Friday, 22nd November 2024

ರಾಜಲಬಂಡಾ ಮೊರಾರ್ಜಿ ವಸತಿ ನಿಲಯದಲ್ಲಿ ವಿಷಪೂರಿತ ಆಹಾರ ಸೇವನೆ ಮೂವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

ರಾಯಚೂರು : ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿರುವ ಕರ್ನಾಟಕ ಸರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಮೊರಾರ್ಜಿ ದೇಸಾಯಿ ವಸತಿ ಶಾಲೆ (ಹಿಂ.ವ.: 1) ರಾಜಲಬಂಡಾ ವಸತಿ ನಿಯಮದಲ್ಲಿ ಶುಕ್ರವಾರ ರಾತ್ರಿ ನೀಡಿದ ಊಟದಲ್ಲಿ ಬ್ಲೀಚಿಂಗ್ ಪೌಂಡರ್ ಮಿಶ್ರಿತ ಆಹಾರ ಸೇವನೆ ಮಾಡಿ ಕನಿಷ್ಠ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಅಸ್ವಸ್ಥ ವಾಗಿ ಇಬ್ಬರಿಗೆ ಸುಬ್ರಹ್ಮಣ್ಯ ಮತ್ತು ಪೃಥ್ವಿ ರಾಜ್ ಎಂಬುವ ವಿದ್ಯಾರ್ಥಿಗಳಿಗೆ ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆ ಉಂಟಾಗಿ ವಿದ್ಯಾರ್ಥಿಗಳನ್ನು ಜಿಲ್ಲಾ ರಿಮ್ಸ್ ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ.

ಇತ್ತೀಚಿನ ದಿನಗಳಲ್ಲಿ ರಾಜ್ಯದಲ್ಲಿ ಡೇಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಕಾರಣದಿಂದ ವಸತಿ ನಿಲಯಗಳಲ್ಲಿ ನೀರು ತುಂಬಿಸುವ ಘಟಕಗಳು ಸ್ವಚ್ಚತಾ ಮಾಡುವಂತೆ ಅಧಿಕಾರಿಗಳ ಆದೇಶವನ್ನು ಪಾಲಿಸಬೇಕು ಎನ್ನುವ ಉದ್ದೇಶದಿಂದ ನೆಪ ಮಾತ್ರಕ್ಕೆ ಬ್ಲೀಚಿಂಗ್ ಪೌಡರ್ ಹಾಕಿ ಸ್ವಚ್ಚತಾ ಮಾಡಿ ಅದೇ ನೀರಿ ನಲ್ಲಿ ಅಕ್ಕಿಯನ್ನು ಬೇಕಾಬಿಟ್ಟಿಯಾಗಿ ಸ್ವಚ್ಚತೆ ಆಹಾರ ನೀಡಿರುವ ಕಾರಣದಿಂದ ಮಕ್ಕಳಿಗೆ ವಾಂತಿ ಭೇದಿ, ತಲೆಸುತ್ತು, ಮೈಕೈ ಬೇನೆ ಸೇರಿದಂತೆ ಅನೇಕ ರೀತಿಯ ರೋಗ ಲಕ್ಷಣಗಳು ಕಂಡು ಬಂದಿರುವ ಕಾರಣದಿಂದಾಗಿ ಸ್ಥಳೀಯ ತಾಯಿ ಮಕ್ಕಳ ಆಸ್ಪತ್ರೆ ದಾಖಲು ಮಾಡಿದ್ದಾರೆ.