹಿಸಲು ಹೇಳಿದರು. ಅದಾದ ಮೇಲೆ ನಾನು ಹಿಂದೆ ನೋಡಿಲ್ಲ ಎಂದಿದ್ದ. ಅಲ್ಲಿಂದ ಪ್ರಾರಂಭವಾದ ಆತನ ಹೂಡಿಕೆ ನಂತರ ಜನಸಾಮಾನ್ಯರ ಜೇಬಿನವರೆಗೆ ತಲುಪಿದ್ದು ವರ್ತಮಾನದ ಸತ್ಯ. ಈಗ ಸೆಬಿ ಕ್ವಾಂಟ್ ಮ್ಯೂಚುವಲ್ ಫಂಡ್ ತನಿಖೆಗೆ ಮುಂದಾಗಿರುವುದು ಏಕೆಂದರೆ, ಈ ಸಂಸ್ಥೆ ಅಥವಾ ಇದಕ್ಕೆ ಸಂಬಂಧಿಸಿದ ವ್ಯಕ್ತಿಗಳು ತಮ್ಮ ವೈಯಕ್ತಿಕ ಹಿತಾಸಕ್ತಿ ಗೋಸ್ಕರ ಸೆಬಿಯ ಕಟ್ಟಳೆಳಗನ್ನು ಮೀರಿ, ಕಾನೂನು ಬಾಹಿರವಾಗಿ ಮಾರುಕಟ್ಟೆಯಲ್ಲಿ ವ್ಯವಹಾರವನ್ನು ಮಾಡಿದ್ದಾರೆ, ಅದರ ಜತೆಗೆ ಮುಂದೋಡುವಿಕೆ ಮಾಡಿದ್ದಾರೆ ಎನ್ನುವ ಗಂಭೀರ ಆರೋಪ ಈ ಕಂಪನಿಯ ಮೇಲೆ ಬಂದಿದೆ.
ಈ ಪರಸ್ಪರ ನಿಧಿಗಳು ಅಥವಾ ಮ್ಯೂಚುವಲ್ ಫಂಡಿನವರು ಹೋಡಿಕೆದಾರರಿಂದ ಹಣವನ್ನು ಸಂಗ್ರಹಿಸುತ್ತಾರೆ. ಅದನ್ನು NFO& New Fund Offer ಎನ್ನುತ್ತಾರೆ. ಉದಾಹರಣೆಗೆ ನಿಫ್ಟಿ -೫೦ ರಲ್ಲಿ ನೋಂದಣಿಯಾದ ಷೇರುಗಳ ಮೇಲೆ ಹಣ ಹೂಡುತ್ತೇವೆ ಎನ್ನುವ ಯೋಜನೆಗೆ ಹೂಡಿಕೆದಾರರಿಂದ ಹಣಸಂಗ್ರಹಿಸುತ್ತಾರೆ ಎಂದುಕೊಳ್ಳೋಣ. ಹೀಗೆ ಸಂಗ್ರಹಿಸಿದ ಹಣವನ್ನು ಸ್ಟಾಕ್ ಎPಚೇಂಜ್ನಲ್ಲಿ ಷೇರು ಖರೀದಿ ಮತ್ತು ಮಾರಾಟಕ್ಕಾಗಿ ಉಪಯೋಗಿಸು ತ್ತಾರೆ.
ಯಾವ ಯಾವ ಷೇರುಗಳನ್ನು ಕೊಳ್ಳಬೇಕೆಂದು ತೀರ್ಮಾನಿಸಲು ನಿಪುಣರಾದ ಆರ್ಥಿಕ ತಜ್ಞರು ಅಲ್ಲಿ ಇರುತ್ತಾರೆ. ಪ್ರತೀ ಕಂಪನಿಯ ಏರಿಳಿತ, ಮಾರು ಕಟ್ಟೆಯಲ್ಲಿನ ಅದರ ಪ್ರಭಾವ, ಆ ಕಂಪನಿಯ ಘನತೆ ಇವೆಲ್ಲವುದನ್ನು ನೋಡಿ ವ್ಯವಹಾರಕ್ಕೆ ಇಳಿಯುತ್ತಾರೆ. ಉದಾಹರಣೆಗೆ ಎಲ್ಲಾ ಎನ್ನುವ
ಕಂಪನಿಗೆ ಯಾವುದೋ ಒಂದು ಕಾಂಟ್ರಾಕ್ಟ್ ಸಿಕ್ಕುವ ಹಂತ ದಲ್ಲಿದೆ. ಅದರಿಂದ ಅದರ ವ್ಯವಹಾರ ಇನ್ನು ಕೆಲವೇ ವರ್ಷಗಳಲ್ಲಿ ದುಪ್ಪಟ್ಟಾಗಲಿದೆ. ಲಾಭದ ಪ್ರಮಾಣವೂ ಗಣನೀಯವಾಗಿ ಹೆಚ್ಚಲಿದೆ.
