Saturday, 23rd November 2024

ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ರಾಜೀನಾಮೆ

ಪ್ಯಾರಿಸ್: ಫ್ರಾನ್ಸ್ ಪ್ರಧಾನಿ ಗೇಬ್ರಿಯಲ್ ಅಟ್ಟಲ್ ಸೋಮವಾರ ತಮ್ಮ ರಾಜೀನಾಮೆಯನ್ನು ಘೋಷಿಸಿದ್ದು, ಉತ್ತರಾಧಿಕಾರಿ ನೇಮಕ ಮಾಡುವವರೆಗೂ ತಮ್ಮ ಕರ್ತವ್ಯಗಳನ್ನು ಮುಂದುವರಿಸುವ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಮತದಾನದ ಆರಂಭಿಕ ಅಂದಾಜಿನ ಪ್ರಕಾರ ಎನ್‌ಎಫ್ಪಿ ಬಹುತ್ವವನ್ನು ಗಳಿಸಿದೆ. ಆದರೆ ಸಂಪೂರ್ಣ ಬಹುಮತದ ಕೊರತೆಯಿದೆ, ಮ್ಯಾಕ್ರನ್ ಅವರ ಆಡಳಿತ ಪಕ್ಷವು ಎರಡನೇ ಸ್ಥಾನದಲ್ಲಿದೆ ಮತ್ತು ಬಲಪಂಥೀಯ ನ್ಯಾಷನಲ್ ರ್ಯಾಲಿ ಮೂರನೇ ಸ್ಥಾನದಲ್ಲಿದೆ.

ಆದಾಗ್ಯೂ, ಜು.26 ರಂದು ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗಲಿರುವುದರಿಂದ ತಮ್ಮ ರಾಜೀನಾಮೆ ತಿರಸ್ಕರಿಸಿದರೆ, “ಕರ್ತವ್ಯದ ಬೇಡಿಕೆಗಳಿರು ವವರೆಗೂ” ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ ಎಂದು ಅಟ್ಟಾಲ್ ಹೇಳಿದ್ದಾರೆ.