~ಉತ್ಕೃಷ್ಟವಾದ ಪ್ಲಾಟಿನಮ್ ಲವ್ ಬ್ಯಾಂಡ್‌ಗಳೊಂದಿಗೆ ನಿಮ್ಮ ಸಂಬಂಧವನ್ನು ಸಂಭ್ರಮಿಸಿ ~
ಬೆಂಗಳೂರು: ಪ್ರತಿಯೊಂದು ಪ್ರೇಮಕತೆಯೂ ವಿಶಿಷ್ಟವಾಗಿರುತ್ತದೆ. ಪ್ರತೀ ಕತೆಯೂ ಭಾವನೆಗಳ ಮತ್ತು ನೆನಪುಗಳನ್ನು ಒಳಗೊಂಡಿರುತ್ತವೆ. ಹೀಗೆ ಪ್ರೇಮಕತೆಯ ಭಾಗವಾಗಿರುವ ಪ್ರತಿಯೊಬ್ಬರು ಕೂಡ ನಿಮ್ಮ ಸಂಬಂಧದ ಬಂಧವನ್ನು ಸಂಭ್ರಮಾಚರಿಸಲು ವಿಶೇಷವಾದ ಜೋಡಿ ಪ್ಲಾಟಿನಮ್ ಲವ್ ಬ್ಯಾಂಡ್ ಗಳನ್ನು ನಿಮ್ಮದಾಗಿಸಿಕೊಳ್ಳಬಹುದು.
ವಿಶಿಷ್ಟವಾದ ಪ್ರೇಮಕಥೆಯನ್ನು ಆಚರಿಸಲು ಪ್ರೀತಿಯ ಲೋಹವಾದ ಪ್ಲಾಟಿನಮ್ ಗಿಂತ ಉತ್ತಮವಾದ ಮಾರ್ಗ ಯಾವುದಿದೆ? 95% ಶುದ್ಧ ಮತ್ತು ಅಪರೂಪದ ಪ್ಲಾಟಿನಂನಲ್ಲಿ ಸಿದ್ಧಗೊಳಿಸಿದ ಪ್ಲಾಟಿನಂ ಲವ್ ಬ್ಯಾಂಡ್‌ಗಳು ಪ್ರೀತಿಯ ಸಂಕೇತವಾಗಿದೆ. ವೈಯಕ್ತಿಕತೆಯನ್ನು ಗೌರವಿಸುವುದು, ಜವಾಬ್ದಾರಿಗಳನ್ನು ಸಮಾನವಾಗಿ ಹಂಚಿಕೊಳ್ಳುವುದು, ಸಾಂಪ್ರದಾಯಿಕ ಪಾತ್ರಗಳನ್ನು ಮೀರುವುದು ಇತ್ಯಾದಿ ಆಧುನಿಕ ಕಾಲದ ಮೌಲ್ಯಗಳನ್ನು ಪ್ಲಾಟಿನಮ್ ಸಂಕೇತಿಸುತ್ತದೆ. ‘ಮೆಟಲ್ ಆಫ್ ಲವ್’ ಎಂದು ಕರೆಯಲ್ಪಡುವ ಪ್ಲಾಟಿನಮ್ ಯುವ ಪೀಳಿಗೆಯ ಪ್ರೀತಿ ಮತ್ತು ಒಗ್ಗಟ್ಟನ್ನು ಸಾರುತ್ತದೆ.
ಈ ಸೀಸನ್ ನಲ್ಲಿ ಪ್ಲಾಟಿನಮ್ ಲವ್ ಬ್ಯಾಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ ಮತ್ತು ಟ್ರೆಂಡ್ ಆಗಿವೆ. ತನ್ನ ಅತ್ಯಪೂರ್ವ ಸೌಂದರ್ಯ ಮತ್ತು ಅದ್ಭುತ ಬಾಳಿಕೆಗೆ ಹೆಸರುವಾಸಿಯಾಗಿರುವ ಪ್ಲಾಟಿನಮ್ ಬ್ಯಾಂಡ್ ಗಳು ಕಾಲಾತೀತ ಸೊಬಗು ಮತ್ತು ಸಮಕಾಲೀನ ಶೈಲಿಯನ್ನು ಬಯಸುವ ದಂಪತಿಗಳಿಗೆ ಸೂಕ್ತವಾಗಿದೆ. ಪ್ಲಾಟಿನಮ್ ಲವ್ ಬ್ಯಾಂಡ್‌ಗಳನ್ನು ತಮ್ಮದಾಗಿಸಿಕೊಳ್ಳುವುದು ಎಂದರೆ ಸಂಪ್ರದಾಯ ಮತ್ತು ಆಧುನಿಕತೆಯ ಮಿಶ್ರಣವನ್ನು ಬದುಕಲ್ಲಿ ಅಳವಡಿಸಿಕೊಳ್ಳುವುದು ಎಂದರ್ಥ.