ಅವುಗಳನ್ನು ಖರೀದಿಸಲಿ ಇದೀಗ ಸರಿಯಾದ ಸಮಯ ಎನ್ನುವುದನ್ನು ಈ ತಂಡ ನಿರ್ಧರಿಸುತ್ತದೆ. ವಿಶ್ಲೇಷಣೆಗೆ ಬೇಕಾದ ಮಾಹಿತಿಯನ್ನು ಏಐ ತಂತ್ರಜ್ಞಾನ ಮತ್ತಿತರ ಅತ್ಯುತ್ತಮ ಸಾಫ್ಟ್ ವೇರ್ ಉಪಯೋಗಿಸುತ್ತಾರೆ. ಮ್ಯೂಚುವಲ್ ಫಂಡ್ ನಮ್ಮ ನಿಮ್ಮ ಹಾಗೇ ನೂರು ಅಥವಾ ಸಾವಿರದ ಲೆಕ್ಕದಲ್ಲಿ ಷೇರುಗಳನ್ನು ಖರೀದಿ ಮಾಡುವುದಿಲ್ಲ. ಇದರಲ್ಲಿ ಹತ್ತು ಇಪ್ಪತ್ತು ಕೋಟಿಗಳಿಗಿಂತಲೂ ಮಿಗಿಲಾದ ವ್ಯವಹಾರವನ್ನು ಮಾಡುತ್ತವೆ. ವಿಷಯ ತುಂಬಾ ಗೌಪ್ಯವಾಗಿರಬೇಕು. ಹೊರಗಡೆ ಯಾವ ಷೇರುಗಳನ್ನು ವ್ಯವಹರಿಸುತ್ತೇವೆ ಎಂದು ಗೊತ್ತಾಗಬಾರದು. ಈ ಗುಟ್ಟು ತಿಳಿದ ಅವರ ಒಬ್ಬನೋ ಅಥವಾ ಇನ್ನಿತರರೋ ಸೇರಿ ಆ ಫಂಡ್ ಖರೀದಿ ಮಾಡಿವುದಕ್ಕಿಂತ ಮೊದಲೇ ತಾವು ವೈಯಕ್ತಿಕವಾಗಿ ಖರೀದಿ ಮಾಡಿಬಿಡುತ್ತಾರೆ. ಯಾವಾಗ ಈ ಮ್ಯೂಚುವಲ್ ಫಂಡ್ ಆ ಶೇರನ್ನು ಖರೀದಿ ಮಾಡುತ್ತದೆಯೋ ಆಗ ಸಹಜವಾಗಿ ಆ ಶೇರಿನ ಮಾರುಕಟ್ಟೆಯ ಬೆಲೆ ಜಾಸ್ತಿಯಾಗುತ್ತದೆ.
ಮೊದಲೇ ಮುಂದೋಡಿನಲ್ಲಿ ಖರೀದಿಸಿದವ ಈಗ ಅದನ್ನು ಮಾರಾಟ ಮಾಡುತ್ತಾನೆ. ಅದರಿಂದ ಅವನಿಗೆ ಹೇರಳವಾದ ಲಾಭದೊರೆಯುತ್ತದೆ. ಅದೇರೀತಿ ಫಂಡ್ ಒಂದು ತನ್ನಲ್ಲಿದ್ದ ಬಿ ಶೇರನ್ನು ಮಾರಾಟಮಾಡಬೇಕೆಂದು ನಿರ್ಧರಿಸಿದರೆ ಅದೇ ವ್ಯಕ್ತಿ ಅಥವಾ ಗುಂಪು ಕಂಪನಿ ಮಾರಾಟಮಾಡುವ ಮೊದಲೇ
ತಮ್ಮಲ್ಲಿರುವ ಶೇರನ್ನು ಮಾರಿಬಿಡುತ್ತಾರೆ. ಮ್ಯೂಚುವಲ್ ಫಂಡ್ ಯಾವುದೇ ಶೇರನ್ನು ಖರೀದಿಸಲಿ ಅಥವಾ ಮಾರಾಟಮಾಡಲಿ, ಅದರ ಮೌಲ್ಯದಲ್ಲಿ ಏರಿಳಿತವಾಗುತ್ತದೆ. ಫಂಡ್ಗಳಿಸುವ ಲಾಭಾಂಶ ಕಡಿಮೆಯಾಗುತ್ತದೆ. ಇದನ್ನೇ ಸ್ಟಾಕ್ ಮಾರುಕಟ್ಟೆಯ ಭಾಷೆಯಲ್ಲಿ -ಂಟ್ ರನ್ನಿಂಗ್ ಎನ್ನುತ್ತಾರೆ.