ಟ್ರೆಂಡ್ ಆಗಿರುವ ಪ್ಲಾಟಿನಂ ನಿಶ್ಚಿತಾರ್ಥದ ಉಂಗುರಗಳ ಕುರಿತು ಮಾತನಾಡಿದ ಪ್ಲಾಟಿನಂ ಗಿಲ್ಡ್ ಇಂಟರ್‌ನ್ಯಾಶನಲ್ (ಪಿಜಿಐ)- ಇಂಡಿಯಾ ಬಿಸಿನೆಸ್ ಡೈರೆಕ್ಟರ್ ಪಲ್ಲವಿ ಶರ್ಮಾ, “ಜಾಗತಿಕ ಟ್ರೆಂಡ್ ಗಳಿಂದ ಪ್ರಭಾವಿತಗೊಂಡು ಇದೀಗ ನಿಶ್ಚಿತಾರ್ಥ ರಿಂಗ್ ಗಳಲ್ಲಿ ಪ್ಲಾಟಿನಂ ಲವ್ ಬ್ಯಾಂಡ್‌ಗಳನ್ನು ಬಳಸುವುದು ಜನಪ್ರಿಯವಾಗಿದೆ. ಸೌಂದರ್ಯ, ಸಾಂಪ್ರದಾಯಿಕತೆ ಮತ್ತು ಸಮಕಾಲೀನ ವಿನ್ಯಾಸಗಳನ್ನು ಸಂಯೋಜಿಸುವ ‘ಮಾಡರ್ನ್ ವಿಂಟೇಜ್’ ಉತ್ಪನ್ನಗಳು ಟ್ರೆಂಡ್ ಆಗಿವೆ. ನಿರಂತರ ಪ್ರೀತಿಯನ್ನು ಸಂಕೇತಿಸುವ ‘ಥ್ರೀ ಸ್ಟೋನ್’ ಅಥವಾ ‘ಟ್ರಿನಿಟಿ’ ಉಂಗುರಗಳು ಮತ್ತು ಸೆಲೆಬ್ರಿಟಿಗಳು ಮೆಚ್ಚುವ ಎರಡು ರತ್ನಗಳಿರುವ ‘ಟೊಯ್ ಎಟ್ ಮೊಯಿ’ ಶೈಲಿ ಜನಪ್ರಿಯಗೊಳ್ಳುತ್ತಿವೆ. ಜೋಡಿಗಳು ಈಗ ವಜ್ರಗಳನ್ನು ಮೀರಿ ರತ್ನಗಳನ್ನು ಆರಿಸಿಕೊಳ್ಳು ವತಿದ್ದಾರೆ” ಎಂದು ಹೇಳಿದರು.
ನೀವು ಕ್ಲಾಸಿಕ್ ಆಗಿರುವ, ವಿಶಿಷ್ಟ ಅಥವಾ ಸಮಕಾಲೀನ ವಿನ್ಯಾಸಗಳನ್ನು ಬಯಸುತ್ತೀರಾ, ಹಾಗಿದ್ದರೆ ಪಿಜಿಐ ಇಂಡಿಯಾದ ಪ್ಲಾಟಿನಂ ಲವ್ ಬ್ಯಾಂಡ್‌ಗಳು ನಿಮಗೆ ಸೂಕ್ತ ಆಯ್ಕೆಯಾಗಿವೆ. ಭಾರತದಲ್ಲಿನ ಪ್ರಮುಖ ರಿಟೇಲ್ ಆಭರಣ ಅಂಗಡಿಗಳಲ್ಲಿ ಈ ಪ್ಲಾಟಿನಮ್ ಬ್ಯಾಂಡ್ ಗಳು ಲಭ್ಯವಿದೆ.