ಇದರ ಪರಿಣಾಮ? ವೆಚ್ಚದ ಮೇಲೆ ಪರಿಣಾಮ ಮತ್ತು ಈ ನಿಽಗಳ ನಿವ್ವಳ ಆಸ್ತಿಯ ಮೌಲ್ಯ ಕಡಿಮೆಯಾಗುತ್ತದೆ. ಲಕ್ಷಾಂತರ ಸಣ್ಣ ಹೂಡಿಕೆದಾರರು ತಮ್ಮ ಹಣವನ್ನು ಇಂತಹ ಪರಸ್ಪರ ನಿಧಿಗಳಲ್ಲಿ ತೊಡಗಿಸುತ್ತಾರೆ. ಫಂಡುಗಳು ಹೂಡಿಕೆ ದಾರರಿಂದ ನಿರ್ವಹಣಾ ವೆಚ್ಚವನ್ನು ಪಡೆದುಕೊಳ್ಳುತ್ತವೆ.
ಅವುಗಳ ಖರೀದಿಯ/ಮಾರಾಟದ ಏರಿಳಿತದಿಂದ ಅವರಿಗೆ ಸಿಗಬೇಕಾದ ನಿವ್ವಳ ಮೌಲ್ಯ ಕಡಿಮೆಯಾಗುತ್ತದೆ.
ಇಲ್ಲಿ ಪರಸ್ಪರ ನಿಧಿಗಳು ಹಣದ ಮಾಲೀಕರಲ್ಲ, ಅವು ಹೂಡಿಕೆ ದಾರರ ಟ್ರಸ್ಟಿಗಳು. ನಮ್ಮ ನಿಮ್ಮಂತಹ ಜನಸಾಮಾನ್ಯರಲ್ಲಿ ಸಂಪತ್ತನ್ನು ಹೆಚ್ಚಿಸಿ ಕೊಡುತ್ತೇವೆ ಎನ್ನುವ ಭರವಸೆಯೊಂದಿಗೆ ಇದರಲ್ಲಿ ಹೂಡಿಕೆಯನ್ನು ಮಾಡಿರುತ್ತಾರೆ. ಇದೆ ಮುಂದುವರಿದು ಅಪರಾತಪರಾ ಆದಲ್ಲಿ ಮುಂದೊಂದು ದಿನ ಅನೇಕ ಹಣಕಾಸು ಸಂಸ್ಥೆಗಳು ಠೇವಣಿದಾರರಿಗೆ ವಂಚಿಸಿದಂತೆ ಇಲ್ಲಿಯೂ ಆಗಬಹುದು. ಇಂತಹ ವ್ಯವಹಾರ ಅಕ್ರಮ ಮತ್ತು ಕಾನೂನೂ ಬಾಹಿರ. ಈ ಎಲ್ಲ ಆಪಾದನೆಗಳೂ ಕ್ವಾಂಟ್ ಕಂಪನಿಯ ಮೇಲಿದೆ. ಹಾಗಾಗಿ ಸೆಬಿ ಇದೀಗ ತನ್ನ ತನಿಖೆಯನ್ನು ಪ್ರಾರಂಭಿಸಿದೆ. ಇಂತಹ ವಾಮಮಾರ್ಗವನ್ನು
ಪ್ರಾರಂಭದಲ್ಲಿಯೇ ಚಿವುಟಿಹಾಕದೇ ಇದ್ದರೆ ಮತ್ತೊಂದು ದೊಡ್ಡ ಆರ್ಥಿಕ ಹಗರಣಗಳಿಗೆ ನಾಂದಿ ಹಾಡಬಹುದು.
(ಲೇಖಕರು: ಹವ್ಯಾಸಿ ಬರಹಗಾರರು)